ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಸಮಾವೇಶ ಆರಂಭವಾಗಿದೆ. ಕೊರೊನಾ ವೈರಸ್ ಹಾನಿಯ ದೃಷ್ಟಿಯಿಂದಾಗಿ ಈ ಬಾರಿ ವರ್ಚುವಲ್ ಸಮಾವೇಶ ಆಯೋಜಿಸಲಾಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ನಾಳೆ (ಶನಿವಾರ) ಪ್ರಮುಖ ಭಾಷಣ ಮಾಡಲಿದ್ದಾರೆ.
ಎಸ್‌ಬಿಐ 7ನೇ ಬಾರಿಗೆ ರಾಷ್ಟ್ರೀಯ ಮಟ್ಟದ ಬ್ಯಾಂಕಿಂಗ್ ಸಮಾವೇಶವನ್ನು ರಿಸರ್ವ್ ಬ್ಯಾಂಕ್ ಮತ್ತು ಹೂಡಿಕೆದಾರರನ್ನು ಒಟ್ಟುಗೂಡಿಸಿ ಆರ್ಥಿಕತೆಯ ಸ್ಥಿತಿ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಚರ್ಚಿಸಲು ಒಂದೇ ವೇದಿಕೆಗೆ ಕರೆ ತರುತ್ತಿದೆ.
-
Reserve Bank of India (RBI) Governor Shaktikanta Das to deliver keynote address at the 7th SBI Banking & Economics Conclave at 10:30 am tomorrow. (file pic) pic.twitter.com/3FM8GQQ8aH
— ANI (@ANI) July 10, 2020 " class="align-text-top noRightClick twitterSection" data="
">Reserve Bank of India (RBI) Governor Shaktikanta Das to deliver keynote address at the 7th SBI Banking & Economics Conclave at 10:30 am tomorrow. (file pic) pic.twitter.com/3FM8GQQ8aH
— ANI (@ANI) July 10, 2020Reserve Bank of India (RBI) Governor Shaktikanta Das to deliver keynote address at the 7th SBI Banking & Economics Conclave at 10:30 am tomorrow. (file pic) pic.twitter.com/3FM8GQQ8aH
— ANI (@ANI) July 10, 2020
ನಾಳೆ ಬೆಳಗ್ಗೆ 10.30ಕ್ಕೆ ಭಾಷಣ ಮಾಡಲಿದ್ದು, ಅನೇಕ ಆರ್ಥಿಕ ತಜ್ಞರು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಕೊರೊನಾ ವೈರಸ್‌ನಿಂದಾಗಿ ದೇಶದಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲ ಲಾಕ್‌ಡೌನ್ ಹೇರಲಾಯಿತು. ಇದು ಭಾರತದ ಆರ್ಥಿಕತೆಗೆ ಭಾರೀ ನಷ್ಟವನ್ನುಂಟು ಮಾಡಿದೆ. ಹೀಗಾಗಿ ಈ ಬಾರಿಯ ಪ್ರಮುಖ ವಿಷಯವೆಂದರೆ ವ್ಯಾಪಾರ ಮತ್ತು ಆರ್ಥಿಕತೆಯ ಮೇಲೆ ಕೊರೊನಾದ ಪ್ರಭಾವವಾಗಿದೆ.