ನವದೆಹಲಿ: ಆದಾಯ ತೆರಿಗೆ ಇಲಾಖೆಯ ಸೂಚನೆಯ ಅನ್ವಯ, ಪ್ಯಾನ್ ಮತ್ತು ಆಧಾರ್ ಲಿಂಕ್ ಜೋಡಣೆಯ ವಾಯ್ದೆ ಇದೇ ಸೆಪ್ಟೆಂಬರ್ 30ಕ್ಕೆ ಕೊನೆಯಾಗಲಿದ್ದು, ಜೋಡಣೆಯಾಗದ ಕಾರ್ಡ್ಗಳು ಅಕ್ಟೋಬರ್ 1ರಿಂದ ನಿಷ್ಕ್ರಿಯಗೊಳ್ಳಲಿವೆ.
ಒಮ್ಮೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅಗತ್ಯವಿರುವ ವ್ಯವಹಾರಗಳು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕಾರ್ಡ್ ತನ್ನ ಮೌಲ್ಯ ಕಳೆದುಕೊಳ್ಳುವ ಮುನ್ನ 12 ಸಂಖ್ಯೆ ಒಳಗೊಂಡ ವಿಶಿಷ್ಟ ಗುರುತಿನ ಚೀಟಿಯ ಆಧಾರ್ ಅನ್ನು ಬ್ಯಾಂಕ್ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್ ಕಾರ್ಡ್) ಜೋಡಣೆಯ ವಿಧಾನ ಇಲ್ಲಿದೆ.
ಕಳೆದ ಕೆಲ ತಿಂಗಳ ಹಿಂದೆಷ್ಟೇ ಸುಪ್ರೀಂಕೋರ್ಟ್ ಕೂಡ ಆದಾಯ ತೆರಿಗೆ ಕಾಯ್ದೆ, ಸೆಕ್ಷನ್ 139ಎಎ ಅನ್ವಯ ಪ್ಯಾನ್-ಆಧಾರ್ ಜೋಡಣೆ ಕಡ್ಡಾಯವೆಂದು ಆದೇಶ ಹೊರಡಿಸಿತ್ತು.
ಜೋಡಣೆ ಮಾಡುವ ವಿಧಾನ
* https://www.incometaxindiaefiling.gov.inಗೆ ಭೇಟಿ ನೀಡಿ
* ಮುಖಪುಟದ ಎಡಭಾಗದಲ್ಲಿನ ಕೆಂಪು ಅಕ್ಷರದ ಲಿಂಕ್ ಆಧಾರ್ (Link Aadhar) ಆಯ್ಕೆ ಕ್ಲಿಕ್ ಮಾಡಿ
* ಲಿಂಕ್ ಆಧಾರ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
* ಡೈಲಾಗ್ ಬಾಕ್ಸ್ನಲ್ಲಿ ಸೂಚಿಸಲಾದ ಪ್ಯಾನ್ ನಂ, ಆಧಾರ್ ನಂಬರ್, ಆಧಾರ್ ಕಾರ್ಡ್ನಲ್ಲಿ ನಮೋದಿತ ಹೆಸರು ಭರ್ತಿ ಮಾಡಿ
*ಕ್ಯಾಪ್ಚನ್ ಕೋಡ್ ಸಂಖ್ಯೆ ನಮೋದಿಸಿ: (ದಿವ್ಯಾಂಗರಿಗೆ ಓಟಿಪಿ ನಂಬರ್ ಪಡೆಯುವ ಅವಕಾಶವಿದೆ)
* ಹಸಿರು ಪೆಟ್ಟಿಗೆಯಲ್ಲಿನ ಲಿಂಕ್ ಆಧಾರ್ (Link Aadhar) ಆಯ್ಕೆ ಮಾಡಿಕೊಂಡರೆ ಆಧಾರ್ ಜೋಡಣೆಯಾದ ಬಾಕ್ಸ್ ತೆರೆದುಕೊಳ್ಳುತ್ತದೆ