ETV Bharat / business

ಚೀನಾ - ಪಾಕ್​ ಗಡಿ ಸವಾಲು: 4,78 ಲಕ್ಷ ಕೋಟಿ ರೂ. ಗೇರಿದ ರಕ್ಷಣಾ ಬಜೆಟ್​ ಗಾತ್ರ - ಕೇಂದ್ರ ಬಜೆಟ್​

ಸರಕಾದ ಸಾಧಾರಣ ಹೆಚ್ಚಳವನ್ನು ರಕ್ಷಣಾ ಬಜೆಟ್‌ನಲ್ಲಿ ಮಾಡಿದೆ. ಕಳೆದ ಬಾರಿಯ ಪರಿಷ್ಕೃತ ವೆಚ್ಚದಿಂದ (ಆರ್‌ಇ- 4,71,000 ಕೋಟಿ ರೂಪಾಯಿ) ರಕ್ಷಣಾ ಹಂಚಿಕೆ ಈ ಬಾರಿ 4,78,000 ಕೋಟಿ ರೂಪಾಯಿಗೆ ಬಜೆಟ್‌ ಹಂಚಿಕೆ ಹೆಚ್ಚಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ, ಇದು ಈಗಿನ ವಿನಿಮಯ ದರದ ಪ್ರಕಾರ 65.48 ಬಿಲಿಯನ್‌ ಅಮೆರಿಕನ್‌ ಡಾಲರ್‌ಗಳಷ್ಟು ಹೆಚ್ಚಳ.

DEFENCE
DEFENCE
author img

By

Published : Feb 2, 2021, 7:08 PM IST

2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಜಗತ್ತಿನ ಉದ್ದಗಲಕ್ಕೂ ತಾಂಡವವಾಡಿ, ಜನ ಸಾಮಾನ್ಯರಿಗೆ ಸಾಕಷ್ಟು ತೊಂದರೆ ಉಂಟು ಮಾಡಿದೆ. ದೊಡ್ಡ ಮಟ್ಟದಲ್ಲಿ ಇದು ಜನರನ್ನು ಬಲಿ ತೆಗೆದುಕೊಂಡಿದೆ. ಇಷ್ಟೇ ಅಲ್ಲ. ವಿಶ್ವದ ಎಲ್ಲಾ ದೇಶಗಳಲ್ಲೂ ಇದು ಆರ್ಥಿಕ ಹಾನಿಯನ್ನು ಕೂಡಾ ಉಂಟು ಮಾಡಿದೆ. ಎಲ್ಲಾ ದೇಶಗಳ ಆರ್ಥಿಕತೆಗಳು ಕುಸಿದಿವೆ. ಇದು ನೀತಿ ನಿರೂಪಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರ್ಥಿಕತೆಯ ಪುನಶ್ಚೇತನ ಅತ್ಯಂತ ನಿಧಾನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶಗಳು ತೆಗೆದುಕೊಳ್ಳಬೇಕಾದ ಆರ್ಥಿಕ ನೀತಿ, ಹಲವಾರು ಆರ್ಥಿಕ ಸಂಕಷ್ಟಗಳ ಅಡೆತಡೆ ಎದುರಿಸುತ್ತಿವೆ.

ಈ ವಾಸ್ತವದಿಂದ ಭಾರತ ಕೂಡಾ ಹೊರತಲ್ಲ. ಕೋವಿಡ್‌ ಸಾವು-ನೋವು-ಆರ್ಥಿಕ ಸಂಕಷ್ಟಗಳ ಸರಮಾಲೆಯ ನಡುವೆಯೇ ಸೋಮವಾರ ಭಾರತದ ವಾರ್ಷಿಕ ಬಜೆಟ್‌ ೨೦೨೧-೨೨ರ ಮಂಡನೆಯಾಗಿದೆ. ಸಾರ್ವಜನಿಕ ಆರೋಗ್ಯ ಹಾಗೂ ಯೋಗ ಕ್ಷೇಮ ಹೊರತುಪಡಿಸಿ, ಉಳಿದೆಲ್ಲಾ ಕ್ಷೇತ್ರಗಳೂ ಈ ಆರ್ಥಿಕ ಕೊರತೆಯ ಬಿಗಿ ನಿಲುವಿನ ಗುಣಲಕ್ಷಣವನ್ನು ಎದುರಿಸಿವೆ.
ನಿರೀಕ್ಷೆಯಂತೆಯೆ, ಈ ಬಜೆಟ್‌ನಲ್ಲಿ ಅತಿ ಹೆಚ್ಚಿನ ಮೊತ್ತ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಮೀಸಲಾಗಿದೆ. ಆರೋಗ್ಯ ರಕ್ಷಣೆ, ಮತ್ತು ಸಂಬಂಧಿತ ಮೂಲಸೌಕರ್ಯ ಮತ್ತು ಇತರೆ ಖರ್ಚುಗಳಿಗೆ, ಏಪ್ರಿಲ್‌ ೧ರಿಂದ ಆರಂಭವಾಗುವ ಹೊಸ ಆರ್ಥಿಕ ವರ್ಷ 2021-22ರಲ್ಲಿ 2,23,846 ಕೋಟಿ ರೂಪಾಯಿಯನ್ನು ಈ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಇದರ ಜೊತೆಗೆ, ಕೋವಿಡ್‌ ಲಸಿಕೆ ವಿತರಣೆಗೆ 35,000 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ, ಇದು, 137 ಪ್ರತಿಶತದಷ್ಟು ಹೆಚ್ಚು. ಇದು ನಿಜಕ್ಕೂ ಸ್ವಾಗತಾರ್ಹ. ಈ ನಡುವೆ ನಾವು ನೆನಪಿನಲ್ಲಿಟ್ಟುಕೊಳ್ಳ ಬೇಕಾದ ಅಂಶವೆಂದರೆ, ಜಗತ್ತು ಇನ್ನೂ ಕೂಡಾ ಕೋವಿಡ್‌ನಿಂದ ಮುಕ್ತವಾಗಿಲ್ಲ. ಇನ್ನು ೨-೩ಗಳ ಬಳಿಕ, ಜಗತ್ತು, ಕೋವಿಡ್‌ನಿಂದ ಸುರಕ್ಷಿತ ಹಂತಕ್ಕೆ ತಲುಪಬಹುದು. ಅಲ್ಲಿಯವರೆಗೆ, ಈ ಸಾಂಕ್ರಾಮಿಕ ರೋಗ ಎಲ್ಲೂ ಕೂಡಾ ಹಬ್ಬಬಹುದು.

ಇನ್ನು ನಾಗರಿಕರ ಭದ್ರತೆ ಹಾಗೂ ಅವರ ಯೋಗ ಕ್ಷೇಮ ನೋಡಿಕೊಳ್ಳುವುದು ಎಲ್ಲಾ ಸರಕಾರಗಳ ಜವಾಬ್ದಾರಿ. ಇದನ್ನು ನಮ್ಮ ದೇಶದ ಅತಿ ಪ್ರಾಚೀನ ಗ್ರಂಥಗಳಲ್ಲೊಂದಾದ ಚಾಣಕ್ಯ ಬರೆದ ‘ಅರ್ಥಶಾಸ್ತ್ರ’ ದಲ್ಲಿ ಕೂಡಾ ವಿವರಿಸಲಾಗಿದೆ. ಈ ಗ್ರಂಥ ಕೂಡಾ ನಾಗರಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ. ಇದರ ಜೊತೆಗೆ, ಇದಕ್ಕೆ ಸಂಬಂಧಿಸಿರುವ ಇನ್ನೊಂದು ವಿಷಯವೆಂದರೆ, ರಾಷ್ಟ್ರೀಯ ಭದ್ರತೆ. ಇವೆರಡು ಪರಸ್ಪರ ಅವಲಂಬಿತ ಅಂಶಗಳಾಗಿವೆ.

ದೇಶದ ಸಾರ್ವಭೌಮತ್ವವು ರಕ್ಷಣೆ, ಎಲ್ಲಾ ಸರಕಾರಗಳ ಪ್ರಥಮ ಪ್ರಾಶಸ್ತ್ಯದ ಸಂಗತಿ ಹಾಗೂ ಜವಾಬ್ದಾರಿ. ಈ ಮಾತನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ದೇಶದ ಚುನಾಯಿತ ಸರಕಾರದ ನೇತೃತ್ವ ವಹಿಸಿರುವ ಮೋದಿ ಸರಕಾರಕ್ಕೆ ಇದು ಅತ್ಯಂತ ತುರ್ತು ವಿಷಯವಾಗಿದೆ. ಏಕೆಂದರೆ, ಚೀನಾ ಸತತವಾಗಿ ಭಾರತದೊಂದಿಗಿನ ಗಡಿ ಉಲ್ಲಂಘಿಸುತ್ತಿದೆ. ಭಾರತದೊಂದಿಗಿನ ವಾಸ್ತವ ನಿಯಂತ್ರಣ ರೇಖೆಯಲ್ಲಿ ೨೦೨೦ರ ಬೇಸಗೆಯಲ್ಲಿ ಚೀನಾ ನಡೆಸಿದೆ ಆಕ್ರಮಣ, ಅದು ತೋರಿದ ಉದ್ಧಟತನ ನೋಡಿದರೆ, ಸರಕಾರದ ಪಾಲಿಗೆ ಇದೊಂದು ಮಹತ್ವದ ಸಂಗತಿಯಾಗಿದೆ.
ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಈ ವರ್ಷದ ಬಜೆಟ್‌ನಲ್ಲಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಹಂಚಿಕೆಯಾಗುವ ಮೊತ್ತದ ಬಗ್ಗೆ ಬಹು ಕುತೂಹಲವಿತ್ತು. ಈ ಕುತೂಹಲದಲ್ಲಿ ಆಶ್ಚರ್ಯವಿಲ್ಲ ಏಕೆಂದರೆ, ಪರಿಸ್ಥಿತಿ ಅಷ್ಟು ಸೂಕ್ಷ್ಮವಾಗಿದೆ.ನಿರೀಕ್ಷೆಯಂತೆ, ಸರಕಾದ ಸಾಧಾರಣ ಹೆಚ್ಚಳವನ್ನು ರಕ್ಷಣಾ ಬಜೆಟ್‌ನಲ್ಲಿ ಮಾಡಿದೆ. ಕಳೆದ ಬಾರಿಯ ಪರಿಷ್ಕೃತ ವೆಚ್ಚದಿಂದ (ಆರ್‌ಇ- 4,71,000 ಕೋಟಿ ರೂಪಾಯಿ) ರಕ್ಷಣಾ ಹಂಚಿಕೆ ಈ ಬಾರಿ 4,78,000 ಕೋಟಿ ರೂಪಾಯಿಗೆ ಬಜೆಟ್‌ ಹಂಚಿಕೆ ಹೆಚ್ಚಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ, ಇದು ಈಗಿನ ವಿನಿಮಯ ದರದ ಪ್ರಕಾರ 65.48 ಬಿಲಿಯನ್‌ ಅಮೆರಿಕನ್‌ ಡಾಲರ್‌ಗಳಷ್ಟು ಹೆಚ್ಚಳ.

ಈ ಹೆಚ್ಚಳವನ್ನು ಇನ್ನಷ್ಟು ವಿಶ್ಲೇಷಣೆ ನಡೆಸಿದರೆ, ಈ ಮೊತ್ತವು, ಕಳೆದ ಬಾರಿಗಿಂತ ೧.೪೮ರಷ್ಟು ಹೆಚ್ಚಳ. ದೇಶದ ಒಟ್ಟು ನಿವ್ವಳ ಆದಾಯ (ಜಿಡಿಪಿ)ಗೆ ಹೋಲಿಸಿದರೆ ಇದು ಮುಂಬರುವ ಆರ್ಥಿಕ ವರ್ಷದ ಜಿಡಿಪಿಯ ೧.೬೩% ರಷ್ಟಾಗುತ್ತದೆ. ಆದರೆ ೨೦೧೧-೧೨ರಲ್ಲಿ ದೇಶದ ಒಟ್ಟು ಜಿಡಿಪಿಯ 2ರಷ್ಟು ರಕ್ಷಣಾ ಬಜೆಟ್‌ಗೆ ಮೀಸಲಿಡಲಾಗಿತ್ತು. ಅದಕ್ಕೆ ಹೋಲಿಸಿದರೆ, ಮೊತ್ತ ಈಗ ಕಡಿಮೆಯಾಗಿದೆ. ತಜ್ಞರ ಪ್ರಕಾರ, ಭಾರತದ ಸೈನಿಕ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಳಗೊಳಿಸಬೇಕಾದರೆ, ರಕ್ಷಣಾ ಬಜೆಟ್‌ ಮೊತ್ತವನ್ನು ದೇಶದ ಜಿಡಿಪಿಯ ಶೇ 3ರಷ್ಟಕ್ಕೆ ಏರಿಸಬೇಕಿದೆ. ಚೀನಾದ ಸವಾಲಿನ ಹೊರತಾಗಿಯೂ, ಭಾರತ ಹಿಂದಿಗಿಂತ ಕಡಿಮೆ ಖರ್ಚನ್ನು ರಕ್ಷಣಾ ಕ್ಷೇತ್ರದಲ್ಲಿ ಮಾಡಬೇಕಿದೆ. ಇದು ದೇಶ ಎದುರಿಸುತ್ತಿರುವ ನಾನಾ ಸವಾಲುಗಳ ಹೊರತಾಗಿಯೂ, ಒಟ್ಟಾರೆ ಖರ್ಚು ವೆಚ್ಚವನ್ನು ತಗ್ಗಿಸಲು ತೆಗೆದುಕೊಳ್ಳಬೇಕಾದ ಕ್ರಮವಾಗಿದೆ.

ಈ ನಡುವೆ, ರಕ್ಷಣಾ ಕ್ಷೇತ್ರಕ್ಕೆ ವಿನಿಯೋಜಿಸಲಾದ ಮೊತ್ತವನ್ನು ಮತ್ತಷ್ಟು ವಿಭಜಿಸಿ, ಸಂಖ್ಯೆಗಳ ಆಧಾರದಲ್ಲಿ ವಿಶ್ಲೇಷಿಸದರೆ ಇನ್ನೊಂದಿಷ್ಟು ಅಚ್ಚರಿಯ ಸಂಗತಿಗಳು ಕಾಣಸಿಗುತ್ತವೆ. ಅವುಗಳೆಂದರೆ, ಒಟ್ಟು ಘೋಷಿಸಲಾದ 4,78,000 ಕೋಟಿ ರೂ. ಪೈಕಿ 1,16,000 ಕೋಟಿ ರೂಪಾಯಿ ಪಿಂಚಣಿ ಮತ್ತು 3,62,000 ಕೋಟಿ ರೂ. ರಕ್ಷಣಾ ಸೇವೆಗಳಿಗೆ ಮೀಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ಮೊತ್ತದಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿದೆ. ಏಕೆಂದರೆ, ರಕ್ಷಣಾ ಸೇವೆಗಳಿಗೆ ಒಟ್ಟು 3,37,000 ಕೋಟಿಯಿಂದ ರೂ ಒದಗಿಸಲಾಗಿದ್ದು, ಕಳೆದ ಬಾರಿ ಇದು 3,62,000 ಕೋಟಿ ರೂಗಳಾಗಿತ್ತು. ಈ ಮೊತ್ತ ರಕ್ಷಣಾ ಕ್ಷೇತ್ರದ ಎಲ್ಲಾ ವಿಭಾಗಳಿಗೂ ಹಂಚಿಕೆಯಾಗುವ ಮೊತ್ತವಾಗಿದೆ.

ಇನ್ನು ಬಜೆಟ್‌ ಕಾಗದ ಪತ್ರಗಳ ಪ್ರಕಾರ, 2021-22ರ ಆರ್ಥಿಕ ವರ್ಷದಲ್ಲಿ ರಕ್ಷಣಾ ಕ್ಷೇತ್ರದ ಬಂಡವಾಳ ವಿನಿಯೋಗ 1,35,000 ಕೋಟಿ ರೂಪಾಯಿ. ಇದು ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಾದ ಯುದ್ದೋಪಕರಣಗ ಖರೀದಿ, ಈಗಿರುವ ಶಸ್ತ್ರಾಸ್ತ್ರಗಳ ಆಧುನೀಕರಣ, ಸೇನೆಯ ಆಧುನೀಕರಣ, ವಿಮಾನ, ಹಡುಗಳ ಖರೀದಿ ಹಾಗೂ ಅವುಗಳ ಆಧುನೀಕರಣ ಹೀಗೆ ನಾನಾ ಕೆಲಸಗಳಿಗೆ ವ್ಯಯಿಸಲ್ಪಡುತ್ತದೆ. ಈ ಹಿಂದೆ ಗಾಲ್ವಾನ್ ಘರ್ಷಣೆ ನಡೆದ ಆರ್ಥಿಕ ವರ್ಷದಲ್ಲಿ ಪರಿಷ್ಕೃತ ರಕ್ಷಣಾ ವೆಚ್ಚ 1,34,510 ಕೋಟಿ ರೂಗಳಾಗಿತ್ತು. ಈ ಸಂಖ್ಯೆ ಗಮನಿಸಿದರೆ ಈ ಬಾರಿ ರಕ್ಷಣಾ ಕ್ಷೇತ್ರಕ್ಕೆ ನೀಡಲಾಗಿರುವ ಮೊತ್ತದಲ್ಲಿನ ಹೆಚ್ಚಳ ಕೇವಲ 500 ಕೋಟಿ ರೂ ಮಾತ್ರ.

ಇನ್ನು ಕಳೆದ ಆರ್ಥಿಕ ವರ್ಷದ ಬಂಡವಾಳ ಘಟಕ ವೆಚ್ಚ 1,14,000 ಕೋಟಿ ರೂಪಾಯಿ. ಈ ಹಿನ್ನೆಲೆಯಲ್ಲಿ ಕಳೆದ ಬಾರಿಯ ಮತ್ತು ಈ ಬಾರಿ ಬಜೆಟ್‌ ಹಂಚಿಕೆಯನ್ನು ಗಮನಕ್ಕೆ ತೆಗೆದುಕೊಂಡರೆ, ಒಟ್ಟಾರೆ ಹಂಚಿಕೆಯಲ್ಲಿನ ಹೆಚ್ಚಳ ೨೧,೦೦೦ ಕೋಟಿ ರೂಪಾಯಿಗಳಷ್ಟಾಗುತ್ತದೆ. ಇದು ಕಳೆದ ಬಜೆಟ್‌ಗೆ ಹೋಲಿಸಿದರೆ, 19 ಪ್ರತಿಶತ ಹೆಚ್ಚು. ಆದರೂ, ಕಳೆದ ಬಾರಿ ಪರಿಷ್ಕೇರ ವೆಚ್ಚ ಮತ್ತು ಈ ಬಾರಿಯ ಬಜೆಟ್‌ ಹಂಚಿಕೆಯನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದರೆ ಈ ಹೆಚ್ಚಳ ಕೇವಲ ೫೦೦ ಕೋಟಿ ರೂಪಾಯಿ ಹೆಚ್ಚಳ. ಇದು ಒಟ್ಟು ಬಜೆಟ್‌ ಗಾತ್ರದ ೦.೫% ಹೆಚ್ಚಳವಷ್ಟೇ.

ಇನ್ನು ದೇಶದ ಭೂಸೇನೆ-ನೌಕಾಪಡೆ-ವಾಯುಪಡೆಗಳು ತಮ್ಮ ಸಾಮರ್ಥ್ಯ ವರ್ಧನೆಗೆ ದೊಡ್ಡ ಮಟ್ಟದಲ್ಲಿ ಹಣಕಾಸಿನ ನೆರವನ್ನು ಕೇಂದ್ರದಿಂದ ಅಪೇಕ್ಷಿಸುತ್ತಿವೆ. ಹೀಗಾಗಿ ಬಂಡವಾಳ ಹಂಚಿಕೆ ದೇಶದ ರಕ್ಷಣಾ ಸಾಮರ್ಥ್ಯದ ಹೆಚ್ಚಳಕ್ಕೆ ನಿರ್ಣಾಯಕ ಅಂಶ. ಈ ಮೂರೇ ಸೇನಾ ಪಡೆಗಳು ಸವಕಳಿ ಹಾಗೂ ಇನ್ನಿತರ ಕಾರಣಗಳಿಂದಾಗಿ ತಮ್ಮ ಯಂತ್ರೋಪಕರಣಗಳ ಸಾಮರ್ಥ್ಯವರ್ಧನೆಗೆ ದೊಡ್ಡ ಮಟ್ಟದಲ್ಲಿ ಹಣಕಾಸಿನ ನೆರವಿನ ನಿರೀಕ್ಷೆಯಲ್ಲಿವೆ. ಹೆಚ್ಚಿನ ಅನುದಾನ ಹಂಚಿಕೆ, ಈ ಸೇನಾಪಡೆಗಳ ವಿಶ್ವಾಸಾರ್ಹಯೆನ್ನು ಹೆಚ್ಚಿಸುತ್ತದೆ.
ಈ ಹಿಂದಿನ ಆರ್ಥಿಕ ವರ್ಷದಲ್ಲಿ ಪರಿಷ್ಕೃತ ಬಂಡವಾಳ ವೆಚ್ಚ (ವಾಸ್ತವವಾಗಿ ಸೇನಾಪಡೆಗಳು ಖರ್ಚು ಮಾಡಿದ ಮೊತ್ತ) ಈ ಕೆಳಗಿನಂತಿತ್ತು: ಭೂಸೇನೆ - ರೂ. 33213 ಕೋಟಿ; ನೌಕಾಪಡೆ - ರೂ. 37,542 ಕೋಟಿ; ಮತ್ತು ವಾಯುಪಡೆ ರೂ. 55,055 ಕೋಟಿ ರೂ. ಈ ವರ್ಷದ ಬಜೆಟ್‌ ಕಾಗದ ಪತ್ರಗಳ ಪ್ರಕಾರ ಹೊಸ ಆರ್ಥಿಕ ವರ್ಷ 2021-2೨ರಲ್ಲಿ ಹಂಚಿಕೆ ಮಾಡಲಾಗಿರುವ ಮೊತ್ತ ಈ ಕೆಳಗಿನಂತಿದೆ.
ಭೂ ಸೇನೆ: ರೂ. 36,482 ಕೋಟಿ
ನೌಕಾಪಡೆ : ರೂ. 33254 ಕೋಟಿ
ವಾಯುಪಡೆ - ರೂ. 53, 215 ಕೋಟಿ

ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಬಾರಿಯ ಬಜೆಟ್ ಹಂಚಿಕೆ ದೇಶದ ಗಡಿಯಲ್ಲಿ ಭೂ ಸೇನೆಯ ಮೇಲೆ ಹೆಚ್ಚುತ್ತಿರುವ ಒತ್ತಡ ಸೂಚಿಸುತ್ತದೆ. ಪ್ರಸ್ತುತ ದೇಶದ ಮುಂದಿರುವ ಭದ್ರತಾ ಸವಾಲುಗಳು (ಚೀನಾದೊಂದಿಗೆ ತೊಂದರೆಗೊಳಗಾದ ವಾಸ್ತವ ಗಡಿ ನಿಯಂತ್ರಣ ರೇಖೆ ) ಮತ್ತು ಇತರ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಭೂಸೇನೆಗೆ ಹೆಚ್ಚಿನ ಮೊತ್ತ ನೀಡಲಾಗಿದೆ. ಕಳೆದ ಬಾರಿಗಿಂತ ಇದದು ರೂ. 3269 ಕೋಟಿ ಅಧಿಕ. ಇದಕ್ಕೆ ತದ್ವಿರುದ್ಧವಾಗಿ ನೌಕಾಪಡೆ ಮತ್ತು ವಾಯುಪಡೆಗೆ ಬಜೆಟ್‌ ಹಂಚಿಕೆ ಕಡಿಮೆಯಾಗಿದೆ.
ಈ ಬಜೆಟ್‌ ಹಂಚಿಕೆ ನಮಗೆ ಸೂಚಿಸುವುದೇನೆಂದರೆ ಈ ಬಾರಿ ಭಾರತ ತನ್ನ ಗಡಿಯನ್ನು ಇನ್ನಷ್ಟು ಸುಭದ್ರಗೊಳಿಸಲು ಕಾರ್ಯತಂತ್ರ ರೂಪಿಸಿದೆ. ಹೀಗಾಗಿ ವಾಯು ಹಾಗೂ ನೌಕಾ ಸೇನೆಗೆ ಹೆಚ್ಚಿನ ನೆರವು ಸಿಕ್ಕಿಲ್ಲ. ಮುಂದಿನ ವರ್ಷ ಈ ದೃಷ್ಟಿಕೋನದಲ್ಲಿ ಬದಲಾವಣೆ ಕಂಡುಬರಬಹುದು. ಕೋವಿಡ್‌ ಹೊರತಾಗಿಯೂ ಭಾರತೀಯ ಆರ್ಥಿಕತೆಯು ತ್ವರಿತಗತಿಯಲ್ಲಿ ಚೇತರಿಸಿಕೊಳ್ಳುತ್ತದೆ. ಆದರೂ ಸೈನ್ಯದ ಆಧುನೀಕರಣಕ್ಕೆ ಸಾಕಷ್ಟು ಸಂಪನ್ಮೂಲ ಒದಗಿಸುವುದು ದೇಶದ ರಾಜಕೀಯ ನಾಯಕತ್ವಕ್ಕೆ ಒಂದು ದೊಡ್ಡ ಒಂದು ಸಂಕೀರ್ಣ ಸವಾಲಾಗಿದೆ. ಇದು ಶುಭ ಸುದ್ದಿ ಅಲ್ಲ.

ಕೊನೆಯದಾಗಿ ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಭಾರತದ ರಕ್ಷಣಾ ಹಂಚಿಕೆ ಈ ಬಾರಿ ಜವಾಹರಲಾಲ್ ನೆಹರು ಪ್ರಧಾನಿ ಇದ್ದಾಗ ಇದ್ದ ಹಂತಕ್ಕೆ ಕುಸಿದಿದೆ. ನೆಹರೂ ಪ್ರಧಾನಿ ಆಗಿದ್ದಾಗಲೇ, ಅಕ್ಟೋಬರ್‌ 1962 ರ ಹೊತ್ತಿಗೆ ಭಾರತ ಚೀನಾದಿಂದ ಪೆಟ್ಟುತಿಂದಿತು ಎಂಬುದನ್ನು ನಾವಿಲ್ಲಿ ಮರೆಯಬಾರದು. ಇತಿಹಾಸ ಪುನರಾವರ್ತನೆ ಆಗಲಾರದು. ಆದರೆ ಅದರ ಕೆಲವೊಂದು ಸಂಗತಿಗಳು ನಮ್ಮನ್ನು ಮತ್ತೆ ಕೂಡಾ ಬಾಧಿಸಬಹುದು.

-ಸಿ ಉದಯ ಬಾಸ್ಕರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.