ETV Bharat / business

ಕೋಚಿಂಗ್ ಶುಲ್ಕದ ಮೇಲೆ ಶೇ.18% ಜಿಎಎಸ್​​ಟಿ: ವಿದ್ಯಾರ್ಥಿಗಳಿಗಿಲ್ಲ ತೆರಿಗೆ ವಿನಾಯಿತಿ! - ಆಂಧ್ರಪ್ರದೇಶ ಪೀಠ

ಪ್ರಸ್ತುತ ತೆರಿಗೆ ರೂಲಿಂಗ್​ನಲ್ಲಿ ಸರ್ಕಾರವು ಪ್ರಮುಖ ಶಿಕ್ಷಣ ಸೇವೆಗಳನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡಿದೆ. ಇವುಗಳಲ್ಲಿ ಪೂರ್ವ ಶಾಲಾ ಶಿಕ್ಷಣ ಮತ್ತು ಉನ್ನತ ಮಾಧ್ಯಮಿಕ ಶಾಲೆಯವರೆಗಿನ ಶಿಕ್ಷಣ. ಯಾವುದೇ ಕಾನೂನಿನಿಂದ ಮಾನ್ಯತೆ ಪಡೆದ ಅರ್ಹತಾ ಪಠ್ಯಕ್ರಮ ಶಿಕ್ಷಣ, ಮತ್ತು ಅನುಮೋದಿತ ವೃತ್ತಿಪರ ಶಿಕ್ಷಣ ಕೋರ್ಸ್‌ ಶಿಕ್ಷಣ ಇದರಡಿ ಸೇರಿವೆ. ಇತರ ಶೈಕ್ಷಣಿಕ ಸೇವೆಗಳು ಶೇ.18ರಷ್ಟು ತೆರಿಗೆಗೆ ಅರ್ಹವಾಗಿರುತ್ತವೆ. ಶಿಕ್ಷಣ ಸೇವೆಗಳ ಹೊರತಾಗಿ, ಕೆಲವು ಇನ್ಪುಟ್ ಸೇವೆಗಳಾದ ಕ್ಯಾಂಟೀನ್, ರಿಪೇರಿ ಮತ್ತು ನಿರ್ವಹಣೆಗೆ ಜಿಎಸ್​ಟಿ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ.

GST
ಜಿಎಸ್​ಟಿ
author img

By

Published : Aug 10, 2020, 4:04 PM IST

ಹೈದರಾಬಾದ್: ವಿದ್ಯಾರ್ಥಿಗಳಿಗೆ ಶುಲ್ಕ, ವಸತಿ ಮತ್ತು ಊಟದ ವೆಚ್ಚದ ಮೇಲೆ ಶೇ. 18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಪಾವತಿಸುವುದನ್ನು ಕೋಚಿಂಗ್ ಸಂಸ್ಥೆಗಳು ಮುಂದುವರಿಸಲಿವೆ. ಕಲಿಕಾರ್ಥಿಗಳು ಯಾವುದೇ ರೀತಿಯ ವಿನಾಯಿತಿ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಆಂಧ್ರಪ್ರದೇಶದ ಅಡ್ವಾನ್ಸ್ ರೂಲಿಂಗ್ ಅಥಾರಟಿ (ಎಎಆರ್) ನೂತನ ತೀರ್ಪಿನಲ್ಲಿ ಹೇಳಿದೆ.

ಚಾರ್ಟರ್ಡ್ ಅಕೌಂಟನ್ಸಿ (ಸಿಎ) ಮತ್ತು ಕಾಸ್ಟ್ ಆ್ಯಂಡ್ ವರ್ಕ್ಸ್ ಅಕೌಂಟನ್ಸಿ ಸರ್ಟಿಫಿಕೇಟ್ (ಐಸಿಡಬ್ಲ್ಯೂಎ) ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಕೋಚಿಂಗ್ ಒದಗಿಸುವ ಮಾಸ್ಟರ್ ಮೈಂಡ್ಸ್ ಎಂಬ ಗುಂಟೂರು ಮೂಲದ ಕೋಚಿಂಗ್ ಇನ್​ಸ್ಟಿಟ್ಯೂಟ್ ಸಲ್ಲಿಸಿದ ಅರ್ಜಿಯೊಂದರಲ್ಲಿ ತನ್ನ ತೀರ್ಪನ್ನು ಪ್ರಕಟಿಸಿದೆ ಎಂದು ಎಎಆರ್ ತಿಳಿಸಿದೆ. ಅಂತಹ ಸಂಸ್ಥೆಗಳಿಂದ ಜಿಎಸ್​​ಟಿ ಪಾವತಿಯಿಂದ ವಿನಾಯಿತಿ ಪಡೆಯಲು ಅರ್ಹತೆ ಇಲ್ಲವೆಂದು ಸ್ಪಷ್ಟಪಡಿಸಿದೆ.

ಪ್ರಸ್ತುತ ತೆರಿಗೆ ರೂಲಿಂಗ್​ನಲ್ಲಿ ಸರ್ಕಾರವು ಪ್ರಮುಖ ಶಿಕ್ಷಣ ಸೇವೆಗಳನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡಿದೆ. ಇವುಗಳಲ್ಲಿ ಪೂರ್ವ ಶಾಲಾ ಶಿಕ್ಷಣ ಮತ್ತು ಉನ್ನತ ಮಾಧ್ಯಮಿಕ ಶಾಲೆಯವರೆಗಿನ ಶಿಕ್ಷಣ. ಯಾವುದೇ ಕಾನೂನಿನಿಂದ ಮಾನ್ಯತೆ ಪಡೆದ ಅರ್ಹತಾ ಪಠ್ಯಕ್ರಮ ಶಿಕ್ಷಣ ಮತ್ತು ಅನುಮೋದಿತ ವೃತ್ತಿಪರ ಶಿಕ್ಷಣ ಕೋರ್ಸ್‌ ಶಿಕ್ಷಣ ಇದರಡಿ ಸೇರಿವೆ.

ಇತರ ಶೈಕ್ಷಣಿಕ ಸೇವೆಗಳು ಶೇ.18ರಷ್ಟು ತೆರಿಗೆಗೆ ಅರ್ಹವಾಗಿರುತ್ತವೆ. ಶಿಕ್ಷಣ ಸೇವೆಗಳ ಹೊರತಾಗಿ, ಕೆಲವು ಇನ್ಪುಟ್ ಸೇವೆಗಳಾದ ಕ್ಯಾಂಟೀನ್, ರಿಪೇರಿ ಮತ್ತು ನಿರ್ವಹಣೆಗೆ ಜಿಎಸ್​ಟಿ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.