ETV Bharat / business

'ಮೇಡ್ ಇನ್ ಇಂಡಿಯಾ' ಕಾರ್ಯಗತ: ಪಿಎಂ ಕೇರ್ಸ್​ ಫಂಡ್​ನಿಂದ ಬಂದ್ವು 3,000 ವೆಂಟಿಲೇಟರ್​ - ವಾಣಿಜ್ಯ

ವೆಂಟಿಲೇಟರ್‌ಗಳು ಕೋವಿಡ್ ರೋಗಿಗಳಿಗೆ ಜೀವ ರಕ್ಷಕ ವೈದ್ಯಕೀಯ ಸಾಧನಗಳಾಗಿವೆ. ಕೆಲವು ತೀವ್ರವಾದ ಉಸಿರಾಟ ಕಾಯಿಲೆ ಸಿಂಡ್ರೋಮ್ (ಎಆರ್​​ಡಿಎಸ್) ಅನ್ನು ಅಭಿವೃದ್ಧಿಪಡಿಸುತ್ತವೆ. ದೇಶಾದ್ಯಂತ ಕೋವಿಡ್​-19 ಪ್ರಕರಣಗಳನ್ನು ನಿಭಾಯಿಸಲು ಮೂಲಸೌಕರ್ಯಗಳ ಹೆಚ್ಚಳಕ್ಕೆ 50,000 'ಮೇಡ್-ಇನ್-ಇಂಡಿಯಾ' ವೆಂಟಿಲೇಟರ್‌ಗಳ ಖರೀದಿಗೆ ಪಿಎಂ ಕೇರ್ಸ್ ಫಂಡ್‌ನಿಂದ ಅಂದಾಜು ರೂ. 2000 ಕೋಟಿ ರೂ. ನೀಡಲಾಗಿತ್ತು.

Made in India ventilators'
ವೆಂಟಿಲೇಟರ್
author img

By

Published : Jun 16, 2020, 5:24 PM IST

ನವದೆಹಲಿ: ಮೇಕ್ ಇನ್ ಇಂಡಿಯಾ ಉಪಕ್ರಮದ ಭಾಗವಾಗಿ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರವು ದೇಶಾದ್ಯಂತದ ಆಸ್ಪತ್ರೆಗಳಿಗೆ ಸ್ಥಳೀಯವಾಗಿ ತಯಾರಿಸಲಾದ ವೆಂಟಿಲೇಟರ್‌ ವಿತರಿಸಲು ಆರಂಭಿಸಿದೆ. ಪ್ರಥಮ ಸ್ಲಾಟ್‌ನಲ್ಲಿ ಸುಮಾರು 3000 ದೇಶಿಯ ವೆಂಟಿಲೇಟರ್‌ಗಳನ್ನು ರಾಜ್ಯಗಳಿಗೆ ವಿತರಿಸಲಾಗಿದೆ.

ಮೇ 1ರಂದು ಕೇಂದ್ರ ಆರೋಗ್ಯ ಸಚಿವಾಲಯವು ಜೂನ್​​ವರೆಗೆ 75,000 ವೆಂಟಿಲೇಟರ್‌ಗಳ ಬೇಡಿಕೆ ಇಟ್ಟಿತ್ತು. ಅದರಂತೆ ರಾಜ್ಯ ಸರ್ಕಾರಗಳ ಅವಶ್ಯಕತೆಗಳಿಗೆ ಪೂರಕವಾಗಿ ದೇಶಿ ವೆಂಟಿಲೇಟರ್ ತಯಾರಿಕೆಯ ಆದೇಶ ಹೊರಡಿಸಲಾಯಿತು.

ಇಲ್ಲಿಯವರೆಗೆ ಕನಿಷ್ಠ 3000 ದೇಶ ನಿರ್ಮಿತ ವೆಂಟಿಲೇಟರ್‌ಗಳನ್ನು ರಾಜ್ಯಗಳಿಗೆ ವಿತರಿಸಲಾಗಿದೆ. ಅವುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಇರಿಸಲಾಗಿದೆ. ಮುಂದಿನ ದಿನಗಳಲ್ಲಿ ವೆಂಟಿಲೇಟರ್‌ಗಳ ದೇಶಿಯ ಉತ್ಪಾದನೆ ಇನ್ನಷ್ಟು ವೇಗ ಪಡಿಯಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಎಎನ್‌ಐಗೆ ದೃಢಪಡಿಸಿದ್ದಾರೆ.

ಮೇಕ್ ಇನ್ ಇಂಡಿಯಾ ಅಭಿಯಾನದ ಈ ಪ್ರಯಾಣ ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಬೇಕಿದೆ. ವೆಂಟಿಲೇಟರ್‌ಗಳ ಸ್ಥಳೀಯ ತಯಾರಕರನ್ನು ಗುರುತಿಸಲಾಗಿದೆ. ಅವರಿಗೆ ವಿಶೇಷ ಮಾರ್ಗದರ್ಶನ ನೀಡಿ, ತರಬೇತಿ ಮತ್ತು ಪ್ರೋಟೋಕಾಲ್‌ಗಳನ್ನು ತ್ವರಪಿತವಾಗಿ ಅಂತಿಮಗೊಳಿಸಿ ನೂತನ ಪೂರೈಕೆ ಸರಪಳಿ ಸರಳೀಕರಿಸಲಾಗಿದೆ ಎಂದರು.

ಸರಬರಾಜುದಾರರು ಮತ್ತು ರಾಜ್ಯ ಸರ್ಕಾರಗಳ ಜತೆ ಲಾಜಿಸ್ಟಿಕ್ ಸಮಸ್ಯೆ ಇತ್ಯರ್ಥ ಪಡಿಸಲಾಯಿತು. ದೇಶಿಯ ತಯಾರಿಕೆಯಲ್ಲಿ ಭರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಹಾಗೂ ಸ್ಕನ್ರೇ ಸಹಯೋಗದೊಂದಿಗೆ 30,000 ವೆಂಟಿಲೇಟರ್‌ಗಳಿಗೆ ಆರ್ಡರ್ ನೀಡಲಾಗಿದೆ.

ದೇಶಿಯ ಉತ್ಪಾದಕ ಆಗ್ವಾ (ಆಟೋಮೊಬೈಲ್ ಕಂಪನಿ- ಮಾರುತಿ ಸುಜುಕಿ ಲಿಮಿಟೆಡ್ ಸಹಯೋಗ) 10,000 ವೆಂಟಿಲೇಟರ್‌ಗಳ ರವಾನೆಗೆ ಕೋರಲಾಯಿತು. ಎಎಂಟಿಝ್ಯಡ್ (ಎಪಿ ಮೆಡ್‌ಟೆಕ್ ಝೋನ್​) ಸುಮಾರು 13,500 ಯೂನಿಟ್​ಗಳ ಆರ್ಡರ್​ ಪಡೆದಿದೆ. ಭಾರತದ ಮತ್ತೊಂದು ಸಂಸ್ಥೆ ಜ್ಯೋತಿ ಸಿಎನ್‌ಸಿ 5,000 ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸುವುದಾಗಿ ಆದೇಶ ಸ್ವೀಕರಿಸಿದೆ.

ದೇಶಾದ್ಯಂತ ಕೋವಿಡ್​-19 ಪ್ರಕರಣಗಳನ್ನು ನಿಭಾಯಿಸಲು ಮೂಲಸೌಕರ್ಯಗಳ ಹೆಚ್ಚಳಕ್ಕೆ 50,000 'ಮೇಡ್-ಇನ್-ಇಂಡಿಯಾ' ವೆಂಟಿಲೇಟರ್‌ಗಳ ಖರೀದಿಗೆ ಪಿಎಂ ಕೇರ್ಸ್ ಫಂಡ್‌ನಿಂದ ಅಂದಾಜು ರೂ. 2000 ಕೋಟಿ ರೂ. ನೀಡಲಾಯಿತು. ಈ ವೆಂಟಿಲೇಟರ್‌ಗಳನ್ನು ಎಲ್ಲಾ ರಾಜ್ಯಗಳಲ್ಲಿನ ಸರ್ಕಾರಿ ಕೋವಿಡ್​ ಆಸ್ಪತ್ರೆಗಳಿಗೆ ಒದಗಿಸಲಾಗುವುದು.

ವೆಂಟಿಲೇಟರ್‌ಗಳನ್ನು ಪೂರೈಸಲು ಅಂತಾರಾಷ್ಟ್ರೀಯ ಕಂಪನಿಗಳಾದ ಹ್ಯಾಮಿಲ್ಟನ್, ಮೈಂಡ್ರೇ ಮತ್ತು ಡ್ರೇಗರ್‌ಗಳಿಗೆ ಆರ್ಡರ್​ ನೀಡಲಾಗಿದೆ. ಈ ಕಂಪನಿಗಳ 10,000 ವೆಂಟಿಲೇಟರ್‌ ಹೊರತೆಗೆಯಲು ವಿದೇಶಾಂಗ ಸಚಿವಾಲಯ ಚೀನಾ ಪೂರೈಕೆದಾರರನ್ನು ಸಂಪರ್ಕಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಜೂನ್ 2020 ರವರೆಗೆ ವೈಯಕ್ತಿಕ ರಕ್ಷಣಾ ಸಲಕರಣೆಗಳ (ಪಿಪಿಇ) ಕಿಟ್‌ಗಳ ಒಟ್ಟು ಯೋಜಿತ ಬೇಡಿಕೆ 2.01 ಕೋಟಿ ರೂ.ಯಷ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.