ETV Bharat / business

ಆರ್ಥಿಕ ಹಿಂಜರಿತಕ್ಕೆ ಕಂಗೆಟ್ಟ ವಾಹನೋದ್ಯಮ... ಫಲ ಕೊಡದ ಸರ್ಕಾರದ ಕ್ರಮ!

author img

By

Published : Sep 3, 2019, 10:22 AM IST

ಆಗಸ್ಟ್‌ನ ತಿಂಗಳಲ್ಲೂ ವಿವಿಧ ಕಂಪನಿಗಳ ಮಾರಾಟದಲ್ಲಿ ಕುಸಿತ ಕಂಡಿದ್ದರ ಕುರಿತು ಪ್ರತಿಕ್ರಿಯಿಸಿದ SIAM ಅಧ್ಯಕ್ಷ ರಾಜನ್ ವಾಧೇರಾ, ಸಾಲದ ಲಭ್ಯತೆ ಮತ್ತು ಪಡೆದ ಸಾಲದ ಮೇಲಿನ ಬಡ್ಡಿ ಕಡಿಮೆ ಮಾಡುವುದಾಗಿ ಸರ್ಕಾರ ಪ್ರಕಟಿಸಿದ್ದರೂ ಉತ್ತಮ ಬೆಳವಣಿಗೆ ಕಂಡು ಬಂದಿಲ್ಲ. ವಾಹನ ಉದ್ಯಮ ಚೇತರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ. ಗ್ರಾಹಕರ ಖರೀದಿಯ ಮನೋಭಾವವೂ ಕಡಿಮೆಯಾಗಿದೆ ಮತ್ತು ವಾಹನ ವಿತರಕರಿಗೆ ಹಣದ ಸಾಲ ನೀಡುವಲ್ಲಿ ವಿಶ್ವಾಸಾರ್ಹತೆಯ ಕೊರತೆ ಕಂಡು ಬರುತ್ತಿದೆ ಎಂದು SIAM ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ವಾಹನೋದ್ಯಮವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ಇತ್ತೀಚಿನ ಕೆಲ ಕ್ರಮಗಳು ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ ಹೇಳಿದೆ.

ವಾಹನ ಉದ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಆಗಸ್ಟ್ 23 ರಂದು 'ಸರ್ಕಾರಿ ಇಲಾಖೆಗಳಿಗೆ ಹೊಸ ವಾಹನಗಳನ್ನು ಖರೀದಿಸಲು ಅನುಮತಿ ನೀಡುವುದಾಗಿ ಘೋಷಿಸಿದ್ದರು. 2020ರ ಮಾರ್ಚ್ 31ರವರೆಗೆ ಖರೀದಿಸಿದ ವಾಹನಗಳ ಒಟ್ಟು ವೆಚ್ಚದಲ್ಲಿ ಶೇ. 15ರಷ್ಟು ಹೆಚ್ಚುವರಿ ಸವಕಳಿ ಲಾಭ ಸೇರಿದಂತೆ ಇತರೆ ಲಾಭದಾಯಕ ರಿಯಾಯಿತಿ ಘೋಷಿಸಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.