ನವದೆಹಲಿ: ಭಾರತವು ಕ್ರಮೇಣ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಹೊರಬರುತ್ತಿದ್ದಂತೆ, ಉತ್ತರ ಪ್ರದೇಶವು ದೇಶದ ರಫ್ತು ವಹಿವಾಟಿನಲ್ಲಿ ಪ್ರಗತಿ ಸಾಧಿಸಿದೆ.
ರಾಜ್ಯ ಸರ್ಕಾರ ನಡೆಸಿದ ಸಂಖ್ಯಾಶಾಸ್ತ್ರೀಯ ಅಧ್ಯಯನದ ಪ್ರಕಾರ, 2019ರ ಏಪ್ರಿಲ್‌ನಿಂದ 2019ರ ನವೆಂಬರ್ವರೆಗೆ 14,84,386.50 ಕೋಟಿ ರೂ. ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಅದರಲ್ಲಿ 80,058.44 ಕೋಟಿ ರೂ. ಉತ್ಪನ್ನಗಳು ಯುಪಿಯಿಂದ ರಫ್ತಾಗಿವೆ.
ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ 2020ರ ಏಪ್ರಿಲ್ ಮತ್ತು ನವೆಂಬರ್ ನಡುವೆ 12,99,354.87 ಕೋಟಿ ರೂ. ಉತ್ಪನ್ನಗಳನ್ನು ದೇಶದಿಂದ ರಫ್ತು ಮಾಡಲಾಗಿದೆ. ಅದರಲ್ಲಿ 72,508.14 ಕೋಟಿ ರೂ. ಉತ್ಪನ್ನಗಳನ್ನು ಉತ್ತರಪ್ರದೇಶದಿಂದ ವಿದೇಶಕ್ಕೆ ಕಳುಹಿಸಲಾಗಿದೆ.
ಓದಿ: ಈಗ ಎಲ್ಲರ ಚಿತ್ತ ಸೀತಾರಾಮನ್ರ 3ನೇ ಬಜೆಟ್ನತ್ತ: ಕೊಡುವರೋ, ಕಸಿದುಕೊಳ್ಳುವರೋ?
ಯುಪಿ ಈಗ ರಫ್ತು ವಹಿವಾಟಿನಲ್ಲಿ ಐದನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ದೆಹಲಿ, ಕೇರಳ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಅರುಣಾಚಲ ಪ್ರದೇಶ, ಮತ್ತು ಜಮ್ಮು ಮತ್ತು ಕಾಶ್ಮೀರ ನಂತರದ ಸ್ಥಾನದಲ್ಲಿವೆ.
ರತ್ನಗಂಬಳಿ ಮತ್ತು ಜವಳಿ ರಫ್ತು, ನೆಲ ಹಾಸು, ಮಾಂಸ, ಹಿತ್ತಾಳೆ ಅಲಂಕಾರ, ಆಟಿಕೆ ಮತ್ತು ಮರದ ಉತ್ಪನ್ನಗಳು ಹೆಚ್ಚು ವಹಿವಾಟು ನಡೆಸಿದ್ದು ಕಂಡುಬಂದಿದೆ.