ನವದೆಹಲಿ: ಕೆಲವು ಕೈಗಾರಿಕಾ ಚಟುವಟಿಕೆಗಳು ಪುನರಾರಂಭಗೊಳ್ಳುವ ಮೊದಲು ಒಂದು ಬಾರಿ ನಗದು ವರ್ಗಾವಣೆ ಮತ್ತು ಮೂರು ತಿಂಗಳವರೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಒಬ್ಬ ವ್ಯಕ್ತಿಗೆ ಆಹಾರ ಸರಬರಾಜು ಒದಗಿಸಿದರೆ ವಲಸೆ ಕಾರ್ಮಿಕ ಸಮಸ್ಯೆ ನಿಭಾಯಿಸಲು ನೆರವಾಗುತ್ತದೆ ಎಂದು ವರದಿಯೊಂದು ತಿಳಿಸಿದೆ.
ವಲಸೆ ಕಾರ್ಮಿಕ ಸಮಸ್ಯೆ ನಿಭಾಯಿಸುವುದು ಭಾಗಶಃ ಆರ್ಥಿಕ ಮತ್ತು ಆಡಳಿತಾತ್ಮಕವಾಗಿ ಕಾಣುತ್ತಿದೆ. ಸಾಂಕ್ರಾಮಿಕ ರೋಗ ಹಬ್ಬುವುದನ್ನು ನಿಯಂತ್ರಿಸಲು ಆಯಾ ರಾಜ್ಯಗಳು ಪರೀಕ್ಷೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಬೇಕಾಗುತ್ತದೆ. ವೇತನ ನಷ್ಟವನ್ನು ಅಲ್ಪ ಪ್ರಮಾಣದಲ್ಲಿ ಸರಿದೂಗಿಸಬಹುದಾದ ಒಂದು ಬಾರಿ ಆರ್ಥಿಕ ಪರಿಹಾರವನ್ನು ತಕ್ಷಣವೇ ಒದಗಿಸಬೇಕಿದೆ ಎಂದು ಇಂಧನ, ಪರಿಸರ ಮತ್ತು ನೀರು ಹಾಗೂ ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆಗಳು ತಮ್ಮ ಜಂಟಿ ವರದಿಯಲ್ಲಿ ತಿಳಿಸಿವೆ.
ಅಂತಹ ಪರಿಹಾರ ಒದಗಿಸಲು ನೇರ ಲಾಭದ ಯೋಜನೆಯ ಅಗತ್ಯವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎರಡು ನೀತಿ ಆಯ್ಕೆಗಳು ಹೆಚ್ಚು ಪರಿಣಾಮಕಾರಿ ಆಗಿರುತ್ತವೆ. ಕೈಗಾರಿಕಾ ಚಟುವಟಿಕೆಗಳು ಪುನರಾರಂಭಗೊಳ್ಳುವ ಮೊದಲುಒಂದು ಬಾರಿ ನಗದು ವರ್ಗಾವಣೆ ಮತ್ತು ಪಿಡಿಎಸ್‌ನಿಂದ (ಸಾರ್ವಜನಿಕ ವಿತರಣೆ) ಪ್ರತಿ ವ್ಯಕ್ತಿಗೆ ಮೂರು ತಿಂಗಳ ತನಕ ಆಹಾರ ಸರಬರಾಜು ಮಾಡಬೇಕು ಎಂದು ಹೇಳಿದೆ.
ನೇರ ಲಾಭ ವರ್ಗಾವಣೆ (ಡಿಬಿಟಿ) ಮತ್ತು ಪಿಡಿಎಸ್ ಮೂಲಕ ಆಹಾರವನ್ನು ವಿತರಿಸುವುದು ರಾಜ್ಯ ಸರ್ಕಾರಗಳ ಹಣಕಾಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಎಲ್ಲಾ ವಲಸೆ ಕಾರ್ಮಿಕರ ತಾಣಗಳಾಗಿವೆ.
ಈ ಹಣಕಾಸಿನ ಕ್ರಮವು ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬಗಳು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗದಂತೆ ತಡೆಯುತ್ತದೆ ಎಂದು ಹೇಳಿದೆ.