ನವದೆಹಲಿ : ಅಡುಗೆ ಅನಿಲ ಎಲ್ಪಿಜಿ ರೀಫಿಲ್ ಸಿಲಿಂಡರ್ ಕಾಯ್ದಿರಿಸಲು ಇಂಡಿಯನ್ ಗ್ಯಾಸ್ ಗ್ರಾಹಕರು ಒಂದು ಮಿಸ್ಡ್ ಕಾಲ್ ಮಾಡಿದರೇ ಸಾಕು!
ದೇಶದಲ್ಲಿ ಎಲ್ಲಿಯಾದರೂ ಇಂಡಿಯನ್ ಆಯಿಲ್ ಸಿಲಿಂಡರ್ ಗ್ರಾಹಕರು ರೀಫಿಲ್ ಬುಕ್ಕಿಂಗಾಗಿ ಒಂದೇ ಒಂದು ಮಿಸ್ಡ್ ಕಾಲ್ ಅನ್ನು 8454955555 ನಂಬರ್ಗೆ ಕೊಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರ ದೀರ್ಘಕಾಲದ ಕರೆಗಳ ಮೂಲಕ ತಮ್ಮ ಸಿಲಿಂಡರ್ ಕಾಯ್ದಿರಿಸುವ ತಾಪತ್ರೆಯವನ್ನು ಮಿಸ್ಡ್ ಕಾಲ್ ಮುಖಾಂತರ ಕೊನೆಗೊಳ್ಳಲಿದೆ. ಸಾಮಾನ್ಯ ಕರೆಯ ದರಗಳು ಅನ್ವಯವಾಗುವ ಐವಿಆರ್ಎಸ್ ಕರೆಗಳಿಗೆ ಹೋಲಿಸಿದ್ರೆ ಯಾವುದೇ ಕರೆ ಶುಲ್ಕ ವಿಧಿಸಲಾಗುವುದಿಲ್ಲ. ಐವಿಆರ್ಎಸ್ ಅಥವಾ ವೃದ್ಧಾಪ್ಯದ ಗ್ರಾಹಕರಿಗೆ ಮತ್ತು ಗ್ರಾಮೀಣ ಪ್ರದೇಶದವರಿಗೆ ಈ ಸೌಲಭ್ಯವು ಸಾಕಷ್ಟು ನೆರವಾಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: 8ನೇ ದಿನವೂ ಮುನ್ನುಗ್ಗಿದ ಗೂಳಿ: ಹೊಸ ವರ್ಷದಂದು ಹೊಸ ಎತ್ತರಕ್ಕೇರಿದ ಸೆನ್ಸೆಕ್ಸ್!
ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಲ್ಪಿಜಿ ಗ್ರಾಹಕರಿಗೆ ಮಿಸ್ಡ್ ಕಾಲ್ ಸೌಲಭ್ಯ ಸೇವೆಗೆ ಚಾಲನೆ ನೀಡಿದರು. ಇಂಡಿಯನ್ ಆಯಿಲ್ನಿಂದ ಎಕ್ಸ್ಪಿ 100 ಎಂಬ ಬ್ರಾಂಡ್ ಹೆಸರಿನ ವಿಶ್ವ ದರ್ಜೆಯ ಪ್ರೀಮಿಯಂ ದರ್ಜೆಯ ಪೆಟ್ರೋಲ್ (ಆಕ್ಟೇನ್ 100) ಅನ್ನು ಎರಡನೇ ಹಂತದ ಕಾರುಗಳಿಗಾಗಿ ಹೊರ ತಂದರು.
ಈ ಎರಡನೇ ಹಂತದಲ್ಲಿ ಕಳೆದ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ಬಿಡುಗಡೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಬ್ರಾಂಡೆಡ್ ಎಕ್ಸ್ಪಿ 100 ಅನ್ನು ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತಾ, ಕೊಚ್ಚಿ, ಇಂದೋರ್ ಮತ್ತು ಭುವನೇಶ್ವರದಲ್ಲಿ ಬಿಡುಗಡೆ ಮಾಡಲಾಯಿತು.