ನವದೆಹಲಿ: ಕನಿಷ್ಠ ಕಾಯುವ ಸಮಯ ಖಚಿತಪಡಿಸಲು, ಟೋಲ್ ಪ್ಲಾಜಾಗಳಲ್ಲಿ ಪ್ರತಿ ವಾಹನಕ್ಕೆ 10 ಸೆಕೆಂಡುಗಳಿಗಿಂತ ಹೆಚ್ಚಿನ ಸೇವಾ ಸಮಯ ತಗುಲುವಂತೆ ಮಾರ್ಗಸೂಚಿಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿಗಳ ಅನ್ವಯ, ಟೋಲ್ ಪ್ಲಾಜಾಗಳಲ್ಲಿ 100 ಮೀಟರ್‌ಗಿಂತ ಹೆಚ್ಚು ವಾಹನಗಳು ಸರದಿ ಸಾಲಿದ್ದರೆ ಟೋಲ್ ಪ್ಲಾಜಾಗಳಿಗೆ ತೆರಿಗೆ ಕಟ್ಟಬೇಕಾಗಿಲ್ಲ. ತೆರಿಗೆ ಪಡೆಯದೇ ವಾಹನಗಳನ್ನು ಬಿಟ್ಟು, ತಡೆರಹಿತ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಿಳಿಸಿದೆ.
ಟೋಲ್ ಸಂಗ್ರಹಣೆ ಸ್ಥಳಗಳಲ್ಲಿ 100 ಮೀಟರ್ ಅಂತರದಲ್ಲಿ ಹಳದಿ ರೇಖೆಯನ್ನು ಎಳೆಯಲಾಗುತ್ತದೆ. ಆ ರೇಖೆಗಿಂತಲೂ ಹೆಚ್ಚಿನ ವಾಹನಗಳು ಸರದಿಯಲ್ಲಿದ್ದರೆ ಆಗ ಸಂಚಾರವನ್ನು ಸುಗಮಗೊಳಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಕೆಲವು ಕಾರಣಗಳಿಂದಾಗಿ 100 ಮೀಟರ್‌ಗಿಂತ ಹೆಚ್ಚು ಕಾಯುವ ವಾಹನಗಳ ಕ್ಯೂ ಇದ್ದರೆ, ಟೋಲ್ ಬೂತ್‌ನಿಂದ 100 ಮೀಟರ್ ಒಳಗೆ ಕ್ಯೂ ಬರುವವರೆಗೆ ಟೋಲ್ ಪಾವತಿಸದೇ ವಾಹನಗಳನ್ನು ಹಾದುಹೋಗಲು ಅನುಮತಿಸಲಾಗುತ್ತದೆ.
ಟೋಲ್ ಪ್ಲಾಜಾ ಆಪರೇಟರ್‌ಗಳಲ್ಲಿ ಹೊಣೆಗಾರಿಕೆಯ ಮತ್ತಷ್ಟು ನೀಡಲಾಗಿದೆ. 2021ರ ಫೆಬ್ರವರಿ ಮಧ್ಯದಿಂದ ಯಶಸ್ವಿಯಾಗಿ ಶೇ 100ರಷ್ಟು ನಗದುರಹಿತ ಟೋಲಿಂಗ್‌ಗೆ ಪರಿವರ್ತನೆಗೊಂಡಿದೆ. ಎನ್‌ಎಚ್‌ಎಐ ಟೋಲ್ ಪ್ಲಾಜಾಗಳಲ್ಲಿ ಒಟ್ಟಾರೆ ಫಾಸ್ಟ್‌ಟ್ಯಾಗ್ ಪ್ರಮಾಣ ಶೇ 96ಕ್ಕೆ ತಲುಪಿದೆ. ಅವುಗಳಲ್ಲಿ ಹಲವು ಶೇ 99ರಷ್ಟು ಹಾದು ಹೋಗುವಿಕೆ ಹೊಂದಿವೆ ಎಂದಿದೆ.