ನವದೆಹಲಿ: ದೆಹಲಿಯ ಜಿಎಸ್ಟಿ ಅಧಿಕಾರಿಗಳು 23 ಶೆಲ್ ಕಂಪನಿಗಳ ಜಾಲವನ್ನು ಪತ್ತೆಮಾಡಿ 7,896 ಕೋಟಿ ರೂ. ನಕಲಿ ಇನ್‌ವಾಯ್ಸ್ ದೋಚಿದ ಪ್ರಕರಣಗಳನ್ನು ಬೆಳಕಿಗೆ ತಂದಿದ್ದಾರೆ.
7,896 ಕೋಟಿ ರೂ.ನಷ್ಟು ನಕಲಿ ಇನ್‌ವಾಯ್ಸ್ ಸೃಷ್ಟಿಸಿ ವಂಚಿಸಿದ್ದ ಪ್ರಕರಣಗಳನ್ನು ದೆಹಲಿ ಪಶ್ಚಿಮ ಕಮಿಷನರೇಟ್‌ನ ಕೇಂದ್ರ ತೆರಿಗೆ ನಿಯಂತ್ರಣ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 23 ಶೆಲ್ ಕಂಪನಿಗಳ ಜಾಲ ನಕಲಿ ಇನ್‌ವಾಯ್ಸ್ ಬಳಸಿಕೊಂಡು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ನ (ಐಟಿಸಿ) ಅಡಿ ₹ 1,709 ಕೋಟಿ ರೂ. ವಂಚಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕಂಪನಿಗಳು ಸರಕುಗಳ ನೈಜ ಪೂರೈಕೆ ಇಲ್ಲದೆ ನಕಲಿ ಇನ್‌ವಾಯ್ಸ್‌ಗಳನ್ನು ಸಂಗ್ರಹಿಸಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ರವಾನಿಸಿದವು. ಫೆಬ್ರವರಿ 29ರಂದು ಇಬ್ಬರನ್ನು ಬಂಧಿಸಿ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಕಲಿ ಇನ್‌ವಾಯ್ಸ್‌ಗಳನ್ನು ಹೊಂದುವ ಮೂಲಕ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅಡಿ ಹಲವಾರು ನಕಲಿ ಸಂಸ್ಥೆಗಳನ್ನು ರಚಿಸಿ ವಂಚನೆ ಎಸಗಿದ್ದಾರೆ.