ನವದೆಹಲಿ: ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಮಿತಿಯನ್ನು ಶೇ 74ಕ್ಕೆ ಏರಿಸುವ ಮಸೂದೆಗೆ ಲೋಕಸಭೆ ಸೋಮವಾರ ಅನುಮೋದನೆ ನೀಡಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ನಗದು ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶೀಯ ವಿಮಾ ಕಂಪನಿಗಳಿಗೆ ಈ ಮಸೂದೆ ಸಹಾಯ ಮಾಡುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2021ರ ವಿಮಾ (ತಿದ್ದುಪಡಿ) ಮಸೂದೆ ಎಫ್‌ಡಿಐ ಮಿತಿಯನ್ನು ಈಗಿನ ಶೇ 49ರಿಂದ 74ಕ್ಕೆ ಏರಿಸಲು ಪ್ರಯತ್ನಿಸುತ್ತಿದೆ ಎಂದು ಹಣಕಾಸು ಸಚಿವರು ಕೆಳಮನೆಯಲ್ಲಿ ಮಸೂದೆಯನ್ನು ಪರಿಚಯಿಸುವಾಗ ತಿಳಿಸಿದರು.
ಎಫ್‌ಡಿಐ ಮಿತಿಯನ್ನು ಶೇ 74ಕ್ಕೆ ಏರಿಸುವ ಮೂಲಕ, ಪ್ರಸ್ತುತ ಭಾರತೀಯ ಕಂಪನಿಗಳಿಗೆ ವಹಿಸಲಾಗಿರುವ ನಿಯಂತ್ರಣದ ನಿಬಂಧನೆ ಕೈ ಬಿಡಬೇಕಾಯಿತು.
ಮಸೂದೆಯ ಕುರಿತ ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಮಸೂದೆಯನ್ನು ವಿರೋಧಿಸಿದ್ದು, ಇದು ಭಾರತೀಯ ವಿಮಾ ಕಂಪನಿಗಳನ್ನು ವಿದೇಶಿ ವಿಮಾ ಕಂಪನಿಗಳು ನಿಯಂತ್ರಿಸುವುದರಿಂದ ಲಕ್ಷಾಂತರ ಪಾಲಿಸಿದಾರರ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದರು.
ಇದನ್ನೂ ಓದಿ: ಮೂಲ ಸೌಕರ್ಯ ಸ್ಕೀಮ್ಗೆ ಧನಸಹಾಯ ನೀಡಲು ನಾಬಿಎಫ್‌ಐಡಿ ಮಸೂದೆ ಮಂಡನೆ
ಬಿಜೆಪಿ ಸಂಸದ ಜಗದಂಬಿಕಾ ಪಾಲ್ ಅವರು ಮಸೂದೆ ಬೆಂಬಲಿಸಿ, ದೇಶದಲ್ಲಿ ವಿಮಾ ನುಸುಳುವಿಕೆ ಸುಧಾರಿಸಲು ಈ ಮಸೂದೆ ಸಹಾಯ ಮಾಡುತ್ತದೆ ಎಂದು ಹೇಳಿದರು.
ಮಸೂದೆ ವಿರೋಧಿಸಿ ವಿರೋಧ ಪಕ್ಷದ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ವಾಕ್ ಔಟ್ ನಡೆಸಿದ ನಂತರ ರಾಜ್ಯಸಭೆಯು ಗುರುವಾರ ಧ್ವನಿ ಮತದಾನದಿಂದ ಅಂಗೀಕರಿಸಿತ್ತು. ಒಮ್ಮೆ ಅದು ರಾಷ್ಟ್ರಪತಿಗಳ ಅನುಮೋದನೆ ಪಡೆದರೆ, ಮಸೂದೆ ಕಾಯಿದೆಯಾಗುತ್ತದೆ.