ETV Bharat / business

ಡಾ. ಸಿಂಗ್ ಕಾಲದ 3 ರೂ. ಪ್ಲಾಟ್‌ಫಾರ್ಮ್ ಟಿಕೆಟ್ ಮೋದಿ ಕಾಲಕ್ಕೆ 50 ರೂ.ಗೆ ಏರಿಕೆ: ದಿಗ್ವಿಜಯ್ ಸಿಂಗ್ ಟ್ವೀಟ್​ - ಪ್ಲಾಟ್‌ಫಾರ್ಮ್ ಟಿಕೆಟ್ ದರ

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಬೆಲೆ ₹ 3 ಇತ್ತು. ಈಗಿನ ಬಿಜೆಪಿ ಆಡಳಿತದಲ್ಲಿ ₹ 50ಕ್ಕೆ ಏರಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಅವರು ಟಿಕೆಟ್​​ ದರದ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

ticket fare
ಟಿಕೆಟ್ ದರ
author img

By

Published : Aug 18, 2020, 3:51 PM IST

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆ ರೈಲು ನಿಲ್ದಾಣಗಳಲ್ಲಿ ಅನಗತ್ಯ ಜನಸಂದಣಿ ತಡೆಯುವ ಉದ್ದೇಶದಿಂದ ಪ್ಲಾಟ್‌ಫಾರ್ಮ್ ಟಿಕೆಟ್ ಶುಲ್ಕ ಹೆಚ್ಚಿಸಲು ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ರೈಲ್ವೆ ಅಧಿಕಾರಿಗಳು ವಿಭಾಗೀಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಬೆಲೆ ₹ 3 ಇತ್ತು. ಈಗಿನ ಬಿಜೆಪಿ ಆಡಳಿತದಲ್ಲಿ ₹ 50ಕ್ಕೆ ಏರಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಅವರು ಟಿಕೆಟ್​​ ದರದ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

  • कॉंग्रेस राज में रेलवे प्लेटफ़ॉर्म टिकिट ₹३ का भाजपा राज ₹५० हुआ। जय सियाराम। pic.twitter.com/xjUEPoCv5H

    — digvijaya singh (@digvijaya_28) August 18, 2020 " class="align-text-top noRightClick twitterSection" data=" ">

ಈ ಬಗ್ಗೆ ಸ್ಪಷ್ಟನೆ ನೀಡಿದ ರೈಲ್ವೆ ಇಲಾಖೆಯು ಕೋವಿಡ್ -19 ಸಾಂಕ್ರಾಮಿಕ ವೇಳೆ ನಿಲ್ದಾಣಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಪ್ಲಾಟ್‌ಫಾರ್ಮ್ ಟಿಕೆಟ್ ಶುಲ್ಕ ಹೆಚ್ಚಿಸಲು ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ. ಸಾಂಕ್ರಾಮಿಕ ರೋಗದ ನಂತರ ಈ ನಿರ್ಧಾರ ಪರಿಶೀಲಿಸಲಾಗುವುದು ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಹೇಳಿದ್ದಾರೆ.

twitter
ಟ್ವಿಟ್ಟರ್​

ಕಾಂಗ್ರೆಸ್ ರಾಜ್​ನಲ್ಲಿ ₹ 3 ಇದ್ದ ರೈಲ್ವೆ ಪ್ಲಾಟ್​ಫಾರ್ಮ್​ ಟಿಕೆಟ್, ಬಿಜೆಪಿ ರಾಜ್​ ವೇಳೆಗೆ ₹ 50 ಆಗಿ ಮಾರ್ಪಟ್ಟಿದೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಎರಡು ಪ್ಲಾಟ್​ಫಾರ್ಮ್​ ಟಿಕೆಟ್​ಗಳ ಶುಲ್ಕದ ಫೋಟೋ ಹಂಚಿಕೊಂಡಿದ್ದಾರೆ.

ಪುಣೆ ಜಂಕ್ಷನ್ ಪ್ಲಾಟ್‌ಫಾರ್ಮ್ ಟಿಕೆಟ್‌ಗೆ ₹ 50 ದರ ನಿಗದಿಪಡಿಸುವ ಉದ್ದೇಶ, ಅನಗತ್ಯವಾಗಿ ನಿಲ್ದಾಣಕ್ಕೆ ಬರುವವರನ್ನು ತಡೆಯುವುದು. ಇದರಿಂದ ಸಾಮಾಜಿಕ ಅಂತರ ಕಾಪಾಡಲಾಗುವುದು ಎಂದು ಭಾರತೀಯ ರೈಲ್ವೆ ಮಂಗಳವಾರ ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರದ ಪುಣೆ ಜಂಕ್ಷನ್‌ ಪ್ಲಾಟ್​ಫಾರ್ಮ್​ ಟಿಕೆಟ್​ ಶುಲ್ಕ 2011ರ ಡಿಸೆಂಬರ್ ನಲ್ಲಿ ₹ 3 ಇದ್ದರೇ 2020ರ ಆಗಸ್ಟ್‌ನಲ್ಲಿ ₹ 50 ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.