ETV Bharat / business

ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾದ ಐತಿಹಾಸಿಕ ಟೆಸ್ಟ್​ ಜಯ 'ಆತ್ಮನಿರ್ಭರ ಭಾರತ'ದಂತೆ: ನಮೋ

ಆಸ್ಟ್ರೇಲಿಯಾದಲ್ಲಿ ನಮ್ಮ ಕ್ರಿಕೆಟ್ ತಂಡದ ಐತಿಹಾಸಿಕ ವಿಜಯದಿಂದ ಸ್ಫೂರ್ತಿ ಪಡೆಯಬೇಕೆಂದು ಯುವಕರಿಗೆ ಅಸ್ಸೋಂನ ಟೋಡ್‌ನ ತೇಜ್‌ಪುರ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವದಲ್ಲಿ ಕರೆಕೊಟ್ಟ ಪ್ರಧಾನಿ, ಭಾರತವು ಗಬ್ಬಾದಲ್ಲಿ ಕಂಡಂತೆ ಕಡಿಮೆ ಅನುಭವದೊಂದಿಗೆ ಸವಾಲುಗಳನ್ನು ಎದುರಿಸಬೇಕು. ಇದುವೇ ಆತ್ಮನಿರ್ಭರ ಭಾರತದ ಸಾರವಾಗಿದೆ ಎಂದು ಹೇಳಿದರು.

PM Modi
PM Modi
author img

By

Published : Jan 22, 2021, 1:04 PM IST

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ನೀಡಿದ್ದ ಪ್ರದರ್ಶನದಿಂದ ನಾವು ಬಹಳಷ್ಟು ಕಲಿಯಬಹುದು. ಆಟಗಾರರೆಲ್ಲ ಸವಾಲಿನ ಪರಿಸ್ಥಿತಿಗಳ ನಡುವೆಯೂ ಉತ್ತಮ ಪ್ರದರ್ಶನ ನೀಡಿದರು. ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡರು. ಹೆಚ್ಚಿನ ಆಟಗಾರರಿಗೆ ಅನುಭವದ ಕೊರತೆಯಿದ್ದರೂ ಸಿಕ್ಕ ಅವಕಾಶದಲ್ಲಿ ಇತಿಹಾಸ ಬರೆದಿದ್ದಾರೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

ಆಸ್ಟ್ರೇಲಿಯಾದಲ್ಲಿ ನಮ್ಮ ಕ್ರಿಕೆಟ್ ತಂಡದ ಐತಿಹಾಸಿಕ ವಿಜಯದಿಂದ ಸ್ಫೂರ್ತಿ ಪಡೆಯಬೇಕೆಂದು ಯುಕರಿಗೆ ಅಸ್ಸೋಂನ ಟೋಡ್‌ನ ತೇಜ್‌ಪುರ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವದಲ್ಲಿ ಕರೆಕೊಟ್ಟ ಪ್ರಧಾನಿ, ಭಾರತವು ಗಬ್ಬಾದಲ್ಲಿ ಕಂಡಂತೆ ಕಡಿಮೆ ಅನುಭವದೊಂದಿಗೆ ಸವಾಲುಗಳನ್ನು ಎದುರಿಸಬೇಕು. ಇದುವೇ ಆತ್ಮನಿರ್ಭರ ಭಾರತದ ಸಾರವಾಗಿದೆ ಎಂದು ಹೇಳಿದರು.

ಆಸ್ಟ್ರೇಲಿಯಾದ ಗಬ್ಬಾದಲ್ಲಿ ಜಯಭೇರಿ ಬಾರಿಸಿದ ನಂತರ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಶಂಸಿಸಿದ್ಧ ಮೋದಿ, ಸಕಾರಾತ್ಮಕ ಮನಸ್ಥಿತಿಯು ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಇದು ಆತ್ಮನಿರ್ಭರ ಭಾರತದ ಸಂಕೇತ ಎಂದರು.

ಇದನ್ನೂ ಓದಿ: ಕೇಂದ್ರ ಬಜೆಟ್:​ ಸಬ್ಸಿಡಿ 'ಗಿವ್​ ಇಟ್​ಅಪ್'​ನಂತೆ ಸ್ವಯಂಪ್ರೇರಿತ 'ಗುಜುರಿ ನೀತಿ' ತನ್ನಿ- ನಿರ್ಮಲಾಗೆ ಡೀಲರ್ಸ್​ ಡಿಮ್ಯಾಂಡ್​

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ದೇಶ ತೋರಿದ ಸಾಧನೆ ಮತ್ತು ಗಬ್ಬಾದಲ್ಲಿ ಭಾರತದ ಐತಿಹಾಸಿಕ ಗೆಲುವಿನ ಸಾಧನೆಯನ್ನು ಅನಾನುಭವಿ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಹೋಲಿಕೆ ಮಾಡಿದ್ದಾರೆ.

ನಮ್ಮ ನದಿಗಳಿಂದಲೂ ನಾವು ಬಹಳಷ್ಟು ಕಲಿಯಬಹುದು. ನದಿಯು ತನ್ನ ಪಥವನ್ನು ಅನುಸರಿಸಿ ಅಂತಿಮವಾಗಿ ಸಾಗರವನ್ನು ತಲುಪುತದೆ. ನಾವು ಕೂಡ ನಾವು ಭೇಟಿಯಾದ ಜನರಿಂದ ಕಲಿಯಬೇಕು ಮತ್ತು ನಮ್ಮ ಗಳಿಸಿದ ಅನುಭವವನ್ನು ನಮ್ಮ ಗುರಿಗಳನ್ನು ಸಾಕಾರಗೊಳಿಸಲು ಬಳಸಿಕೊಳ್ಳಬೇಕು. ತ್ಯಾಜ್ಯ ನಿರ್ವಹಣೆ ಮತ್ತು ಇಂಧನ ಕ್ಷೇತ್ರದಲ್ಲಿ ಇತ್ತೀಚಿನ ಆವಿಷ್ಕಾರಗಳು ಭವಿಷ್ಯದಲ್ಲಿ ಭಾರತವು ಸುಸ್ಥಿರ ಗುರಿ ಸಾಧಿಸಲು ಸಹಾಯ ಮಾಡುತ್ತದೆ. ಆತ್ಮನಿರ್ಭರ ಭಾರತ ಕನಸು ನಮ್ಮ ಜೀವನದ ಒಂದು ಭಾಗವಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.