ನವದೆಹಲಿ: ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಮತ್ತೊಂದು ಸುತ್ತಿನ ಉತ್ತೇಜಕ ಪ್ಯಾಕೇಜ್ ಅಗತ್ಯತೆ, ಪ್ರಸ್ತುತ ಆರ್ಥಿಕ ಪರಿಸ್ಥಿತಿ ಸೇರಿದಂತೆ ಸಂಭವನೀಯ ನೀತಿ ಕ್ರಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಆಗಲಿದ್ದಾರೆ.
ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಸೀತಾರಾಮನ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಜತೆ ಚರ್ಚಿಸಲು ಹಣಕಾಸು ಸಚಿವರು ನಿಗದಿತ ಕಾರ್ಯಸೂಚಿ ಹೊಂದಿಲ್ಲವಾದರು, ಅವರು ಆರ್ಥಿಕತೆಯ ಸ್ಥಿತಿ ಮತ್ತು ದೇಶದ ಪ್ರಸ್ತುತ ಪರಿಣಾಮ ಹಾಗೂ ಕೋವಿಡ್ 19 ಅಡೆತಡೆ ವಿರುದ್ಧ ಹೋರಾಡಲು ಸರ್ಕಾರ ಘೋಷಿಸಿದ ವಿವಿಧ ಉಪಕ್ರಮಗಳ ಪ್ರಗತಿಯ ಬಗ್ಗೆ ಪ್ರಸ್ತುತಪಡಿಸುವ ಸಾಧ್ಯತೆಯಿದೆ.
ಈ ತಿಂಗಳ ಆರಂಭದಲ್ಲಿ ಬೇಡಿಕೆ ಉತ್ಪಾದಿಸುವ ಕ್ರಮಗಳನ್ನು ಘೋಷಿಸಿದ ಬಳಿಕ ಹಣಕಾಸು ಸಚಿವರು ಮತ್ತೊಂದು ಪ್ರಚೋದಕ ಪ್ಯಾಕೇಜ್ ಬಗ್ಗೆ ಸುಳಿವು ನೀಡಿದ್ದರು. ಎಸ್‌ಎಂಇಗಳಿಗೆ ಘೋಷಿಸಲಾದ ಯೋಜನೆಗಳಿಗೆ ಹೆಚ್ಚಿನ ಹಣ ಒದಗಿಸುವಾಗ ಹಿಂದಿನ ಯೋಜನೆಗಳನ್ನು ಸಹ ಇದು ಒಳಗೊಳ್ಳಬಹುದು.
ಇನ್ನೂ ಒಂದು ಪ್ರಚೋದನೆಯೊಂದಿಗೆ ಬರುವ ಆಯ್ಕೆಯನ್ನು ನಾನು ಮುಚ್ಚಿಡುವುದಿಲ್ಲ ಎಂದು ಸೀತಾರಾಮನ್ ಇತ್ತೀಚೆಗೆ 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ. ಸಿಂಗ್ ಅವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆಯ ವರ್ಚ್ಯುವಲ್ ಕಾರ್ಯಕ್ರಮದಲ್ಲಿ ಹೇಳಿದ್ದರು.