ETV Bharat / business

ಬಜೆಟ್​ ಅಧಿವೇಶನದ ವಿಘ್ನಗಳ ತಡೆಗೆ ಸರ್ವಪಕ್ಷಗಳ ಜತೆ ಮೋದಿ ಸಭೆ ಇಂದು - ಬಜೆಟ್ ಅಧಿವೇಶನ ಇತ್ತೀಚಿನ ಸುದ್ದಿ

ಪ್ರತಿ ಬಾರಿಯೂ ಬಜೆಟ್​ ಅಧಿವೇಶನ ಶುರುವಾಗುವುದಕ್ಕಿಂತ ಮುಂಚೇಯೇ ಪ್ರಧಾನಿಯು ಸರ್ವ ಪಕ್ಷ ಸಭೆಯನ್ನು ಕರೆಯುತ್ತಿದ್ದರು. ಆದರೆ, ಈ ಬಾರಿ ಅಧಿವೇಶನ ಶುರುವಾದ ನಂತರ ಸಭೆ ಕರೆದಿರುವುದು ವಿಶೇಷವಾಗಿದೆ.

PM Modi
PM Modi
author img

By

Published : Jan 30, 2021, 12:50 PM IST

ನವದೆಹಲಿ: ಶುಕ್ರವಾರದಿಂದ ಕೇಂದ್ರ ಬಜೆಟ್​​ ಅಧಿವೇಶನ ಶುರುವಾಗಿದೆ. ಜನವರಿ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಸರ್ವ ಪಕ್ಷಗಳ ಸಭೆ ಕರೆದು, ಸುಸೂತ್ರವಾಗಿ ಅಧಿವೇಶನ ನಡೆಸಿಕೊಡಲು ಸಹಕರಿಸುವಂತೆ ಕೋರಲಿದ್ದಾರೆ.

ಪ್ರತಿ ಬಾರಿಯೂ ಬಜೆಟ್​ ಅಧಿವೇಶನ ಶುರುವಾಗುವುದಕ್ಕಿಂತ ಮುಂಚೇಯೇ ಪ್ರಧಾನಿಯು ಸರ್ವ ಪಕ್ಷ ಸಭೆಯನ್ನು ಕರೆಯುತ್ತಿದ್ದರು. ಆದರೆ, ಈ ಬಾರಿ ಅಧಿವೇಶನ ಶುರುವಾದ ನಂತರ ಸಭೆ ಕರೆದಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ಬಜೆಟ್​ ಅಧಿವೇಶನ ಮೊದಲ ಚರ್ಚೆ ನಿಗದಿಗಿಂತ 2 ದಿನ ಮುಂಚೆ ಮೊಟಕು: ಕಾರಣವೇನು ಗೊತ್ತೇ?

ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರ ತಡೆಯುವಲ್ಲಿ ಕೇಂದ್ರದ ವೈಫಲ್ಯವಿದೆ ಎಂದು ಕಾಂಗ್ರೆಸ್‌ ಸೇರಿ 18 ಪಕ್ಷಗಳು ಜಂಟಿ​​ ಅಧಿವೇಶನದ ರಾಷ್ಟ್ರಪತಿ ರಾಮನಾಥ್​​ ಕೋವಿಂದ್ ಭಾಷಣವನ್ನು ಬಹಿಷ್ಕರಿಸಿದ್ದವು.

ಪ್ರಧಾನಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ವಿರೋಧ ಪಕ್ಷಗಳು ರೈತರು ದೆಹಲಿಯ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಧ್ವನಿ ಎತ್ತುವ ಸಾಧ್ಯತೆ ಇದೆ. ಇದನ್ನು ಮೋದಿ ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬ ಕೂತುಹಲ ಮೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.