ETV Bharat / business

ನೀವೂ ಈ ಐಪಿಒ ಖರೀದಿಸಿದ್ದೀರಾ?... ಒಂದೇ ದಿನದಲ್ಲಿ ದುಪ್ಪಟ್ಟು ಲಾಭ! - ನೈಕಾ ಕಂಪನಿ ಷೇರು

1125 ರೂ ಮೂಲಬೆಲೆಗೆ ಐಪಿಒ ಬಿಡುಗಡೆ ಮಾಡಿದ್ದ ಸೌಂದರ್ಯವರ್ಧಕ ಕಂಪನಿ ನೈಕಾ ಒಂದೇ ದಿನ ಶೇ 96 ರಷ್ಟು ಹೆಚ್ಚಳ ಕಾಣುವ ಮೂಲಕ ಹೂಡಿಕೆದಾರರಿಗೆ ದುಪ್ಪಟ್ಟು ಲಾಭ ಮಾಡಿಕೊಟ್ಟಿದೆ.

Nykaa shares make dream debut; surge over 96 pc

author img

By

Published : Nov 11, 2021, 7:20 AM IST

ನವದೆಹಲಿ: ಸೌಂದರ್ಯವರ್ಧಕ ಸಾಧನಗಳ ಆನ್‌ಲೈನ್‌ ಮಾರುಕಟ್ಟೆ ಆಗಿರುವ ನೈಕಾ ಕಂಪನಿಯ ಷೇರುಗಳು ಬುಧವಾರ ಷೇರು ಮಾರುಕಟ್ಟೆ ಪ್ರವೇಶಿಸಿದ್ದು, ಐಪಿಒ ಸಂದರ್ಭದಲ್ಲಿ ನಿಗದಿ ಮಾಡಿದ್ದ ಬೆಲೆಗಿಂತ ಶೇಕಡ 96ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡು ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಟ್ಟಿದೆ. ಒಂದೇ ದಿನದಲ್ಲಿ ನೈಕಾ ಷೇರುಗಳ ಬೆಲೆ ಬರೋಬ್ಬರಿ 2001 ರೂ ನಂತೆ ವಹಿವಾಟು ನಡೆಸಿ, ಈ ಷೇರು ಕೊಂಡವರಿಗೆ ಭರ್ಜರಿ ಲಾಭವನ್ನೇ ಮಾಡಿಕೊಟ್ಟಿದೆ.

ಕಂಪನಿಯ ಷೇರು, ಷೇರು ಮಾರುಕಟ್ಟೆಯಲ್ಲಿ ಬುಧವಾರ ಬೆಳಗ್ಗೆ ₹ 2,001ರಂತೆ ವಹಿವಾಟು ಆರಂಭಿಸಿತು. ಈ ಮೂಲಕ ಷೇರುಗಳ ಮೌಲ್ಯವು ಐಪಿಒ ಸಂದರ್ಭದಲ್ಲಿ ನಿಗದಿಯಾಗಿದ್ದ 1125 ರೂ. ಶೇಕಡಾ 77ರಷ್ಟು ಹೆಚ್ಚು ಮೌಲ್ಯವನ್ನು ಆರಂಭದಲ್ಲಿಯೇ ಪಡೆದುಕೊಂಡು ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ನಿನ್ನೆಯ ವಹಿವಾಟಿನಲ್ಲಿ ನೈಕಾ ಕಂಪನಿ ಷೇರುಗಳ ಬೆಲೆ ಒಂದು ಹಂತದಲ್ಲಿ ಶೇ 99.83ರವರೆಗೂ ಹೆಚ್ಚಳ ಕಂಡಿತ್ತು.

ಮುಂಬೈ ಷೇರು ಮಾರುಕಟ್ಟೆಯಲ್ಲಿ (ಬಿಎಸ್‌ಇ) ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ಮೊದಲ ದಿನವೇ ₹ 1 ಲಕ್ಷ ಕೋಟಿಯ ಗಡಿಯನ್ನು ದಾಟಿದೆ. ಈಗ ಈ ಕಂಪನಿಯ ಮಾರುಕಟ್ಟೆ ಮೌಲ್ಯ ₹ 1.04 ಲಕ್ಷ ಕೋಟಿ ಆಗಿದೆ.

ಈ ಮೂಲಕ ಕಂಪನಿ ಮಾಲೀಕರು ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ 100ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ದೇಶದ ಅಗ್ರಜರ ಗಮನ ಸೆಳೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.