ETV Bharat / business

ಬದಲಾದ ಆರ್​ಬಿಐ ನಿಯಮ: ವಿತ್​ ಡ್ರಾ ಮಿತಿ ₹ 1,000 ಅಲ್ಲ ₹ 10 ಸಾವಿರ

ಸೆಪ್ಟೆಂಬರ್​ 23ರಂದು ಪಂಜಾಬ್​ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್​ ಲಿಮಿಟೆಡ್​ (ಪಿಎಂಸಿ) ಮೇಲೆ ಕಾರ್ಯಚರಣೆ ನಿರ್ಬಂಧದ ಆದೇಶ ಹೊರಡಿಸಿದ್ದ ಆರ್​ಬಿಐ, ಗ್ರಾಹಕರಿಗೆ ದಿನಕ್ಕೆ ವಿತ್​ ಡ್ರಾ ಮೊತ್ತವನ್ನು ₹ 1,000ಕ್ಕೆ ನಿಗದಿ ಪಡಿಸಿತ್ತು. ಬ್ಯಾಂಕ್​ ಗ್ರಾಹಕರು ಈ ಬಗ್ಗೆ ಆಕ್ಷೇಪ ಹಾಗೂ ವಿರೋಧ ವ್ಯಕ್ತಪಡಿಸಿದರು. ಇದರಿಂದ ಎಚ್ಚೆತುಕೊಂಡ ಆರ್​ಬಿಐ, ವಿತ್ ಡ್ರಾ ಮಿತಿಯನ್ನು ₹ 1,000ದಿಂದ ₹ 10,000ಕ್ಕೆ ಏರಿಕೆ ಮಾಡಿದೆ.

author img

By

Published : Sep 26, 2019, 6:58 PM IST

ಸಾಂದರ್ಭಿಕ ಚಿತ್ರ

ಮುಂಬೈ: ಭಾರತೀಯ ರಿಸರ್ವ್​ ಬ್ಯಾಂಕ್ (ಆರ್​ಬಿಐ) ಮಂಗಳವಾರ ಪಂಜಾಬ್​ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್​ ಲಿಮಿಟೆಡ್​ (ಪಿಎಂಸಿ) ಗ್ರಾಹಕರಿಗೆ ವಿಧಿಸಿದ ಎಟಿಎಂ ಹಣ ವಿತ್ ಡ್ರಾ ಮಿತಿಯನ್ನು ಸಡಿಲಗೊಳಿಸಿದೆ.

ಸೆಪ್ಟೆಂಬರ್​ 23ರಂದು ಕಾರ್ಯಚರಣೆ ನಿರ್ಬಂಧದ ಆದೇಶ ಹೊರಡಿಸಿದ್ದ ಆರ್​ಬಿಐ, ಗ್ರಾಹಕರಿಗೆ ದಿನಕ್ಕೆ ವಿತ್​ ಡ್ರಾ ಮೊತ್ತವನ್ನು ₹ 1,000ಕ್ಕೆ ನಿಗದಿ ಪಡಿಸಿತ್ತು. ಬ್ಯಾಂಕ್​ ಗ್ರಾಹಕರು ಈ ಬಗ್ಗೆ ಆಕ್ಷೇಪ ಹಾಗೂ ವಿರೋಧ ವ್ಯಕ್ತಪಡಿಸಿದರು. ಇದರಿಂದ ಎಚ್ಚೆತುಕೊಂಡ ಆರ್​ಬಿಐ, ವಿತ್ ಡ್ರಾ ಮಿತಿಯನ್ನು ₹ 1,000ದಿಂದ ₹ 10,000ಕ್ಕೆ ಏರಿಕೆ ಮಾಡಿದೆ.

ಠೇವಣಿದಾರರಿಗೆ ಆಗುತ್ತಿರುವ ಹಣಕಾಸಿನ ಅಡಚಣೆಯನ್ನು ತಗ್ಗಿಸುವ ಉದ್ದೇಶದಿಂದ ವಿತ್​ ಡ್ರಾ ಮಿತಿಯನ್ನು ಏರಿಕೆ ಮಾಡುತ್ತಿದ್ದೇವೆ. ಶೇ 60ರಷ್ಟು ಠೇವಣಿದಾರರು ತಮ್ಮ ಬಾಕಿ ಹಣ ಪಡೆಯಲು ಅನುಕೂಲವಾಗಲಿದೆ. ಆರ್​ಬಿಐ ತನ್ನ ಸ್ಥಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಠೇವಣಿದಾರರ ಹಿತಾಸಕ್ತಿಗಳನ್ನು ಕಾಪಾಡಲು ಅಗತ್ಯವಾದ ಕ್ರಮಗಳನ್ನು ಮುಂದುವರಿಸಲಿದೆ. ಪಿಎಂಸಿಯ ವಿತ್​ ಡ್ರಾ ಮಿತಿ ₹ 10,000 ನಿಗದಿಯ ಹೊರತಪಡಿಸಿ ಉಳಿದ ಷರತ್ತುಗಳು ಯಥಾವತ್ತಾಗಿ ಇರಲಿವೆ ಎಂದು ಆರ್​ಬಿಐ ತಿಳಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.