ನವದೆಹಲಿ: ಜಿಎಸ್ಟಿ ಪರಿಹಾರ ಸೆಸ್ನ ಅಸಮರ್ಪಕತೆಯಿಂದಾಗಿ ರಾಜ್ಯಗಳಿಗೆ ಪಾವತಿಸಬೇಕಿದ್ದ ಹಣ ವಿಳಂಬವಾಗುತ್ತಿದೆ. ಕೇಂದ್ರವು ರಾಜ್ಯಗಳಿಗೆ ಯಾವುದೇ ಭೇದ ಮಾಡುತ್ತಿಲ್ಲ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಜಿಎಸ್ಟಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆ, 2017 ಅನುಗುಣವಾಗಿ ರಾಜ್ಯಗಳಿಗೆ ಜಿಎಸ್ಟಿ ಪರಿಹಾರದ ಮೊತ್ತ ಪಾವತಿಸಲಿ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
ಪ್ರಸ್ತುತ ಶೇ 14ರಷ್ಟು ಪರಿಹಾರವನ್ನು ನೀಡಲು ವಿಳಂಬವಾಗಿದೆ. ಸಮಯೋಚಿತವಾಗಿ ನೀಡಬೇಕಾಗಿದ್ದು ತಡವಾಗುತ್ತಿದೆ. ವಿಳಂಬವೆಂದರೆ ಪರಿಹಾರದ ಸೆಸ್ ಅನ್ವಯ ಶೇ 14ರಷ್ಟು ಪಾವತಿಸಲು ಸಮರ್ಪಕವಾಗಿಲ್ಲ. ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡುವುದು ಕಾನೂನಿನ ಪ್ರಕಾರ ಬದ್ಧವಾಗಿದೆ ಎಂದರು.
ಇಲ್ಲಿ ಯಾವುದೇ ದ್ವಂದ್ವ ಇರಬಾರದು. ಹಣಕಾಸು ಆಯೋಗ ಮತ್ತು ಜಿಎಸ್ಟಿ ಕಾಯ್ದೆಯ ಅನುಗುಣವಾಗಿ ಪರಿಹಾರ ವಿಧಾನ ನೀಡಲಾಗಿದೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನಗೆ ಎಕ್ಸ್‌ವೈಝ್ಯಡ್ ರಾಜ್ಯಗಳು ಇಷ್ಟವಿಲ್ಲ. ಹೀಗಾಗಿ ನಾನು ಕೊಡುವುದಿಲ್ಲ. ಆದಾಯ ಸಂಗ್ರಹವೇ ಕೆಳಗೆ ಹೋಗಿದ್ದಾಗ ಸಹಜವಾಗಿ ರಾಜ್ಯಗಳಿಗೆ ಹೋಗಬೇಕಾದ ಭಾಗವು ಕಡಿಮೆ ಇರುತ್ತದೆ ಎಂದು ಟೈಮ್ಸ್ ನೌ ಸಮ್ಮಿಟ್ನಲ್ಲಿ ಹೇಳಿದ್ದಾರೆ.