ನವದೆಹಲಿ: ಲೋಕಸಭೆಯಲ್ಲಿ ವಿವಿಧ ವಿರೋಧ ಪಕ್ಷಗಳ ಸದಸ್ಯರು ದೇಶದ ಪ್ರಸ್ತುತ ಆರ್ಥಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸಮಸ್ಯೆಯನ್ನು ನಿಭಾಯಿಸಲು 'ಕಡ್ಡಿಗಳನ್ನು ಹಿಡಿಯುವ' ಬದಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಕೋರಿದರು.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, ಪ್ರಸ್ತುತ ಆರ್ಥಿಕ ಕುಸಿತವನ್ನು ಎದುರಿಸುವ ಮಾರ್ಗಗಳ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಸಲಹೆ ಪಡೆಯಿರಿ. ನಿಧಾನಗತಿಯ ಆರ್ಥಿಕತೆಯು ದೇಶದ ಒಟ್ಟು ದೇಶೀಯ ಉತ್ಪನ್ನವನ್ನು (ಜಿಡಿಪಿ) ಶೇ. 2ಕ್ಕೆ ಇಳಿಸಲಿದೆ ಎಂದು ಸಿಂಗ್ ಎಚ್ಚರಿಸಿದ್ದಾರೆ. ಈ ಬಗ್ಗೆ ಗಮನಹರಿಸುವಂತೆ ಹೇಳಿದರು.
ತೆರಿಗೆ ಕಾನೂನು ತಿದ್ದುಪಡಿ ಮಸೂದೆ ಮತ್ತು ಶಾಸನದ ಮೇಲಿನ ಸುಗ್ರೀವಾಜ್ಞೆ ನಿರಾಕರಿಸುವ ಶಾಸನಬದ್ಧ ನಿರ್ಣಯದ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಚೌಧರಿ, ಮೋದಿ ಸರ್ಕಾರ ಎಲ್ಲರನ್ನೂ ಅನುಮಾನದಿಂದ ನೋಡುತ್ತಿರುವುದು ವಿಷಾದಕರ. ದೇಶದ ಆರ್ಥಿಕತೆಯು ತೊಂದರೆ ಎದುರಿಸುತ್ತಿದೆ. ಇಂತಹ ವೇಳೆ ಯಾರ ಸಲಹೆಯನ್ನೂ ತೆಗೆದುಕೊಳ್ಳದಿರುವುದು ಶೋಚನೀಯ ಎಂದು ಹೇಳಿದರು.
ತೆರಿಗೆ ದರ ಕಡಿತವು 1.45 ಲಕ್ಷ ಕೋಟಿ ರೂ. ಆದಾಯ ನಷ್ಟಕ್ಕೆ ಕಾರಣವಾಗಿದೆ. ಹಣಕಾಸಿನ ಕೊರತೆಯನ್ನು ಸರ್ಕಾರ ಹೇಗೆ ಎದುರಿಸಲಿದೆ ಎಂದು ತಿಳಿಯಲು ಅವರು ಬಯಸಿದ್ದರು.