ETV Bharat / business

ನನ್ನ ಭದ್ರತೆಯಲ್ಲಿಟ್ಟು, ಸಂಪುಟ ಸಚಿವರನ್ನು ಕೂಡಿಹಾಕಿ ನೋಟು ರದ್ದತಿ ಘೋಷಿಸಿದ ಮೋದಿ: ರಾಗಾ - undefined

ಹಿಮಾಚಲ ಪ್ರದೇಶದ ಸೋಲನ್​ನಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, 'ನೋಟು ರದ್ದತಿ ಘೋಷಿಸುವ ಮುನ್ನ ಪ್ರಧಾನಿ ಮೋದಿ ಅವರು 7 ರೇಸ್​ ಕೋರ್ಸ್​ ರಸ್ತೆ ನಿವಾಸದಲ್ಲಿ ಸಂಪುಟ ಸಚಿವರನ್ನು ಕೂಡಿ ಹಾಕಿದ್ದರು ಎಂದು ಆರೋಪಿಸಿದ್ದಾರೆ.

ಸಂಗ್ರಹ ಚಿತ್ರ
author img

By

Published : May 17, 2019, 6:18 PM IST

ಸೋಲನ್​: ನೋಟು ರದ್ದತಿ ಘೋಷಣೆ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸಚಿವರನ್ನು ಗೃಹ ಬಂಧನದಲ್ಲಿ ಇರಿಸಿದ್ದರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಹಿಮಾಚಲ ಪ್ರದೇಶದ ಸೋಲನ್​ನಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, 'ನೋಟು ರದ್ದತಿ ಘೋಷಿಸುವ ಮುನ್ನ ಪ್ರಧಾನಿ ಮೋದಿ ಅವರು 7 ರೇಸ್​ ಕೋರ್ಸ್​ ರಸ್ತೆ ನಿವಾಸದಲ್ಲಿ ಸಂಪುಟ ಸಚಿವರನ್ನು ಕೂಡಿ ಹಾಕಿದ್ದರು. ಇದುವೇ ಸತ್ಯವಾದದ್ದು. ನನ್ನ ಭದ್ರತೆಗಾಗಿಯೂ ವಿಶೇಷ ರಕ್ಷಣಾ ತಂಡವನ್ನು (ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್) ನಿಯೋಜಿಸಿದ್ದರು. ಅವರು ನನಗೆ ಈ ವಿಷಯವನ್ನು ತಿಳಿಸಿದರು' ಎಂದು ಹೇಳಿದ್ದಾರೆ.

ಬಾಲ್​ಕೋಟ್​ ಹೇಳಿಕೆ ವಿರುದ್ಧ ಹರಿಹಾಯ್ದ ರಾಹುಲ್​, 'ಪ್ರಧಾನಿ ಮೋದಿ ತಮ್ಮ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದಾರೆ. ನಮ್ಮ ಪ್ರಧಾನಿಗೆ ಎಷ್ಟು ಜ್ಞಾನವಿದೆ ಎಂದು ನೀವೇ ನೋಡಿ. ನಮ್ಮ ವಾಯುಸೇನಾ ಅಧಿಕಾರಿಗಳಿಗೆ ಭಯಗೊಳ್ಳಬೇಡಿ, ಮೋಡಗಳು ನಮಗೆ ಅನುಕೂಲ ಮಾಡಿಕೊಡುತ್ತವೆ ಎಂದಿದ್ದಾರೆ. ಪ್ರಧಾನಿ ಅವರದ್ದೇ ಪ್ರಪಂಚದಲ್ಲಿ ಜೀವಿಸುತ್ತಿದ್ದಾರೆ. ಜನರ ಮಾತನ್ನು ಕೇಳುತ್ತಿಲ್ಲ' ಎಂದು ಆಪಾದಿಸಿದ್ದಾರೆ.

ಬಿಜೆಪಿ ಐದು ವರ್ಷಗಳ ಆಡಳಿತಾವಧಿಯನ್ನು ವ್ಯರ್ಥವಾಗಿ ಕಳೆದು ಜನರಿಗೆ ಮೋಸ ಮಾಡಿದೆ. ಕಾಂಗ್ರೆಸ್​ ಅಧಿಕಾರಕ್ಕೆ ನ್ಯಾಯ್ ಯೋಜನೆ ಜಾರಿಗೆ ತರುವುದಾಗಿ ಈ ಹಿಂದೆ ಭರವಸೆ ನೀಡಿದ್ದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.