ನವದೆಹಲಿ: ಮಂದಗತಿಯ ಆರ್ಥಿಕತೆಯ ಪರಿಣಾಮ ಆಟೋಮೊಬೈಲ್ ಉದ್ಯಮದ ಬೆಳವಣಿಗೆ ಕುಸಿತಕ್ಕೆ ಓಲಾ, ಉಬರ್ ಕಾರಣವೆಂದು ಹೇಳಿಕೆ ನೀಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬೆನ್ನಲ್ಲೇ ಕೇಂದ್ರ ಸಚಿವ ಪೀಯೂಷ್ ಗೋಯಲ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.
ದೆಹಲಿಯ ವಾಣಿಜ್ಯ ಮಂಡಳಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋಯಲ್, ಟಿವಿಯಲ್ಲಿ ಕಂಡುಬರುವ ಲೆಕ್ಕಾಚಾರಕ್ಕೆ ಗಮನ ಕೊಡದಂತೆ ಜನರಿಗೆ ಸಲಹೆ ನೀಡಿದರು. ನೀವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನೋಡುತ್ತಿದ್ದರೆ. ದೇಶವು ಶೇ 12ರಷ್ಟು ಬೆಳವಣಿಗೆ ದರದಲ್ಲಿ ಸಾಗಬೇಕಾಗುತ್ತದೆ. ಇಂದು ಅದು ಶೇ 6 ರಷ್ಟಿದೆ ಎಂದು ಹೇಳಿದ್ದರು.
-
Newton just turned in his grave and said- Bhai Einstein ye video dekh. pic.twitter.com/31Kf9HnAIm
— Scotchy (@scotchism) September 12, 2019 " class="align-text-top noRightClick twitterSection" data="
">Newton just turned in his grave and said- Bhai Einstein ye video dekh. pic.twitter.com/31Kf9HnAIm
— Scotchy (@scotchism) September 12, 2019Newton just turned in his grave and said- Bhai Einstein ye video dekh. pic.twitter.com/31Kf9HnAIm
— Scotchy (@scotchism) September 12, 2019
ಆ ಗಣಿತವನ್ನು ಎಳೆದು ತರಲು ಹೋಗಬೇಡಿ. ಐನ್‌ಸ್ಟೈನ್‌ಗೆ ಗುರುತ್ವಾಕರ್ಷಣೆಯನ್ನು ಕಂಡುಹಿಡಿಯಲು ಆ ಗಣಿತ ಎಂದಿಗೂ ಸಹಾಯ ಮಾಡಿಲ್ಲ. ನೀವು ರಚನಾತ್ಮಕ ಸೂತ್ರಗಳಿಂದ ಈ ಹಿಂದಿನ ಜ್ಞಾನದತ್ತ ಹೋದರೆ ಈ ಜಗತ್ತಿನಲ್ಲಿ ಯಾವುದೇ ಹೊಸತನಗಳು ಉಂಟಾಗಬಹುದೆಂದು ನಾನು ಭಾವಿಸುವುದಿಲ್ಲ ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡರು.
-
Nirmala seethraman :economy slowdown due to millennial..
— haris (@harispmna) September 12, 2019 " class="align-text-top noRightClick twitterSection" data="
Piyush goel:Hold my beer
Economy slow down due to maths...
">Nirmala seethraman :economy slowdown due to millennial..
— haris (@harispmna) September 12, 2019
Piyush goel:Hold my beer
Economy slow down due to maths...Nirmala seethraman :economy slowdown due to millennial..
— haris (@harispmna) September 12, 2019
Piyush goel:Hold my beer
Economy slow down due to maths...
ಗುರುತ್ವಾಕರ್ಷಣೆಯನ್ನು ಮೊದಲ ಬಾರಿಗೆ ಪರಿಚಯಿಸಿದ್ದವರು ಸರ್ ಐಸಾಕ್ ನ್ಯೂಟನ್. ಆದರೆ, ಗೋಯಲ್ ಅವರು ಐನ್‌ಸ್ಟೈನ್ ಕಂಡುಹಿಡಿದ ಎಂದು ಹೇಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನೆಟ್ಟಿಗರು ಟ್ವಿಟ್ಟರ್ನಲ್ಲಿ ಕೇಂದ್ರ ಸಚಿವರನ್ನು ವ್ಯಂಗ್ಯವಾಡುತ್ತಿದ್ದಾರೆ.