ನವದೆಹಲಿ: ಭಾರತವನ್ನು ಜಾಗತಿಕ ಹೂಡಿಕೆಯ ತಾಣವನ್ನಾಗಿ ಮಾಡಲು ಆರ್ಥಿಕ ಸುಧಾರಣೆಗಳು ಮುಂದುವರಿಯುತ್ತವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂಡಿಯನ್ ಇಂಕಾಗೆ ಭರವಸೆ ನೀಡಿದ್ದಾರೆ.
ಕೈಗಾರಿಕಾ ಒಕ್ಕೂಟ ಸಿಐಐ ಆಯೋಜಿಸಿದ ರಾಷ್ಟ್ರೀಯ ಎಂಎನ್ಸಿ ಸಮ್ಮೇಳನ 2020 ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ಸಾಂಕ್ರಾಮಿಕ ರೋಗವು ಸೃಷ್ಟಿಸಿದ ಬಿಕ್ಕಟ್ಟನ್ನು ಭಾರತವು ಆರ್ಥಿಕ ಸುಧಾರಣೆಗಳನ್ನು ನೂಕುವ ಅವಕಾಶವಾಗಿ ಪರಿವರ್ತಿಸಿದೆ. ಸುಧಾರಣೆಗಳನ್ನು ಕಾಣದ ಹಲವು ಅವಕಾಶಗಳು ದಶಕಗಳಿಂದ ಬಾಕಿ ಉಳಿದಿದ್ದವು ಎಂದರು.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದಿಟ್ಟವಾದ ಸುಧಾರಣೆಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ನಾವು ಕಳೆದುಕೊಂಡಿಲ್ಲ. ದಶಕಗಳಿಂದ ಬೆಳಕನ್ನು ಕಾಣದಂತಹ ಅನೇಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಈ ಸುಧಾರಣೆಯ ಆವೇಗ ಮುಂದುವರಿಯುತ್ತದೆ. ಇನ್ನು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸೀತಾರಾಮನ್ ಹೇಳಿದರು.
ಹಣಕಾಸು ವಲಯವನ್ನು ವೃತ್ತಿಪರಗೊಳಿಸಲಾಗುತ್ತಿದೆ ಮತ್ತು ಸರ್ಕಾರವು ಹೂಡಿಕೆ ಕಾರ್ಯಸೂಚಿಯನ್ನು ಮುಂದುವರಿಸಲಿದೆ ಎಂದು ಅಭಯ ನೀಡಿದರು.