ETV Bharat / business

ಹಣಕಾಸೇತರ ಸಂಸ್ಥೆಗಳ ನಗದು ಬಿಕ್ಕಟ್ಟು ಬ್ಯಾಂಕ್​ಗಳಿಗೆ ಸಂಕಷ್ಟ.. ಮೂಡಿಸ್​ ಎಚ್ಚರಿಕೆ

ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ (ಎನ್‌ಬಿಎಫ್‌ಸಿ) ಸಾಲಗಾರಿಕೆಯು ಬ್ಯಾಂಕ್​ಗಳ ಮೇಲೆ ಒತ್ತಡ ಬೀರಲಿದೆ. ಬ್ಯಾಂಕ್​ಗಳ ಆಸ್ತಿಯ ಗುಣಮಟ್ಟ, ಲಾಭದಾಯಕತೆ ಮತ್ತು ಬಂಡವಾಳದ ಸುಧಾರಣೆಗೆ ಅಡ್ಡಿಯಾಗಲಿದೆ. ಕ್ರೆಡಿಟ್ ರೇಟ್‌ನ ಋಣಾತ್ಮಕದತ್ತ ಕರೆದ್ಯೊಯಲಿದೆ ಎಂದು ಮೂಡಿಸ್ ತನ್ನ ವರದಿಯಲ್ಲಿ ತಿಳಿಸಿದೆ.

ಎನ್‌ಬಿಎಫ್‌ಸಿ
NBFC
author img

By

Published : Dec 13, 2019, 5:01 PM IST

ನವದೆಹಲಿ: ಹಣಕಾಸೇತರ ಸಂಸ್ಥೆಗಳು ಎದುರಿಸುತ್ತಿರುವ ನಿರಂತರ ನಗದು ಬಿಕ್ಕಟ್ಟು ಬ್ಯಾಂಕ್​ಗಳ ವಸೂಲಾಗದ ಸಾಲದ ಅಪಾಯ ಹೆಚ್ಚಿಸಲಿದೆ ಎಂದು ಜಾಗತಿಕ ಮೌಲ್ಯಮಾಪನ ಸಂಸ್ಥೆ ಮೂಡಿಸ್ ಇನ್​ವೆಸ್ಟರ್ಸ್​ ಸರ್ವಿಸ್​ ಎಚ್ಚರಿಸಿದೆ.

ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ (ಎನ್‌ಬಿಎಫ್‌ಸಿ) ಸಾಲಗಾರಿಕೆಯು ಬ್ಯಾಂಕ್​ಗಳ ಮೇಲೆ ಒತ್ತಡ ಬೀರಲಿದೆ. ಬ್ಯಾಂಕ್​ಗಳ ಆಸ್ತಿಯ ಗುಣಮಟ್ಟ, ಲಾಭದಾಯಕತೆ ಮತ್ತು ಬಂಡವಾಳದ ಸುಧಾರಣೆಗೆ ಅಡ್ಡಿಯಾಗಲಿದೆ. ಕ್ರೆಡಿಟ್ ರೇಟ್‌ನ ಋಣಾತ್ಮಕದತ್ತ ಕರೆದ್ಯೊಯಲಿದೆ ಎಂದು ಮೂಡಿಸ್ ತನ್ನ ವರದಿಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 2018ರಲ್ಲಿ ಐಎಲ್ ಅಂಡ್‌ ಎಫ್ಎಸ್ ದಿವಾಳಿತನದ ಪರಿಣಾಮವಾಗಿ ಎನ್​ಬಿಎಫ್​ಸಿ ನೀತಿಗಳಲ್ಲಿ ಬಿಗಿಯಾದ ಧನಸಹಾಯದ ನಿಲುವುಗಳನ್ನು ತೆಗೆದುಕೊಳ್ಳಲಾಯಿತು.

ಆರ್ಥಿಕತೆಯಲ್ಲಿ ಬ್ಯಾಂಕ್​ಗಳಿಗೆ ಆಸ್ತಿಯ ಅಪಾಯಗಳು ಹೆಚ್ಚಾಗುತ್ತಿವೆ. ಇದು ಸಾಲ ಒದಗಿಸುವುದಕ್ಕಾಗಿ ಬ್ಯಾಂಕ್​ಯೇತರ ಸಾಲಗಾರರ ಮೇಲೆ ಹೆಚ್ಚು ಅವಲಂಬಿತವಾಗಿದೆ. ನಗದು ಬಿಕ್ಕಟ್ಟಿನಿಂದಾಗಿ ಎನ್‌ಬಿಎಫ್‌ಸಿಗಳು ಸಾಲವನ್ನು ಕಡಿಮೆ ಮಾಡಲು ಒತ್ತಾಯಿಸುತ್ತಿವೆ. ಬ್ಯಾಂಕೇತರ ಸಾಲಗಾರರನ್ನು ಅವಲಂಬಿಸಿರುವ ಸಾಲಗಾರರಿಗೆ ಹಣಕಾಸಿನ ಅಡಚಣೆಗೆ ಕಾರಣವಾಗಲಿದೆ ಎಂದು ತಿಳಿಸಿದೆ.

ಕಂಪನಿಗಳು ಅಥವಾ ಷೇರುದಾರರನ್ನು ಅಥವಾ ಪ್ರವರ್ತಕರನ್ನು ನಿಯಂತ್ರಿಸಲು ಎನ್‌ಬಿಎಫ್‌ಸಿ ಕ್ರೆಡಿಟ್ ನೀಡುತ್ತಿದೆ. ಇದೂ ಸಹ ಬ್ಯಾಂಕ್​ಗಳಿಗೆ ಆಸ್ತಿ ಅಪಾಯದ ಮೂಲವಾಗಿದೆ. ಕಾರ್ಪೊರೇಟ್ ಪ್ರವರ್ತಕರು ತಮ್ಮ ಕಂಪನಿಯ ಷೇರುಗಳನ್ನು ಸಾಲ ಪಡೆಯಲು ಹಾಗೂ ಬಾಹ್ಯ ವ್ಯವಹಾರಗಳ ಹೂಡಿಕೆಗೆ ಎನ್‌ಬಿಎಫ್‌ಸಿ ಅಥವಾ ಮ್ಯೂಚುವಲ್ ಫಂಡ್‌ಗಳನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಬ್ಯಾಂಕ್​ಗಳಿಗೆ ಅಪಾಯ ಹೇಗೆ ಎದುರಾಗಲಿದೆ ಎಂದರೆ ದುರ್ಬಲ ಆಡಳಿತ ಹೊಂದಿರುವ ಪ್ರವರ್ತಕರು ಕಂಪನಿಯ ಸಂಪನ್ಮೂಲಗಳನ್ನು ತಮ್ಮ ಸಾಲ ಮರುಪಾವತಿಸಲು ಬಳಸಿಕೊಳ್ಳಬಹುದು. ಇದರಿಂದಾಗಿ ಅವರ ವ್ಯವಹಾರಗಳಿಗೆ ಆರ್ಥಿಕ ಹಾನಿಯಾಗುತ್ತದೆ. ಇದರ ನೇರ ಪರಿಣಾಮ ಬ್ಯಾಂಕ್​ಗಳ ಮೇಲೆ ಬೀರಲಿದ್ದು, ಬ್ಯಾಂಕ್​ಗಳಿಂದ ಪಡೆದ ಸಾಲವನ್ನು ಡೀಫಾಲ್ಟ್ (ವಸೂಲಾಗದೆ) ಆಗಿ ಉಳಿಯಬಹುದು ಎಂದು ವರದಿಯಲ್ಲಿ ತಿಳಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.