ETV Bharat / business

ಕೊರೊನಾ ಪ್ಯಾಕೇಜ್​ನಿಂದ ಹಣಕಾಸಿನ ಕೊರತೆ ಮೇಲೆ ಇನ್ನಷ್ಟು ಹೊರೆ: ವರದಿ - ಹಣಕಾಸಿನ ಕೊರತೆ

ಕೋವಿಡ್ ಪರಿಹಾರ ಕ್ರಮವಾಗಿ ನಿನ್ನೆ ಹೆಚ್ಚುವರಿಯಾಗಿ ಘೋಷಿಸಲಾಗಿರುವ ಪ್ಯಾಕೇಜ್​ನಿಂದ ಇನ್ನಷ್ಟು ಹೊರೆಯಾಗಲಿದೆ ಎಂದು ಎಸ್​​ಬಿಐ ವರದಿ ತಿಳಿಸಿದೆ. ಈಗಾಗಲೇ ಮೊದಲ ಪ್ಯಾಕೇಜ್ ಘೋಷಣೆಯಾಗಿತ್ತು. ಇದೀಗ ಇನ್ನೊಂದು ಪ್ಯಾಕೇಜ್ ಘೋಷಣೆಯಾಗಿದ್ದು, ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಎಸ್​ಬಿಐ ತಿಳಿಸಿದೆ.

ಕೊರೊನಾ ಪ್ಯಾಕೇಜ್​ನಿಂದ ಹಣಕಾಸಿನ ಕೊರತೆ ಮೇಲೆ ಇನ್ನಷ್ಟು ಹೊರೆ

author img

By

Published : Jun 29, 2021, 8:12 PM IST

ಮುಂಬೈ: ಕೊರೊನಾ ಲಾಕ್​ಡೌನ್ ಪರಿಹಾರ ಕ್ರಮವಾಗಿ ಕೇಂದ್ರ ಸರ್ಕಾರ ಘೋಷಿಸಿರುವ 2ನೇ ಪ್ಯಾಕೇಜ್​​​ನಿಂದಾಗಿ ಹಣಕಾಸಿನ ಕೊರತೆಯ ಮೇಲೆ 60 ಬೇಸಿಸ್​ ಪಾಯಿಂಟ್ಸ್​ (ಬಿಪಿಎಸ್​) ಪರಿಣಾಮ ಬೀರಲಿದೆ ಮತ್ತು ಬ್ಯಾಂಕ್​ಗಳಿಗೆ 70 ಸಾವಿರ ಕೋಟಿ ಹೆಚ್ಚುವರಿ ದ್ರವ್ಯತೆಯ ಹೊರೆ ಬೀಳಲಿದೆ ಎಂದು ವರದಿಯಾಗಿದೆ.

ಕೋವಿಡ್ -19 ಪೀಡಿತ ವಲಯಕ್ಕೆ ಪ್ರಮುಖ ಪರಿಹಾರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 1.5 ಲಕ್ಷ ಕೋಟಿ ರೂ. ಮೀಸಲಿರಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಆರೋಗ್ಯ ಕ್ಷೇತ್ರಕ್ಕೆ 50,000 ಕೋಟಿ ರೂ. ಮತ್ತು ಇತರ ಕ್ಷೇತ್ರಗಳಿಗೆ ಹೆಚ್ಚುವರಿ 60,000 ಕೋಟಿ ರೂ. ನೀಡುವುದಾಗಿ ಹೇಳಿದ್ದರು.

1.5 ಲಕ್ಷ ಕೋಟಿ ಪ್ಯಾಕೇಜ್​​ನ ಸಮಾನ ಹಂಚಿಕೆಯ ದೃಷ್ಟಿಯನ್ನ ಇಟ್ಟುಕೊಂಡರೆ. ಶೇ.50 ಮತ್ತು ಶೇ.75ರಷ್ಟು ಗ್ಯಾರಂಟಿ ವಾಪಸಾತಿ ಮತ್ತು ಶೇ.100ರಷ್ಟು ಅಪಾಯದ ನಡುವೆಯೂ ಬ್ಯಾಂಕ್​ಗಳು 70 ಸಾವಿರ ಕೋಟಿ ಸಾಲ ಸೃಷ್ಟಿಸಬಹುದು ಎಂದು ಎಸ್​ಬಿಐ ಸಂಶೋಧನಾ ವರದಿ ತಿಳಿಸಿದೆ.

ನಿನ್ನೆ ಘೋಷಣೆ ಮಾಡಲಾದ ಪ್ಯಾಕೇಜ್​ನಲ್ಲಿ ಆರೋಗ್ಯ ಪ್ರವಾಸೋಧ್ಯಮ, ಎಂಎಸ್​​ಐ ಮತ್ತು ಕೃಷಿ ಎಂಬ ನಾಲ್ಕು ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಈ ಕ್ರಮಗಳು ಈಗಾಗಲೇ ಚೇತರಿಸಿಕೊಳ್ಳುತ್ತಿರುವ ಕ್ಷೇತ್ರದ ವ್ಯಾಪ್ತಿಯನ್ನು ಇನ್ನಷ್ಟು ಉತ್ತಮವಾಗಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಬಜೆಟ್​ ಕೊರತೆಯ ಪ್ರಮಾಣವು ಪ್ರಸಕ್ತ ಹಣಕಾಸು ವರ್ಷದಲ್ಲಿ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.