ETV Bharat / business

'ಎಂಎಸ್​ಎಂಇ'ಗಳು ಭಾರತದ ಆರ್ಥಿಕ ಬೆಳವಣಿಗೆಯ ಎಂಜಿನ್​: RBI ಗವರ್ನರ್​

ಎಂಎಸ್ಎಂಇ ವಲಯವು ಆರ್ಥಿಕತೆಯ ಬೆಳವಣಿಗೆಯ ಇಂಜಿನ್ ಆಗಿ ಹೊರಹೊಮ್ಮಿದೆ. 6.33 ಕೋಟಿ ಉದ್ಯಮಗಳ ಜಾಲವು ನಾಮಮಾತ್ರ ಜಿಡಿಪಿಗೆ 30 ಪ್ರತಿಶತ ಮತ್ತು ರಫ್ತಿಗೆ ಶೇ 48ರಷ್ಟು ಕೊಡುಗೆ ನೀಡುತ್ತದೆ. ಈ ವಲಯವು ಸುಮಾರು 11 ಕೋಟಿ ಜನರನ್ನು ನೇಮಿಸಿಕೊಂಡಿದ್ದು, ಕೃಷಿ ನಂತರ ಎರಡನೇ ಸ್ಥಾನದಲ್ಲಿದೆ.

MSME sector
MSME sector
author img

By

Published : Feb 25, 2021, 3:55 PM IST

ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವಲಯವು ಆರ್ಥಿಕತೆಯ ಬೆಳವಣಿಗೆಯ ಎಂಜಿನ್ ಆಗಿ ಹೊರಹೊಮ್ಮಿದೆ. ಪ್ರಸಕ್ತ ಹಣಕಾಸು ವರ್ಷದ (2020-21) ಕೋವಿಡ್ ನೇತೃತ್ವದ ಕುಸಿತದ ನಂತರ ಪುನರುಜ್ಜೀವನದ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಎಂಎಸ್ಎಂಇ ಆರ್ಥಿಕತೆಯ ಬೆಳವಣಿಗೆಯ ಎಂಜಿನ್ ಆಗಿ ಹೊರಹೊಮ್ಮಿದೆ. ಸುಮಾರು 6.33 ಕೋಟಿ ಉದ್ಯಮಗಳ ವಿಶಾಲವಾದ ನೆಟ್​ವರ್ಕ್, ನಮ್ಮ ನಾಮಮಾತ್ರ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ 30ರಷ್ಟು ಮತ್ತು ರಫ್ತಿ ವಹಿವಾಟಿಗೆ 48 ಪ್ರತಿಶತದಷ್ಟು ಕೊಡುಗೆ ನೀಡಿದೆ ಎಂದು ಬಾಂಬೆ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್​​ ಇಂಡಸ್ಟ್ರಿಯ 185ನೇ ಪ್ರತಿಷ್ಠಾನ ದಿನಾಚರಣೆ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದರು.

ದೇಶಾದ್ಯಂತ ಡಿಜಿಟಲ್ ಪಾವತಿ ಮತ್ತು ಡಿಜಿಟಲ್ ಪ್ರವೇಶಾತಿ ಹೆಚ್ಚಿಸಲು ದಾಸ್ ಕರೆ ನೀಡಿದರು.

ಇದನ್ನೂ ಓದಿ: ಕ್ರಿಪ್ಟೋಕರೆನ್ಸಿಗಿಂತ ಭಿನ್ನವಾದ ಡಿಜಿಟಲ್​ ಕರೆನ್ಸಿ ತರಲಿದೆ ಆರ್​ಬಿಐ: ಶಕ್ತಿಕಾಂತ ದಾಸ್​

ಡಿಜಿಟಲ್ ಸಾಮರ್ಥ್ಯಗಳು ಸುಧಾರಿಸಿದಂತೆ ಸಂಪರ್ಕ ಸಾಧನವು ಸರ್ವವ್ಯಾಪಿ ತಾಂತ್ರಿಕ ಆವಿಷ್ಕಾರ ಮತ್ತು ತಂತ್ರಜ್ಞಾನ - ಚಾಲಿತ ಕ್ರಾಂತಿ ಭಾರತದ ಆರ್ಥಿಕತೆಯನ್ನು ತ್ವರಿತವಾಗಿ ಮತ್ತು ಆಮೂಲಾಗ್ರವಾಗಿ ಬದಲಾಯಿಸಲು ಮುಂದಾಗಿದೆ ಎಂದು ಹೇಳಿದರು.

ಕೃಷಿ, ಉತ್ಪಾದನೆ ಮತ್ತು ವ್ಯವಹಾರಗಳ ಉತ್ಪಾದಕತೆ ಹೆಚ್ಚಿಸುವುದರ ಜೊತೆಗೆ ಆರೋಗ್ಯ ಸೇವೆ ಮತ್ತು ಶಿಕ್ಷಣದಂತಹ ಸಾರ್ವಜನಿಕ ಸೇವೆಗಳ ವಿತರಣೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಡಿಜಿಟಲ್ ತಂತ್ರಜ್ಞಾನ ಹೊಂದಿದೆ ಎಂದರು.

ಕೋವಿಡ್ -19 ಪ್ರಾರಂಭವಾದ ನಂತರ ಎಂಎಸ್‌ಎಂಇಗಳು ದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಮುನ್ನಡೆಸುತ್ತಿವೆ. ಆದರೆ, ಅನೇಕ ಸಂಪರ್ಕ ಸೇವೆಗಳ ಉಪ - ವಲಯಗಳು ಬಿಕ್ಕಟ್ಟಿನಿಂದ ತೀವ್ರವಾದ ಪರಿಣಾಮ ಎದುರಿಸುತ್ತಿವೆ ಎಂದು ದಾಸ್ ಹೇಳಿದರು.

ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯು ಭಾರತವನ್ನು ಜಾಗತಿಕ ಮೌಲ್ಯ ಸರಪಳಿಯ ಅವಿಭಾಜ್ಯ ಅಂಗವನ್ನಾಗಿ ಮಾಡುವ ಗುರಿ ಹೊಂದಿದೆ. ಇದು ಕಾರ್ಮಿಕ ಮಾರುಕಟ್ಟೆಯಲ್ಲಿನ ಸುಧಾರಣೆಗಳ ಜೊತೆಗೆ ಉತ್ಪಾದನಾ ವಲಯಕ್ಕೆ ಬೆಳವಣಿಗೆಯನ್ನು ಉನ್ನತ ಮಾರ್ಗದತ್ತ ತಳ್ಳುವಲ್ಲಿ ಹಾಗೂ ಉದ್ಯೋಗ ಸಾಮರ್ಥ್ಯವನ್ನು ಪಡೆದುಕೊಳ್ಳುವಲ್ಲಿ ಬಹು ದೂರಕ್ಕೆ ಕರೆದೊಯ್ಯಬಹುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.