ನವದೆಹಲಿ: ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವ ಆಸಕ್ತಿಯನ್ನು ಹೊಂದಿಲ್ಲ. ನನ್ನ ಕುಟುಂಬಸ್ಥರೊಂದಿಗೆ ಸುಖಿ ಜೀವನ ಸಾಗಿಸುತ್ತಿದ್ದೇನೆ. ರಾಜಕೀಯ ಸೇರಿ ನನ್ನ ಜೀವನ ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಒಂದು ವೇಳೆ ನಾನು ರಾಜಕೀಯಕ್ಕೆ ಸೇರಿದರೆ ನನ್ನ ಪತ್ನಿ ನನ್ನ ಜೊತೆ ಇರುವುದಿಲ್ಲ. ಪ್ರಸ್ತುತ ರಾಜಕೀಯದಲ್ಲಿ ಬರೀ ಗದ್ದಲವೇ ತುಂಬಿದೆ. ಈ ಕುರಿತು ನನಗೆ ಯಾವುದೇ ಆಸಕ್ತಿ ಇಲ್ಲ. ಇಲ್ಲಿ ಯಾರೊಬ್ಬರೂ ಭಾಷಣಗಳನ್ನು ಮಾಡಿ ಮತಗಳನ್ನು ಪಡೆಯುವಂತಹ ವಾತಾವರಣವಿದೆ ಎಂದು ರಾಜನ್ ಅಭಿಪ್ರಾಯಪಟ್ಟರು.
ಒಂದು ವೇಳೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೇ ರಾಜನ್ ಸಚಿವರಾಗಲಿದ್ದಾರೆ ಎಂಬ ಊಹೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ನನ್ನ ಬರವಣಿಗೆಯಲ್ಲಿ ಕೆಲವು ಪಕ್ಷಗಳಿಗೆ ಅನುಕೂಲವಾಗುವಂತಹ ಅಂಶಗಳಿವೆ ಎನ್ನಲಾಗುತ್ತಿದೆ. ನಿಮಗೆ ನನ್ನ ನಿಲುವಿನ ಬಗ್ಗೆ ತಿಳಿದಿದೆ. ಈಗ ನಾನು ಎಲ್ಲಿದ್ದೇನೋ ಅಲ್ಲಿ ಸಂತೋಷವಾಗಿದ್ದೇನೆ. ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ ಎಂದರು
ಇನ್ನೂ ಸಾಗಬೇಕಾದ ದೂರ ಬಹಳವಿದೆ. ದುರದೃಷ್ಟವಶಾತ್, ನಾನು ಇಲ್ಲಿ ಮಾಡಿದ ಕೆಲಸ ಎಲ್ಲರಿಗೆ ಅರ್ಥೈಸಿಕೊಳ್ಳಲು ಸಾಧ್ಯವಾಗಿಲ್ಲ. ನನ್ನ ಮೊದಲ ನಡೆಯು ಸಾರ್ವಜನಿಕ ವಲಯದಲ್ಲಿದೆ, ಶಿಕ್ಷಣ ಕ್ಷೇತ್ರದಲ್ಲಿದೆ ಎಂದು ತಿಳಿಸಿದ್ದಾರೆ.
ಆರ್ಥಿಕವಾಗಿ ಮುಂದುವರಿಯುವುದು ಉತ್ತಮವೇನೋ ಸರಿ. ಶೇ 7ರಷ್ಟು ಜಿಡಿಪಿ ಅಭಿವೃದ್ದಿ ಎಂಬುದೂ ಸರಿ. ಆದರೆ, ಈ ಅಭಿವೃದ್ಧಿ ಉದ್ಯೋಗ ಸೃಷ್ಟಿ ಆಗಿದ್ದರಿಂದಲೋ ಅಥವಾ ಉದ್ಯೋಗವಿಲ್ಲದೆಯೋ ನಡೆದಿದೆಯೇ ಎಂದು ಪ್ರಶ್ನಿಸಿದ್ದಾರೆ. ನಮ್ಮ ಆರ್ಥಿಕ ಬೆಳವಣಿಗೆಯು ಕೆಲವು ಆತಂಕಗಳನ್ನು ಒಳಗೊಂಡಿದೆ. ಪ್ರಪಂಚದ ಆರ್ಥಿಕ ಚೌಕಟ್ಟು ಬದಲಿಸಲು ಸಾಧ್ಯವೆೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ಇದಕ್ಕೆ ದೀರ್ಘಕಾಲದ ಸಮಯ ಸಹ ಬೇಕಾಗುತ್ತದೆ. ಸರ್ಕಾರಗಳು ಸಾಕಷ್ಟು ಎಚ್ಚರಿಕೆಯಿಂದ ಮಾಪನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.