ನವದೆಹಲಿ : ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ಇತ್ತೀಚಿನ ಪರಿಷ್ಕೃತ ಜಿಡಿಪಿ ಅಂದಾಜು ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.7.7ರಷ್ಟು ಕುಗ್ಗಬಹುದು ಮತ್ತು ನಿರುದ್ಯೋಗ ದರವು ಶೇ.9.1ರಷ್ಟಿದೆ ಎಂಬುದು ಸೂಚಿಸುತ್ತದೆ. ಬಿಜೆಪಿ ಸರ್ಕಾರದ ಸಬ್ ಕಾ ಸಾಥ್ ಸಬ್ ವಿಕಾಸ್ ಧ್ಯೇಯವಾಕ್ಯವನ್ನು ಅಪಹಾಸ್ಯ ಮಾಡಿದ ರಾಹುಲ್ ಗಾಂಧಿ, ಈ ಅಂಕಿ ಅಂಶಗಳು ದೇಶದ ಹೆಚ್ಚು ವಿಕಾಸ (ಅಭಿವೃದ್ಧಿ) ಸೂಚಿಸಿವೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕೊರೊನಾ ಹೊರತಾಗಿ ಮೋದಿ ಕನಸಿನ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮುಟ್ಟುತ್ತೇವೆ: ಗೋಯಲ್ ವಿಶ್ವಾಸ
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮೊದಲ ಸುಧಾರಿತ ಅಂದಾಜು ಬಿಡುಗಡೆ ಮಾಡಿದ ನಂತರ ರಾಹುಲ್ ಗಾಂಧಿ ಮೋದಿ ಸರ್ಕಾರದ ಮೇಲೆ ದಾಳಿ ನಡೆಸಿದ್ದಾರೆ. ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 2020ರಿಂದ 21ರವರೆಗೆ ಶೇ.7.7ರಷ್ಟು ಕುಗ್ಗಬಹುದು ಎಂದು ಊಹಿಸಲಾಗಿದೆ.
ಇದು ಈವರೆಗಿನ ಕಡಿಮೆ ಮಟ್ಟವಾಗಿದೆ. ಎನ್ಎಸ್ಒ ಅಂದಾಜಿನಲ್ಲಿ ಭಾರತವು ಕನಿಷ್ಠ 60 ವರ್ಷಗಳಲ್ಲಿ ತನ್ನ ಕೆಟ್ಟ ಆರ್ಥಿಕ ಸಾಧನೆಗೆ ಸಾಕ್ಷಿಯಾಗಲಿದೆ. 2019-20ರ ಹಣಕಾಸು ವರ್ಷದ ಜಿಡಿಪಿ ಶೇ.4.2ರಷ್ಟಿತ್ತು, ಇದು 11 ವರ್ಷಗಳ ಕನಿಷ್ಠ ಮಟ್ಟವಾಗಿದೆ.
ಮೋದಿ ಸರ್ಕಾರದ ಐತಿಹಾಸಿಕ ಅಭಿವೃದ್ಧಿ ಜಿಡಿಪಿ ಮೈನಸ್ ಶೇ.7.7ರಷ್ಟು, ತಲಾ ಆದಾಯ ಮೈನಸ್ ಶೇ.5.4ರಷ್ಟು ಮತ್ತು ನಿರುದ್ಯೋಗ ಶೇ.9.0ರಷ್ಟಿದೆ. ಇದು ತುಂಬ ವಿಕಾಸ್ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.