ನವದೆಹಲಿ: ಮುಂಬೈ ಪೊಲೀಸರು ಟಿಆರ್‌ಪಿ ಹಗರಣದ ತನಿಖೆಯ ವೇಳೆ ಬೆಳಕಿಗೆ ಬಂದ ಆರ್ಟಿಕಲ್ 370ರ ರದ್ದತಿ ಸೇರಿದಂತೆ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿ ಸಂಬಂಧ, ವಾಟ್ಸಾಪ್ ಚಾಟ್ ಸೋರಿಕೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಲೋಕಸಭೆಗೆ ಮಾಹಿತಿ ನೀಡಿದೆ.
ಬಾಲಕೋಟ್ ವಾಯುದಾಳಿ ಮತ್ತು 370ನೇ ವಿಧಿ ರದ್ದುಪಡಿಸಿದ ವಿವರಗಳನ್ನು ಒಳಗೊಂಡ ಉದ್ದೇಶಿತ ವಾಟ್ಸಾಪ್ ಸಂಭಾಷಣೆಯ 500 ಪುಟಗಳ ಪ್ರತಿಲೇಖನವು ಈ ವರ್ಷದ ಜನವರಿಯಲ್ಲಿ ವೈರಲ್ ಆಗಿತ್ತು. ಇದರ ದುರುಪಯೋಗ ಪ್ರಕರಣದಲ್ಲಿ ತನ್ನ ಚಾರ್ಜ್‌ಶೀಟ್‌ನ ಭಾಗವಾಗಿ ಮುಂಬೈ ಪೊಲೀಸರು ನ್ಯಾಯಾಲಯದ ಮುಂದೆ ಸಲ್ಲಿಸಿದ ಬಳಿಕ, ಟಿವಿ ರೇಟಿಂಗ್ ಪಾಯಿಂಟ್ (ಟಿಆರ್ಟಿ) ಹಗರಣ, ರಾಜಕೀಯ ವಲಯದಲ್ಲಿ ಬಿರುಗಾಳಿಗೆ ಕಾರಣವಾಯಿತು.
ಇದನ್ನೂ ಓದಿ: ಅಭಿವೃದ್ಧಿ ಹಣಕಾಸು ಸಂಸ್ಥೆ ಸ್ಥಾಪನೆಗೆ ಕ್ಯಾಬಿನೆಟ್ ಅಸ್ತು.. 20,000 ಕೋಟಿ ರೂ. ಆರಂಭಿಕ ಉತ್ತೇಜಕ ಬಂಡವಾಳ!
ವಾಟ್ಸಾಪ್ ಚಾಟ್ ಸೋರಿಕೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಮಾಹಿತಿಯು ಗಮನಕ್ಕೆ ಬಂದಿಲ್ಲ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಟಿಆರ್‌ಪಿ ಹಗರಣದ ತನಿಖೆಯ ವೇಳೆ ಬೆಳಕಿಗೆ ಬಂದ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯ ಕುರಿತು ವಾಟ್ಸಾಪ್ ಚಾಟ್ ಸೋರಿಕೆಯಾಗುವುದನ್ನು ಸರ್ಕಾರ ಅರಿತುಕೊಂಡಿದೆಯೇ ಎಂದು ಕೇಳಲಾದ ಪ್ರಶ್ನೆಗೆ ರೆಡ್ಡಿ ಅವರ ಉತ್ತರಿಸಿದ್ದಾರೆ.