ನವದೆಹಲಿ: ಕೇಂದ್ರದ ಹೊಸ ಮಾರ್ಗಸೂಚಿಗಳು, ಪ್ರಸ್ತುತ ಆರ್ಥಿಕತೆ ಚಲಿಸಲು ಉತ್ತಮ ಆರಂಭವಾಗಲಿದೆ. ವರ್ತಕರು ವಿವಿಧ ರಾಜ್ಯ ಸರ್ಕಾರಗಳು ಅಂಗೀಕರಿಸುವುದನ್ನೇ ಎದುರು ನೋಡುತ್ತಿವೆ ಎಂದು ಚಿಲ್ಲರೆ ವ್ಯಾಪಾರಿಗಳ ಸಂಘ ಹೇಳಿದೆ.
ವರ್ತಕರ ಸಂಘ, ಆಯಾ ರಾಜ್ಯ ಸರ್ಕಾರಗಳು ಶಾಪಿಂಗ್ ಮಾಲ್‌ಗಳನ್ನು ಸುರಕ್ಷಿತ ಸ್ಥಳ ಎಂದು ಗುರುತಿಸಿ ಗ್ರಾಹಕರಿಗೆ ನಿಯಂತ್ರಿತ ಅವಕಾಶ ನೀಡಬಹದು ಎಂಬ ನಿರೀಕ್ಷೆ ಇರಿಸಿಕೊಂಡಿದೆ.
ಕೇಂದ್ರ ಸರ್ಕಾರವು ಶನಿವಾರ ಹೊಸ ಅಧಿಸೂಚನೆ ಹೊರಡಿಸಿದ್ದು, ಮೇ 4ರಿಂದ ಆರಂಭವಾಗುವ 3ನೇ ಹಂತದ ಲಾಕ್‌ಡೌನ್ ವೇಳೆ ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಕೆಲವು ನಿರ್ಬಂಧಿತ ಸಡಿಲಿಕೆ ನೀಡಲಾಗುವುದು ಎಂದಿದೆ.
ಗೃಹ ಸಚಿವಾಲಯದ ಹೊಸ ಅಧಿಸೂಚನೆಯು ಆರ್ಥಿಕತೆ ಮುನ್ನಡೆಯಲು ಉತ್ತಮ ಆರಂಭವಾಗಿದೆ. ನಾವು ರಾಜ್ಯಗಳಿಂದ ಸ್ಪಷ್ಟೀಕರಣಗಳನ್ನು ನಿರೀಕ್ಷಿಸುತ್ತೇವೆ. ಅವರು ಈ ಹೊಸ ಮಾರ್ಗಸೂಚಿಗಳನ್ನು ಹೇಗೆ ಅಳವಡಿಸಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದೇವೆ ಎಂದಿದೆ.
ಲಾಕ್‌ಡೌನ್‌ನಿಂದ ಚಿಲ್ಲರೆ ಉದ್ಯಮ ಹಾನಿಗೊಳಗಾಗಿದೆ. ಉದ್ಯಮ ಬದುಕುಳಿಯಲು ಹಣಕಾಸಿನ ನೆರವು ಮತ್ತು ನೀತಿ ಬೆಂಬಲಕ್ಕೆ ಇನ್ನೂ ಕಾಯುತ್ತಿದೆ.
ಮೇ 4ರಿಂದ 17ರ ತನ ದೇಶಾದ್ಯಂತ ಅಂತರ್ ರಾಜ್ಯ ಪ್ರಯಾಣ, ವಾಯು ಮತ್ತು ರೈಲು ಸೇವೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಸೀಮಿತ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ಗುರುತಿಸಿ ಸೋಂಕಿನ ಪ್ರಮಾಣಕ್ಕೆ ಅನುಗುಣವಾಗಿ ವಿನಾಯಿತಿ ನೀಡಲಿದೆ.