ETV Bharat / business

ಎಂಎಸ್‌ಎಂಇಗೆ ಕೊರೊನಾ ಆಘಾತ: ನೇರವಾಗುವುದೇ ಕೇಂದ್ರದ ಪ್ಯಾಕೇಜ್​? - ಭಾರತದ ಎಂಎಸ್​ಎಂಇ ವಲಯ

ವಿಶ್ವ ಬ್ಯಾಂಕಿನ ‘ಈಸಿ ಆಫ್ ಡೂಯಿಂಗ್ ಇಂಡೆಕ್ಸ್’ನಲ್ಲಿ 2014ರಲ್ಲಿದ್ದ 142ರಿಂದ 2020ರಲ್ಲಿ 63ಕ್ಕೇರುವಲ್ಲಿ ಭಾರತವು ಗಮನಾರ್ಹವಾಗಿ ಸಾಧನೆ ಮಾಡಿದೆ. ಆದರೂ ಎಂಎಸ್‌ಎಂಇ ಉದ್ಯಮಿಗಳ ಅವಸ್ಥೆ ಸುಧಾರಿಸಿಲ್ಲ ಎಂಬುದು ವಿಷಾದನೀಯ.

MSME sector
ಎಂಎಸ್‌ಎಂಇ
author img

By

Published : May 28, 2020, 9:15 PM IST

ಹೈದರಾಬಾದ್: ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ಮಹತ್ವದಾಗಿದೆ. ಜಿಡಿಪಿ ಮತ್ತು ರಫ್ತಿಗೆ ಅಪಾರವಾದ ಮಹತ್ವದ ಕೊಡುಗೆ ಸಹ ನೀಡುತ್ತಿದೆ. ದೇಶದ ಬಹುತೇಕ ಜನರು ಜೀವನೋಪಾಯಕ್ಕೆ ಇದೇ ವಲಯದ ಮೇಲೆ ಅವಲಂಬಿತವಾಗಿದ್ದಾರೆ.

ಎಂಎಸ್​ಎಂಇ ವಲಯ ಲಕ್ಷಾಂತರ ನುರಿತ/ ಪ್ರಶಿಕ್ಷಿತ ಕೌಶಲ್ಯ / ಕೌಶಲ್ಯರಹಿತ ಯುಕರಿಗೆ ಉದ್ಯೋಗ ಒದಗಿಸುತ್ತಿದೆ. ಆರ್ಥಿಕತೆಗೆ ಅದರ ಪ್ರಾಮುಖ್ಯತೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ‘ಆತ್ಮ ನಿರ್ಭರ ಭಾರತ ಅಭಿಯಾನ’ದಡಿ ಸರಣಿ ಪರಿಹಾರ ಕ್ರಮಗಳನ್ನು ಒದಗಿಸಿದೆ.

ವಿಶ್ವ ಬ್ಯಾಂಕಿನ ‘ಈಸಿ ಆಫ್ ಡೂಯಿಂಗ್ ಇಂಡೆಕ್ಸ್’ನಲ್ಲಿ 2014ರಲ್ಲಿದ್ದ 142ರಿಂದ 2020ರಲ್ಲಿ 63ಕ್ಕೇರುವಲ್ಲಿ ಭಾರತವು ಗಮನಾರ್ಹವಾಗಿ ಸಾಧನೆ ಮಾಡಿದೆ. ಆದರೂ ಎಂಎಸ್‌ಎಂಇ ಉದ್ಯಮಿಗಳ ಅವಸ್ಥೆ ಸುಧಾರಿಸಿಲ್ಲ ಎಂಬುದು ವಿಷಾದನೀಯ.

ನೋಟು ರದ್ದತಿ ಮತ್ತು ಜಿಎಸ್​ಟಿ ಹೊಡೆತದಿಂದ ಎಂಎಸ್​ಎಂಐ ವಲಯವು ಪುನರುತ್ಥಾನಗೊಳ್ಳಲು ಪ್ರಯತ್ನಿಸುತ್ತಿರುವಾಗ ಕೋವಿಡ್​-19 ಪ್ರೇರೇಪಿತ ಲಾಕ್‌ಡೌನ್ ಆಘಾತವನ್ನು ಉಂಟುಮಾಡಿದೆ. ಅದರ ಬೆಳವಣಿಗೆ ಪುಡಿಪುಡಿಯಾಗಿಸಿದೆ. ಸರ್ಕಾರವು ಅದಕ್ಕೆ ತಕ್ಕಂತೆ ಶುಶ್ರೂಷೆ ಮಾಡಲು ಯೋಜಿಸಿದೆ. ಆದರೆ, ಶುಶ್ರೂಷೆಯ ಯಶಸ್ಸು ಯೋಜನೆಗಳ ಅನುಷ್ಠಾನದ ಮೇಲೆ ಅವಲಂಬಿತವಾಗಿರುತ್ತದೆ.

25 ರಿಂದ 100 ಕೋಟಿ ರೂ. ವಹಿವಾಟು ನಡೆಸುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಸಾಲ ನೀಡಲಾಗುವುದು. ಯಾವುದೇ ಅಡಮಾನವಿಲ್ಲದೇ ಸ್ವಯಂಚಾಲಿತ ಸಾಲ ಸೌಲಭ್ಯ ಒದಗಿಸುತ್ತೇವೆ. ಸಾಲಮರುಪಾವತಿಗೆ 4 ವರ್ಷ ಕಾಲಾವಕಾಶ ನೀಡಲಾಗುವುಸು. ಮೊದಲ 12 ತಿಂಗಳ ಅವಧಿಯಲ್ಲಿ ಸಾಲ ಮರುಪಾವತಿಗೆ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಸಂಕಷ್ಟದಲ್ಲಿರುವ ಎಂಎಸ್‌ಎಂಇಗಳಿಗಾಗಿ 20 ಸಾವಿರ ಕೋಟಿ ರೂ. ಸಾಲಸೌಲಭ್ಯ ನಿಗದಿಪಡಿಸಲಾಗಿದೆ. ಇದರಿಂದ ಸುಮಾರು 2 ಲಕ್ಷ ಎಂಎಸ್‌ಎಂಇ ಘಟಕಗಳು ಲಾಭ ಪಡೆಯಲಿವೆ. ಅಭಿವೃದ್ಧಿ ಸಾಮರ್ಥ್ಯ ಇರುವ ಎಂಎಸ್‌ಎಂಇಗಳಿಗೆ 5೦ ಸಾವಿರ ಕೋಟಿ ರೂ. ನಿಗದಿಪಡಿಸಲಾಗಿದೆ ಎಂದಿತು.

ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಬಾಕಿ ಇರುವ ಎಂಎಸ್‌ಎಂಇ ಸಾಲಗಳು 2020ರ ಫೆಬ್ರವರಿ 28ರ ವೇಳೆಗೆ 15.74 ಲಕ್ಷ ಕೋಟಿ ರೂ.ಯಷ್ಟಿದೆ. 3 ಲಕ್ಷ ಕೋಟಿ ರೂ. ಸಾಲವನ್ನು ಬ್ಯಾಂಕ್​ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ನೀಡಬಹುದು. ಒತ್ತಡಕ್ಕೊಳಗಾದ ಎಂಎಸ್‌ಎಂಇ ಘಟಕಗಳಿಗೆ 20,000 ಕೋಟಿ ರೂ. ವೆಚ್ಚದಲ್ಲಿ ಅಧೀನ ಸಾಲ ಲಭ್ಯವಿರುತ್ತದೆ. ಸಿಜಿಟಿಎಂಎಸ್‌ಇಗೆ ಸರ್ಕಾರ 4,000 ಕೋಟಿ ರೂ. ನೀಡಲಿದ್ದು, ಎಂಎಸ್‌ಎಂಇ ಘಟಕಗಳಿಗೆ ಸಾಲ ನೀಡಲು ಬ್ಯಾಂಕ್​ಗಳಿಗೆ ಭಾಗಶಃ ಸಾಲ ಖಾತರಿ ಬೆಂಬಲವನ್ನು ಸಹ ಸರ್ಕಾರವೇ ನೀಡುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.