ನವದೆಹಲ್ಲಿ: ಪ್ರಸಕ್ತ 2020ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಮಾರ್ಚ್ ತಿಂಗಳಲ್ಲಿನ ಶೇ 2.5ರಿಂದ ಶೇ 0.2ಕ್ಕೆ ತಲುಪಲಿದೆ ಎಂದು ಮೂಡೀಸ್ ಇನ್ವೆಸ್ಟರ್ ಸರ್ವಿಸ್ ಅಂದಾಜಿಸಿದೆ.
2021ಕ್ಕೆ ಭಾರತದ ಬೆಳವಣಿಗೆಯು ಶೇ 6.2ಕ್ಕೆ ತಲುಪಲಿದೆ ಎಂದು ಮೂಡಿಸ್ ಆಶಿಸಿದೆ.
ಗ್ಲೋಬಲ್ ಮ್ಯಾನುಯಲ್ ಔಟ್ಲುಕ್ 2020-21 (ಏಪ್ರಿಲ್ 2020 ) ಶೀರ್ಷಿಕೆಯಲ್ಲಿ ತನ್ನ ವರದಿ ಬಿಡುಗಡೆ ಮಾಡಿದೆ. ಮುಂದುವರೆದ ಜಿ - 20 ಆರ್ಥಿಕತೆ ರಾಷ್ಟ್ರಗಳು 2020ರಲ್ಲಿ ಶೇ 5.8ರಷ್ಟು ತಗ್ಗಬಹುದು ಎಂದು ಅಂದಾಜಿಸಿದೆ.
ಜಾಗತಿಕ ಆರ್ಥಿಕತೆಯ ಪ್ರಗತಿಗೆ ಕೊರೊನಾ ವೈರಸ್ ಸೃಷ್ಟಿಸಿರುವ ಬಿಕ್ಕಟ್ಟಿನ ವೆಚ್ಚಗಳು ಹಾಗೂ ಹಲವು ರಾಷ್ಟ್ರಗಳಲ್ಲಿನ ಲಾಕ್ಡೌನ್ ದೊಡ್ಡ ಅಡ್ಡಿಯಾಗಿದೆ.
ಚೀನಾದ ಆರ್ಥಿಕತೆಯು 2020ರಲ್ಲಿ ಶೇ 1ರಷ್ಟು ಬೆಳವಣಿಗೆ ಹೊಂದುವ ಮುನ್ಸೂಚನೆ ಇದೆ ಎಂದಿದೆ.
ಭಾರತ 21 ದಿನಗಳ ದೇಶವ್ಯಾಪಿ ಲಾಕ್ಡೌನ್ 40 ದಿನಗಳಿಗೆ ವಿಸ್ತರಿಸಿತು. ಏಪ್ರಿಲ್ 20ರ ನಂತರ ಕೃಷಿ ಕೊಯ್ಲಿಗೆ ಅನುಕೂಲವಾಗುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಡಿಲಿಕೆಯ ನಿರ್ಬಂಧ ಹಾಕಿತು.