ನವದೆಹಲಿ: ಕೋವಿಡ್ -19 ಪ್ರೇರೇಪಿತ ಸಾಲ ಕುಸಿತ ಅಲ್ಪಾವಧಿಯದ್ದು. ಆದರೆ, ಬಹುತೇಕ ಆರ್ಥಿಕತೆಗಳು 2022ರ ತನಕ ಸಾಂಕ್ರಾಮಿಕಪೂರ್ವ ಚಟುವಟಿಕೆಯ ಮಟ್ಟಕ್ಕೆ ಮರಳುವುದಿಲ್ಲ ಎಂದು ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ ತಿಳಿಸಿದೆ.
2020ರ ಮಾರ್ಚ್ 11ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೋವಿಡ್ -19 ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿತ್ತು. ಆ ವರ್ಷದಲ್ಲಿ ವೈರಸ್ ಜಾಗತಿಕ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿದೆ. ಬಾಂಡ್ ದಿವಾಳಿತನ ಹೆಚ್ಚಳದೊಂದಿಗೆ ಸಾಲದ ಪ್ರಮಾಣ ಕುಸಿತಕ್ಕೂ ಕಾರಣವಾಗಿದೆ.
ಕೋವಿಡ್‌ನಿಂದ ಉಂಟಾಗುವ ಸಾಲದ ಸವಾಲುಗಳು ಗಣನೀಯವಾಗಿವೆ. ಈ ಸಾಲದ ಕುಸಿತವು ತುಲನಾತ್ಮಕವಾಗಿ ಅಲ್ಪಕಾಲಿಕವಾಗಿರುತ್ತದೆ. ಸಾಮಾನ್ಯ ಚಟುವಟಿಕೆಗಳ ಮೇಲಿನ ನಿರ್ಬಂಧಗಳಿಗೆ ಹೆಚ್ಚು ಗುರಿಯಾಗುವ ಕ್ಷೇತ್ರಗಳಿಗೆ ಅಪಾಯಗಳು ಹೆಚ್ಚು ಮಹತ್ವದ್ದಾಗಿವೆ ಎಂದು ಮೂಡಿಸ್ ಕೊರೊನಾ ವೈರಸ್ನ ಜಾಗತಿಕ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಅಮೆರಿಕ ಸರ್ಕಾರ ಸೇರಿ 48 ರಾಜ್ಯಗಳು FB ವಿರುದ್ಧ ಅಪನಂಬಿಕೆ ಪ್ರಶ್ನೆ: ಕೋರ್ಟ್ ಕದತಟ್ಟಿದ ಫೇಸ್ಬುಕ್
2022ರವರೆಗೆ ಹೆಚ್ಚಿನ ಆರ್ಥಿಕತೆಗಳು ಸಾಂಕ್ರಾಮಿಕಪೂರ್ವ ಚಟುವಟಿಕೆಯ ಮಟ್ಟಕ್ಕೆ ಹಿಂತಿರುಗುವುದಿಲ್ಲ. ನಿಧಾನ ಮತ್ತು ಏರಿಕೆಯ ಜಾಗತಿಕ ಚೇತರಿಕೆ ಮತ್ತು ಸ್ಥೂಲ ಆರ್ಥಿಕ ದೃಷ್ಟಿಕೋನದ ಸುತ್ತ ವ್ಯಾಪಿಸಿರುವ ಅನಿಶ್ಚಿತತೆಯು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದಿದೆ ಎಂದು ನಿರೀಕ್ಷಿಸಲಾಗಿದೆ ಎಂದಿದೆ.
ಸಾಂಕ್ರಾಮಿಕ ರೋಗವು ಕಡಿಮೆಯಾದ ನಂತರ ಆರ್ಥಿಕ ಚಟುವಟಿಕೆಗಳು ಹಾಗೂ ಹಣಕಾಸು ಮಾರುಕಟ್ಟೆಗಳನ್ನು ಬೆಂಬಲಿಸಲು ವಿತ್ತೀಯ ನೀತಿಗಳು ಮುಂದುವರಿಯುತ್ತವೆ. ಸಾಂಕ್ರಾಮಿಕ ರೋಗವು ಸರಿದ ಬಳಿಕ ನೀತಿ ನಿರೂಪಕರು ಆರ್ಥಿಕ ಚಟುವಟಿಕೆಯನ್ನು ಕೆಲವು ವರ್ಷಗಳ ತನಕ ಬೆಂಬಲಿಸುತ್ತಲೇ ಇರುತ್ತಾರೆ ಎಂದು ಹೇಳಿದರು.