ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಕಂಡು ಬಂದ ಹಿಂಜರಿತ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸಹ ಇಳಿಕೆ ಕಂಡು ಬಂದಿದೆ. ಬೆಳಗಿನ ಆರಂಭಿಕ ವ್ಯವಹಾರದಲ್ಲಿ 189 ಅಂಕಗಳ ಇಳಿಕೆ ಕಂಡು ಬಂದಿದೆ. ಇನ್ನು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಸಹ ಆರಂಭಿಕ 50 ಅಂಕ ಕುಸಿತ ಕಂಡಿದೆ.
ಬಿಎಸ್ಸಿ 58,120.5 ಅಂಕಗಳೊಂದಿಗೆ ವ್ಯವಹಾರ ಮುಂದುವರಿಸಿದರೆ, ನಿಫ್ಟಿ 17,350 ರಿಂದ 17,320 ಅಂಕಗಳಿಗೆ ಕುಸಿತ ಕಂಡಿದೆ. ರಿಲಯನ್ಸ್ ಇಂಡಸ್ಟ್ರಿ ಷೇರುಗಳ ಬೆಲೆಯಲ್ಲಿ ಶೇ 1 ರಷ್ಟು ಕುಸಿತ ಕಂಡು ಬಂದಿದೆ. ಇನ್ನು ಐಸಿಐಸಿ ಬ್ಯಾಂಕ್, ಹೆಚ್ಸಿಎಲ್ ಟೆಕ್, ಇನ್ಪೋಸಿಸ್, ನೆಸ್ಲೆ ಇಂಡಿಯಾ ಷೇರುಗಳ ಸಹ ನಷ್ಟ ಅನುಭವಿಸಿವೆ.