ಮುಂಬೈ: ಸಾರ್ವಜನಿಕ ವಲಯದ ಸಂಸ್ಥೆಗಳು ಉದ್ಯೋಗ ನಷ್ಟದ ಪ್ರಮಾಣವು ಇತ್ತೀಚಿನ ದಿನಗಳಲ್ಲಿ ತೀರಾ ಕೆಟ್ಟದ್ದಾಗಿದೆ ಎಂದು ಕಂಪನಿಗಳ ಕಾರ್ಯಪಡೆಯ ವಿಶ್ಲೇಷಣಾ ವರದಿ ತಿಳಿಸಿದೆ.
2019ರ ಹಣಕಾಸು ವರ್ಷದಲ್ಲಿ ಖಾಸಗಿ ವಲಯದಲ್ಲಿ ಶೇ 9.2ರಷ್ಟು ಉದ್ಯೋಗ ಹೆಚ್ಚಳ ಆಗಿದ್ದರೇ ಸಾರ್ವಜನಿಕ ವಲಯದಲ್ಲಿ ಶೇ 2.6ರಷ್ಟು ಕುಸಿತ ಕಂಡಿದೆ. ಕಾರ್ಯಪಡೆ ವಿಶ್ಲೇಷಿಸಿದ ಉದ್ಯೋಗದಾತ ಸಂಸ್ಥೆಗಳಾದ ಕೋಲ್ ಇಂಡಿಯಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವ್ವಳ ಆಧಾರದ ಮೇಲೆ ಉದ್ಯೋಗ ಕಡಿತಗೊಳಿಸಿವೆ.
ಉದ್ಯೋಗ ಕಡಿತವು ಕ್ರಮವಾಗಿ ಶೇ 4.4ರಷ್ಟು ಹಾಗೂ ಶೇ 2.6ರಷ್ಟಿದೆ. ಉದ್ಯೋಗ ನೀಡಿಕೆಯ ಸಾರ್ವಜನಿಕ ವಲಯದ ಕಂಪನಿಗಳ ಪ್ರಾಮುಖ್ಯತೆಯು ಕುಗ್ಗುತ್ತಲೇ ಸಾಗುತ್ತಿದೆ. 2007ರ ವಿತ್ತೀಯ ವರ್ಷದಲ್ಲಿ ಪಟ್ಟಿ ಮಾಡಲಾದ ಒಟ್ಟು ಸಂಸ್ಥೆಗಳಲ್ಲಿ ಶೇ 50ರಷ್ಟು ಇದದ್ದು, ಅದೀಗ ಶೇ 25ಕ್ಕೆ ತಲುಪಿದೆ ಎಂದು ವಿದೇಶಿ ದಲ್ಲಾಳಿ ಸಂಸ್ಥೆ ಕ್ರೆಡಿಟ್ ಲಿಯೊನೈಸ್ ಸೆಕ್ಯುರಿಟೀಸ್ ಏಷ್ಯಾ (ಸಿಎಲ್ಎಸ್ಎ) ಮಾಹಿತಿ ನೀಡಿದೆ.