ETV Bharat / business

'ವಿಜಯ್' ಖೇಲ್ ಖತಂ: 'ಮಲ್ಯ' ವಶಕ್ಕೆ ಮುಂಬೈನಲ್ಲಿ ಇಡಿ, ಸಿಬಿಐ ಸಜ್ಜು... ಜೈಲು ಕೊಠಡಿಯೂ ಸಿದ್ಧ!

ಮಲ್ಯ ರಾತ್ರಿ ವೇಳೆ ಮುಂಬೈಗೆ ಬಂದರೆ ನಗರದ ಸಿಬಿಐ ಕಚೇರಿಯಲ್ಲಿ ರಾತ್ರಿ ಕಳೆದು ಮುಂಜಾನೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಒಂದು ವೇಳೆ ಹಗಲಿನಲ್ಲಿ ಬಂದಿಳಿದರೆ ನೇರವಾಗಿ ನ್ಯಾಯಾಲಯದ ಮುಂದೆ ಅವರನ್ನು ನಿಲ್ಲಿಸಲಾಗುತ್ತದೆ. ಮೊದಲು ಸಿಬಿಐ ವಶಕ್ಕೆ ಪಡೆಯಲಿದ್ದು, ಅಧಿಕಾರಿಗಳ ವಿಚಾರಣೆ ಬಳಿಕ ಇಡಿ ಕೂಡ ತನ್ನ ವಶಕ್ಕೆ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Vijay Mallya
ವಿಜಯ್ ಮಲ್ಯ
author img

By

Published : Jun 3, 2020, 10:13 PM IST

ನವದೆಹಲಿ: ವಿಜಯ್ ಮಲ್ಯ ವಿರುದ್ಧ ಮುಂಬೈನಲ್ಲಿ ಪ್ರಕರಣಗಳು ದಾಖಲಾಗಿದ್ದು, ಭಾರತಕ್ಕೆ ಹಸ್ತಾಂತರ ಆಗುವಾಗ ಅವರನ್ನು ನೇರವಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಕರೆ ತರಲಾಗುತ್ತದೆ ಎಂದು ತನಿಖಾ ಸಂಸ್ಥೆಗಳ ಮೂಲಗಳು ಐಎಎನ್‌ಎಸ್‌ಗೆ ತಿಳಿಸಿವೆ.

ದೇಶ ಬಿಟ್ಟು ಪರಾರಿಯಾದ ಮದ್ಯದ ದೊರೆ ಮಲ್ಯ ಅವರೊಂದಿಗೆ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇರಲಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಂಡವೊಂದು ಅವರ ಆರೋಗ್ಯ ತಪಾಸಣೆ ನಡೆಸಲಿದೆ.

ಮಲ್ಯ ರಾತ್ರಿ ವೇಳೆ ಮುಂಬೈಗೆ ಬಂದರೆ ನಗರದ ಸಿಬಿಐ ಕಚೇರಿಯಲ್ಲಿ ರಾತ್ರಿ ಕಳೆದು ಮುಂಜಾನೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಒಂದು ವೇಳೆ ಹಗಲಿನಲ್ಲಿ ಬಂದಿಳಿದರೆ ನೇರವಾಗಿ ನ್ಯಾಯಾಲಯದ ಮುಂದೆ ಅವರನ್ನು ನಿಲ್ಲಿಸಲಾಗುತ್ತದೆ. ಮೊದಲು ಸಿಬಿಐ ವಶಕ್ಕೆ ಪಡೆಯಲಿದ್ದು, ಅಧಿಕಾರಿಗಳ ವಿಚಾರಣೆ ಬಳಿಕ ಇಡಿ ಕೂಡ ತನ್ನ ವಶಕ್ಕೆ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈನ ಆರ್ಥರ್ ರೋಡ್ ಜೈಲು ಸಂಕೀರ್ಣದಲ್ಲಿ ಎರಡು ಅಂತಸ್ತಿನ ಕಟ್ಟಡದಲ್ಲಿ ಮಲ್ಯಗೆ ಉನ್ನತ ಮಟ್ಟದ ಭದ್ರತೆಯಲ್ಲಿ ಇರಿಸಲಾಗುವುದು ಎಂದು ತನಿಖಾ ಏಜೆನ್ಸಿಗಳು ಯುಕೆ ನ್ಯಾಯಾಲಯಕ್ಕೆ ತಿಳಿಸಿದ್ದವು.

2018ರ ಆಗಸ್ಟ್‌ನಲ್ಲಿ ಮಲ್ಯ ಮನವಿಯನ್ನು ಆಲಿಸಿದ ಯುಕೆ ನ್ಯಾಯಾಲಯವು ಜೈಲಿನ ವಿವರಗಳನ್ನು ಹಂಚಿಕೊಳ್ಳಲು ಭಾರತೀಯ ತನಿಖಾ ಸಂಸ್ಥೆಗಳಿಗೆ ಸೂಚಿಸಿತ್ತು. ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಕೋಣೆಯ ವಿಡಿಯೋವನ್ನು ಏಜೆನ್ಸಿಗಳು ಹಂಚಿಕೊಂಡಿದ್ದವು. ಮಲ್ಯ ಅವರನ್ನು ಹಸ್ತಾಂತರಿಸಿದ ಬಳಿಕ ಅಲ್ಲಿಯೇ ಇರಿಸಿಕೊಳ್ಳುವುದಾಗಿ ಹೇಳಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.