ಬೆಂಗಳೂರು : ಬಹು ನಿರೀಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಲಾಗುವುದು ಎಂದು ಓಲಾ ಸಂಸ್ಥೆ ಘೋಷಿಸಿದೆ. ಟ್ವಿಟರ್ ಮೂಲಕ ಸುದ್ದಿಯನ್ನು ದೃಢೀಕರಿಸಿರುವ ಓಲಾ ಚೇರ್ಮನ್ ಮತ್ತು ಗ್ರೂಪ್‌ನ ಸಿಇಒ ಭವಿಶ್ ಅಗರ್ವಾಲ್, ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಹೇಳಿದರು.
ನಮ್ಮ ಸ್ಕೂಟರ್ ಅನ್ನು ಕಾಯ್ದಿರಿಸಿದ ಎಲ್ಲರಿಗೂ ಧನ್ಯವಾದಗಳು! ಆಗಸ್ಟ್ 15ರಂದು ಓಲಾ ಸ್ಕೂಟರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸುತ್ತಿದೆ. ಉತ್ಪನ್ನ ಮತ್ತು ಲಭ್ಯತೆ ದಿನಾಂಕಗಳ ಕುರಿತು ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳುತ್ತದೆ. ಇದನ್ನು ತಾವು ಎದುರು ನೋಡುತ್ತಿರುವುದಾಗಿ ಅಗರ್‌ವಾಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ವಿಶ್ವದ ಅತಿ ಹೆಚ್ಚು ಬುಕ್ ಮಾಡಿದ ಎಲೆಕ್ಟ್ರಿಕ್ ಸ್ಕೂಟರ್ ಖ್ಯಾತಿ ಪಡೆದ ಓಲಾ.. 24 ಗಂಟೆಗಳಲ್ಲಿ __ಲಕ್ಷ ಬುಕ್ಕಿಂಗ್
ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಕೇವಲ 499 ರೂಪಾಯಿ ನೀಡಿ ಕಾಯ್ದಿರಿಸುವಿಕೆಯನ್ನು ಜುಲೈ 15ರಂದು ಆರಂಭಿಸಿತ್ತು. ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಕ್ಕೆ ಭಾರತದಾದ್ಯಂತ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭೂತಪೂರ್ವ ಬೇಡಿಕೆಯು ಇದ್ದು, ಗ್ರಾಹಕರ ಆದ್ಯತೆಗಳನ್ನು ಎಲೆಕ್ಟ್ರಾನಿಕ್ ವಾಹನಗಳಿಗೆ(EVs) ವರ್ಗಾಯಿಸುವ ಸ್ಪಷ್ಟ ಸೂಚಕವಾಗಿದೆ ಎಂದು ಅಗರ್‌ವಾಲ್ ಜುಲೈ 17ರಂದು ಟ್ವೀಟ್ ಮಾಡಿದ್ದಾರೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಯಾವುದೇ 5A ಸಾಕೆಟ್‌ನಲ್ಲಿ ಹೋಮ್ ಚಾರ್ಜರ್ ಬಳಸಿ ಚಾರ್ಜ್ ಮಾಡಬಹುದು. ಇದಲ್ಲದೆ, ಕಂಪನಿಯು ಗ್ರಾಹಕರ ಅನುಕೂಲಕ್ಕಾಗಿ ದೇಶದ 400 ನಗರಗಳಲ್ಲಿ ಒಂದು ಲಕ್ಷ ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ನಿರ್ಮಿಸುತ್ತಿದೆ.