ETV Bharat / business

ಒಟಿಟಿ ಹೊಸ ನಿಯಮಗಳನ್ನು ಎಲ್ಲಾ ಪ್ಲಾಟ್​ಫಾರ್ಮ್​ಗಳು ಒಪ್ಪಿಕೊಂಡಿವೆ: ಜಾವಡೇಕರ್​

ಉದ್ಯಮದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಒಟಿಟಿ ಉದ್ಯಮಿಗಳ ಜತೆ ಸರ್ಕಾರ ಹಲವು ಸುತ್ತಿನ ಸಮಾಲೋಚನೆ ನಡೆಸಿದೆ. ಸ್ವಯಂ ನಿಯಂತ್ರಣದ ಅಗತ್ಯವನ್ನು ಒತ್ತಿ ಹೇಳಲಾಗಿದೆ. ಸಿನೆಮಾ ಮತ್ತು ಟಿವಿ ಉದ್ಯಮಗಳಿಂದ ಪ್ರಾತಿನಿಧ್ಯಗಳನ್ನು ಸ್ವೀಕರಿಸಿದ್ದೇವೆ. ಅವುಗಳಿಗೆ ನಿಯಮಗಳು ಇದ್ದರೂ ಒಟಿಟಿ ಉದ್ಯಮಕ್ಕೆ ಯಾವುದೂ ಧಕ್ಕೆಯಾಗುವುದಿಲ್ಲ ಎಂದು ಭರವಸೆ ನೀಡಿದರು.

OTT
OTT
author img

By

Published : Mar 5, 2021, 6:59 AM IST

ನವದೆಹಲಿ: ಒವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ಗಳಿಗೆ ಮಾಹಿತಿ ಮತ್ತು ಪ್ರಸಾರ (ಐ / ಬಿ) ಸಚಿವಾಲಯ ರೂಪಿಸಿರುವ ಹೊಸ ಮಾರ್ಗಸೂಚಿಗಳು ಹೊಸ ನಿಯಮಗಳ ಸ್ವಯಂ ವರ್ಗೀಕರಣದ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಆಲ್ಟ್ ಬಾಲಾಜಿ, ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಜಿಯೋ, ಝೀ 5, ವಯಾಕಾಮ್ 18, ಶೆಮರೂ ಮತ್ತು ಎಂಎಕ್ಸ್‌ಪ್ಲೇಯರ್ ಸೇರಿದಂತೆ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಉದ್ಯಮದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಒಟಿಟಿ ಉದ್ಯಮಿಗಳ ಜತೆ ಸರ್ಕಾರ ಹಲವು ಸುತ್ತಿನ ಸಮಾಲೋಚನೆ ನಡೆಸಿದೆ. ಸ್ವಯಂ ನಿಯಂತ್ರಣದ ಅಗತ್ಯವನ್ನು ಒತ್ತಿ ಹೇಳಲಾಗಿದೆ. ಸಿನೆಮಾ ಮತ್ತು ಟಿವಿ ಉದ್ಯಮಗಳಿಂದ ಪ್ರಾತಿನಿಧ್ಯಗಳನ್ನು ಸ್ವೀಕರಿಸಿದ್ದೇವೆ. ಅವುಗಳಿಗೆ ನಿಯಮಗಳು ಇದ್ದರೂ ಒಟಿಟಿ ಉದ್ಯಮಕ್ಕೆ ಯಾವುದೂ ಧಕ್ಕೆಯಾಗುವುದಿಲ್ಲ ಎಂದು ಭರವಸೆ ನೀಡಿದರು.

ಒಟಿಟಿ ಉದ್ಯಮಿಗಳಿಗೆ ಸರ್ಕಾರವು ಪ್ರಗತಿಪರ ಸಾಂಸ್ಥಿಕ ಕಾರ್ಯವಿಧಾನ ಹೊರತರಲಿದೆ. ಸ್ವಯಂ ನಿಯಂತ್ರಣದ ಕಲ್ಪನೆಯೊಂದಿಗೆ ಒಂದು ಮಟ್ಟದ ವಾತಾವರಣದ ಮೈದಾನವೊಂದನ್ನು ಅಭಿವೃದ್ಧಿಪಡಿಸುತ್ತದೆ. ಅನೇಕ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಈ ನಿಯಮಗಳನ್ನು ಸ್ವಾಗತಿಸಿವೆ ಎಂದು ಸಚಿವರು ಶ್ಲಾಘಿಸಿದರು.

ಇದನ್ನೂ ಓದಿ: ಟಿಯಾನ್ವೆನ್​-1 ನೌಕೆ ಮುಖೇನ ಮಂಗಳ ಗ್ರಹದ ಹೈ ರೆಸೆಲ್ಯೂಷನ್​ ಚಿತ್ರ ಸೆರೆಹಿಡಿದ ಚೀನಾ!

ಉದ್ಯಮದ ಪ್ರತಿನಿಧಿಗಳಿಗೆ ನಿಯಮಗಳ ನಿಬಂಧನೆಗಳ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವರು, ಕೇವಲ ಮಾಹಿತಿಯನ್ನು ಬಹಿರಂಗಪಡಿಸುವುದು ಅವರಿಗೆ ಅಗತ್ಯವಾಗಿದೆ. ಸಚಿವಾಲಯದೊಂದಿಗೆ ಯಾವುದೇ ರೀತಿಯ ನೋಂದಣಿ ಮಾಡುವ ಅಗತ್ಯವಿಲ್ಲ. ಇದಕ್ಕಾಗಿ ಒಂದು ಫಾರ್ಮ್ ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದು ಹೇಳಿದರು.

ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪರಿಣಾಮಕಾರಿಯಾದ ಕುಂದುಕೊರತೆ ನಿವಾರಣಾ ಕಾರ್ಯವಿಧಾನ ಅಭಿವೃದ್ಧಿಪಡಿಸುವ ನಿರೀಕ್ಷೆಯಿದೆ. ಕೆಲವು ವದಂತಿಗಳನ್ನು ತಳ್ಳಿಹಾಕಿದ ಜಾವಡೇಕರ್, ಸ್ವಯಂ ನಿಯಂತ್ರಕ ಸಂಸ್ಥೆಯಲ್ಲಿ ಸರ್ಕಾರದಿಂದ ಯಾವುದೇ ಸದಸ್ಯರನ್ನು ನೇಮಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ವಯಂ ನಿಯಂತ್ರಣ ಮಟ್ಟದಲ್ಲಿ ಬಗೆಹರಿಯದ ದೂರುಗಳನ್ನು ತಿಳಿಯಲು ಸರ್ಕಾರ ಅಂತರ ಇಲಾಖಾ ಸಮಿತಿ ರಚಿಸುತ್ತದೆ. ಉದ್ಯಮದ ಪ್ರತಿನಿಧಿಗಳು ನಿಯಮಗಳನ್ನು ಸ್ವಾಗತಿಸಿದ್ದಾರೆ. ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸಿದ ಸಚಿವರಿಗೆ ಧನ್ಯವಾದಗಳು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.