ನವದೆಹಲಿ: ಕೋವಿಡ್ 19 ಪ್ರೇರೇಪಿತ ಲಾಕ್ಡೌನ್ನಿಂದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಉತ್ತೇಜಕ ಉಪಕ್ರಮ ಪ್ಯಾಕೇಜ್ ಘೋಷಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮೂರನೇ ಹಂತದ ಪ್ಯಾಕೇಜ್ನಲ್ಲಿ ಕೃಷಿಗೆ ನೀಡಲಾದ ಆದ್ಯತೆಗಳನ್ನು ಪ್ರಕಟಿಸಿದರು.
- ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ. ಹಂಚಿಕೆ
- ಕನಿಷ್ಠ ಬೆಂಬಲ ಬೆಲೆಯಲ್ಲಿ 74,300 ಕೋಟಿ ರೂ. ಬೇಸಾಯಗಾರರ ಉತ್ಪನ್ನಗಳು ಖರೀದಿ
- ಪಿಎಂ ಕಿಸಾನ್ ನಿಧಿಯಿಂದ 18,700 ಕೋಟಿ ರೂ. ನೇರ ವರ್ಗಾವಣೆ
- ಟಾಪ್ ಟು ಟೋಟಲ್ ಯೋಜನೆಗೆ 500 ಕೋಟಿ ರೂ. ಹೆಚ್ಚುವರಿ ನಿಧಿ
- ಬೆಳೆಯ ಸಾಗಣೆಯ ಮೇಲೆ ಶೇ 50 ಹಾಗೂ ಸಂಗ್ರಹದಲ್ಲಿ ಶೇ 50ರಷ್ಟು ಸಬ್ಸಿಡಿ
- ಹಾಲು ಉತ್ಪಾದಕರಿಗೆ ಸಾಲದ ಮೇಲಿನ ಬಡ್ಡಿಯಲ್ಲಿ ಸರ್ಕಾರದಿಂದ ಶೇ 2ರಷ್ಟು ಪಾವತಿ
- ರಾಸುಗಳಿಗೆ ಶೇ 100 ಲಸಿಕೆ ಹಾಕಿಸುವ ವ್ಯವಸ್ಥೆ 53 ಕೋಟಿ ಪ್ರಾಣಿಗಳಿಗೆ 13,343 ಕೋಟಿ ರೂ. ಮೀಸಲು
- ಹೈನುಗಾರಿಕೆ ವಲಯಕ್ಕೆ 15,000 ಕೋಟಿ ರೂ. ಹಂಚಿಕೆ ಮತ್ತು ಪಶು ಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪನೆ
- 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗಿಡ ಮೂಲಿಕೆಗಳ ಬೆಳೆಯಲು 4,000 ಕೋಟಿ ರೂ. ಜೇನು ಸಾಕಣೆಗೆ 500 ಕೋಟಿ ರೂ. ನೀಡಿಕೆ
- ಸಣ್ಣ ಆಹಾರ ಉದ್ಯಮಗಳಿಗೆ 10,000 ಕೋಟಿ ರೂ. ಮೀಸಲು
- ರಾಗಿ, ಅರಶಿಣ, ಕೇಸರಿಯಂತಹ ದೇಸಿ ಉತ್ಪನ್ನಗಳಿಗೆ ಜಾಗತಿಕ ಬ್ರ್ಯಾಂಡಿಂಗ್
- ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆಗಾಗಿ ಹೊಸ ದೋಣಿ ಖರೀದಿಗೆ ಅನುವು
- ಮೀನುಗಾರಿಕಾ ಬಂದರು ನಿರ್ಮಾಣಕ್ಕೆ 20,000 ಕೋಟಿ ರೂ.
- 20,000 ಕೋಟಿ ರೂ.ಯಲ್ಲಿ 9,000 ಕೋಟಿ ರೂ. ದೋಣಿ, ಮಂಡಿ, ಬಂದರು, ಮಾರುಕಟ್ಟೆ ನಿರ್ಮಾಣಕ್ಕೆ ಬಳಕೆ
- ಮೀನುಗಾರಿಕೆಯಲ್ಲಿ 55 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯ ಗುರಿ