ಚೆನ್ನೈ: ದೇಶದ ಆರ್ಥಿಕ ಸ್ಥಿರತೆ ಮತ್ತು ದೃಢತೆಯನ್ನು ಎಲ್ಲ ಪಾಲುದಾರರು ಸಂರಕ್ಷಿಸಿ ಪೋಷಿಸಬೇಕಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ವರ್ಚ್ಯುವಲ್ ಪ್ಲಾಟ್‌ಫಾರ್ಮ್ ಮೂಲಕ 39ನೇ ನಾನಿ ಪಾಲ್ಖಿವಾಲಾ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಅವರು, ಅತ್ಯಾಧುನಿಕ ರಾಷ್ಟ್ರೀಯ ಪೇಮೆಂಟ್ ಮೂಲಸೌಕರ್ಯ ಜಾರಿಗೆ ತರಲು ಕೇಂದ್ರ ಬ್ಯಾಂಕ್ ತನ್ನ ನಿರ್ದೇಶನಗಳನ್ನು ನೀಡಿದೆ. ಸುರಕ್ಷಿತ, ದಕ್ಷತೆ ಮತ್ತು ಪರಿಣಾಮಕಾರಿಯಾಗಿ ದೃಢವಾದ ಪಾವತಿಗಳ ವಾತಾವರಣದ ವ್ಯವಸ್ಥೆ ನಿರ್ಮಾಣವಾಗಲಿ ಎಂದರು.
ಹಣಕಾಸಿನ ಸ್ಥಿರತೆ ರಕ್ಷಿಸುವ ಮತ್ತು ಕಾಪಾಡುವ ಈ ಹೊಸ ಮಾರ್ಗಗಳನ್ನು ಬಳಸಿಕೊಳ್ಳಲು ನಿಯಂತ್ರಿತ ಘಟಕಗಳ ವೇಗ ಹೆಚ್ಚಿಸುವಂತಹ ವಾತಾವರಣವನ್ನು ಒದಗಿಸಲು ರಿಸರ್ವ್ ಬ್ಯಾಂಕ್ ತೊಡಗಿಸಿಕೊಳ್ಳುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಭಾರತೀಯ ಉಕ್ಕಿಗೆ ಚೀನಾದಿಂದ ಭರ್ಜರಿ ಬೇಡಿಕೆ: ದಾಖಲೆಯ ಮಟ್ಟದಲ್ಲಿ ಐ'ರನ್' ದರ
ಸಂಭಾವ್ಯ ಅಪಾಯಗಳನ್ನು ಮೊದಲೇ ಗುರುತಿಸಲು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತಮ್ಮ ಆಂತರಿಕ ರಕ್ಷಣೆ ವಿಭಾಗ ಬಲಪಡಿಸುವ ಅಗತ್ಯವಿದೆ ಎಂದರು.