ETV Bharat / business

14 ಹೊಸ ಸೀಪ್ಲೇನ್ ಸ್ಥಾಪನೆಗೆ ಮೋದಿ ಸರ್ಕಾರ ಪ್ಲಾನ್​: 41 ಜಲಾಶಯಗಳಿರುವ ಕರ್ನಾಟಕಕ್ಕೆ ಒಂದೂ ಇಲ್ಲ!

author img

By

Published : Nov 2, 2020, 5:22 PM IST

ಕರ್ನಾಟಕದ 41 ಅಣೆಕಟ್ಟೆ ಸೇರಿದಂತೆ ದೇಶದಲಿ ಒಟ್ಟು 736 ಜಲಾಶಗಳಿವೆ. ಅಣೆಕಟ್ಟುಗಳ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ (5,334). ಆದರೆ, ಕರ್ನಟಕಕ್ಕೆ ಒಂದು ಸೀಪ್ಲೇನ್ ಸ್ಥಾಪನೆಯ ಗುರಿಯನ್ನು ಇರಿಸಿಕೊಂಡಿಲ್ಲ. ಮೋದಿ ತವರು ಗುಜರಾತ್​ನಲ್ಲಿ ಈಗಿನ ಸ್ಲೀಪೇನ್​ ಸೇರಿ ಹೊಸದಾಗಿ ಎರಡು ಪ್ರದೇಶಗಳಲ್ಲಿ ಸ್ಥಾಪಿಸಲು ಯೋಜಿಸುತ್ತಿದೆ..

water aerodromes
ವಾಟರ್​ ಏರೋಡ್ರೋಮ್

ನವದೆಹಲಿ: ಸರ್ದಾರ್‌ ವಲ್ಲಭಭಾಯ್‌ ಪಟೇಲ್ ಏಕತಾ ಪ್ರತಿಮೆ ಮತ್ತು ಸಬರಮತಿ ನದಿಯ ಮಧ್ಯೆ ಭಾರತದ ಮೊದಲ ಸೀಪ್ಲೇನ್ ಸೇವೆಯನ್ನು ಪ್ರಧಾನಿ ಮೋದಿ ಅವರು ಯಶಸ್ವಿಯಾಗಿ ಚಾಲನೆ ನೀಡಿದ ಬಳಿಕ, ದೇಶಾದ್ಯಂತ 14 ಸೀಪ್ಲೇನ್​ ಸ್ಥಾಪನೆಗೆ ಚಿಂತನೆ ನಡೆಸುತ್ತಿದ್ದಾರೆ.

ಕರ್ನಾಟಕದ 41 ಅಣೆಕಟ್ಟೆ ಸೇರಿದಂತೆ ದೇಶದಲಿ ಒಟ್ಟು 736 ಜಲಾಶಗಳಿವೆ. ಅಣೆಕಟ್ಟುಗಳ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ (5,334). ಆದರೆ, ಕರ್ನಟಕಕ್ಕೆ ಒಂದು ಸೀಪ್ಲೇನ್ ಸ್ಥಾಪನೆಯ ಗುರಿಯನ್ನು ಇರಿಸಿಕೊಂಡಿಲ್ಲ.

ಸರ್ದಾರ್‌ ವಲ್ಲಭಭಾಯ್‌ ಪಟೇಲ್ ಏಕತಾ ಪ್ರತಿಮೆ ಮತ್ತು ಸಬರಮತಿ ನದಿಯ ಮಧ್ಯೆ ಭಾರತದ ಮೊದಲ ಸೀಪ್ಲೇನ್ ಸೇವೆಯನ್ನು ಅ.31ರಂದು ಪ್ರಧಾನಿ ಉದ್ಘಾಟಿಸಿದ್ದರು. ಈ ವಿಮಾನ ಸಬರಮತಿ ನದಿಯಿಂದ ಕೆವಾಡಿಯಾದ ಬಳಿಯಿರುವ ಏಕತಾ ಪ್ರತಿಮೆ ನಡುವೆ ಸಂಪರ್ಕ ಒದಗಿಸಲಿದೆ. ಈ ಯಶಸ್ಸಿನ ಬಳಿಕ ಕೇಂದ್ರ ಸರ್ಕಾರವು ಇನ್ನೂ 14 ವಾಟರ್​ ಏರೋಡ್ರೋಮ್‌ ಸ್ಥಾಪಿಸಲು ಯೋಜಿಸುತ್ತಿದೆ.

ಈ ಏರೋಡ್ರೋಮ್‌ಗಳು ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ಅಸ್ಸೋಂ, ಉತ್ತರಾಖಂಡ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸೀಪ್ಲೇನ್ ಸೇವೆಗೆ ಅನುಕೂಲ ಮಾಡಿಕೊಡಲಿವೆ ಎಂದು ಬಂದರು ಸಚಿವಾಲಯದ ಅಧಿಕಾರಿ ಹೇಳಿಕೆಯನ್ನು ಪಿಟಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆರ್‌ಸಿಎಸ್ ಉಡಾನ್ ಯೋಜನೆಯಡಿ 14 ಏರೋಡ್ರೋಮ್‌ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗುತ್ತಿದೆ.

ಜಲಮಾರ್ಗ ಸಮೀಕ್ಷೆ ನಡೆಸಲು ಭಾರತದ ಜಲಮಾರ್ಗ ಪ್ರಾಧಿಕಾರವನ್ನು (ಐಡಬ್ಲ್ಯುಎಐ) ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕೋರಿದೆ. ಜೊತೆಗೆ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಜೆಟ್ಟಿಗಳನ್ನು ನಿರ್ಮಿಸಲು ಸಹಾಯ ಮಾಡುವಂತೆ ಮನವಿ ಮಾಡಿದೆ.

ಬಂದರು ಸಚಿವಾಲಯದ ಪ್ರಕಾರ, ಸಂಭಾವ್ಯ ಸ್ಥಳಗಳಲ್ಲಿ ಉತ್ತರಾಖಂಡ ರಾಜ್ಯದ ತೆಹ್ರಿ ಅಣೆಕಟ್ಟು, ಮಹಾರಾಷ್ಟ್ರದ ಖಿಂಡ್ಸಿ ಅಣೆಕಟ್ಟು ಮತ್ತು ಎರೈ ಅಣೆಕಟ್ಟು, ಗುವಾಹಟಿ ನದಿಯ ಮುಂಭಾಗ, ಅಸ್ಸೋಂನ ಉಮ್ರಾಂಗ್ಸೊ ಜಲಾಶಯ, ಆಂಧ್ರಪ್ರದೇಶದ ಪ್ರಕಾಶಂ ಬ್ಯಾರೇಜ್, ಅಂಡಮಾನ್‌ ಮತ್ತು ನಿಕೋಬಾರ್​ನ ಹ್ಯಾವ್ಲಾಕ್, ನೀಲ್, ಲಾಂಗ್ ಮತ್ತು ಹಟ್​ಬೇ, ಲಕ್ಷದ್ವೀಪದ ಮಿನಿಕಾಯ್ ಮತ್ತು ಕವರಟ್ಟಿ ಹಾಗೂ ಗುಜರಾತ್ ರಾಜ್ಯದ ಧಾರೊಯ್ ಮತ್ತು ಶತ್ರುಂಜಯ ಪ್ರದೇಶಗಳಿವೆ. ತೇಲುವ ಜೆಟ್​, ಹೈಡ್ರೋಗ್ರಾಫಿಕ್ ಸಮೀಕ್ಷೆ ಮತ್ತು ನ್ಯಾವಿಗೇಷನಲ್ ಬಾಯ್‌ ಅನ್ನು ಐಡಬ್ಲ್ಯೂಎಐಗೆ ವಹಿಸಲಾಗಿದೆ.

ಡಿಜಿಎಲ್‌ಎಲ್ ಡಿಜಿಪಿಎಸ್ ತಂತ್ರಜ್ಞಾನ ಬಳಸಿಕೊಂಡು ಜಿಪಿಎಸ್ ಸಿಗ್ನಲ್‌ಗಳಿಗೆ ತಾತ್ಕಾಲಿಕ ತಿದ್ದುಪಡಿಗಳನ್ನು ಒದಗಿಸುವ ವ್ಯವಸ್ಥೆಯಾಗಿದ್ದು, ಗುಜರಾತ್ ರಾಜ್ಯದಲ್ಲಿ ರನ್‌ವೇ ಮತ್ತು ಆಳವಿಲ್ಲದ ನೀರಿನ ಮೇಲೆ ಹಗಲಿಬ ವೇಳೆ ಸೀಪ್ಲೇನ್​ ಸೇವೆಗೆ ಆಯ್ಕೆ ಮಾಡಲಾಗಿದೆ.

ಭವಿಷ್ಯದಲ್ಲಿ ರಾತ್ರಿ ಕಾರ್ಯಾಚರಣೆಗಾಗಿ ಸ್ವಯಂಚಾಲಿತ ನ್ಯಾವಿಗೇಷನ್ ದೀಪಗಳನ್ನು ಸರಿಪಡಿಸಲು ಬಾಯ್‌ಗಳ ಮೇಲೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ನೋ-ಫ್ರಿಲ್ಸ್ ಕ್ಯಾರಿಯರ್ ಸ್ಪೈಸ್ ಜೆಟ್ ಮೊದಲ ಸೀಪ್ಲೇನ್ ಸೇವೆಗಾಗಿ ಮಾಲ್ಡೀವ್ಸ್​ನಿಂದ ಸೀಪ್ಲೇನ್ ಅನ್ನು ಚಾರ್ಟರ್ ಮಾಡಿಕೊಳ್ಳಲಾಗಿದೆ. ಇತರ ಸ್ಥಳಗಳಲ್ಲಿ ಸೇವೆಗಳು ಪ್ರಾರಂಭವಾದ ನಂತರ ಅಂತಹ ಹೆಚ್ಚಿನ ಸೀಪ್ಲೇನ್​ಗಳನ್ನು ತರಿಸಿಕೊಳ್ಳಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.