ETV Bharat / business

ಚೀನಾ ಬೊಂಬು ಆಮದಿಗೆ ಬ್ರೇಕ್​: ಅಗರಬತ್ತಿ ಉದ್ಯಮದಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿ - ಆಮದು ಸುಂಕ

2011ರಲ್ಲಿ ಯುಪಿಎ ಸರ್ಕಾರ ಆಮದು ಸುಂಕವನ್ನು ಶೇ. 30ರಿಂದ 10ಕ್ಕೆ ಇಳಿಸಿತ್ತು. ಇದು ದೇಶಿಯ ಅಗರಬತ್ತಿ ತಯಾರಕರ ಮೇಲೆ ತೀವ್ರವಾದ ಹೊಡೆತ ನೀಡಿತ್ತು. ಇದರಿಂದಾಗಿ ಶೇ. 25ರಷ್ಟು ಘಟಕಗಳು ಸ್ಥಗಿತಗೊಂಡವು ಎಂದು ಕೆವಿಐಸಿ ತಿಳಿಸಿದೆ.

agarbatti industry
ಅಗರಬತ್ತಿ ಉದ್ಯಮ
author img

By

Published : Jun 11, 2020, 10:13 PM IST

ನವದೆಹಲಿ: ಬಿದಿರಿನ ಕೋಲುಗಳ ಮೇಲಿನ ಆಮದು ಸುಂಕವನ್ನು ಶೇ. 10ರಿಂದ 25ರವರೆಗೆ ಆಮದು ಸುಂಕ ಹೆಚ್ಚಿಸಲು ಕೇಂದ್ರ ನಿರ್ಧರಿಸಿದೆ. ಮುಂದಿನ 8-10 ತಿಂಗಳಲ್ಲಿ ಅಗರಬತ್ತಿ ಉದ್ಯಮದಲ್ಲಿ ಸುಮಾರು 100,000 ಉದ್ಯೋಗಗಳು ಸೃಷ್ಟಿ ಆಗಬಹುದು ಎಂದು ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ನಿಗಮ (ಕೆವಿಐಸಿ) ತಿಳಿಸಿದೆ.

ಸುಂಕ ಏರಿಕೆಯ ನಿರ್ಧಾರವು ಅಗರಬತ್ತಿ ಮತ್ತು ಬಿದಿರಿನ ಕೈಗಾರಿಕೆಗಳನ್ನು ಬಲಪಡಿಸುತ್ತದೆ ಎಂದು ಕೆವಿಐಸಿ ಅಧ್ಯಕ್ಷ ವಿನೈ ಕುಮಾರ್ ಸಕ್ಸೇನಾ ಹೇಳಿದರು.

ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಕೈಗೊಂಡ ಕ್ರಮದ ಭಾಗವಾಗಿ ಹಣಕಾಸು ಸಚಿವಾಲಯ ಇತ್ತೀಚೆಗೆ ಬಿದಿರಿನ ಕೋಲುಗಳ ಮೇಲಿನ ಆಮದು ಸುಂಕ ಹೆಚ್ಚಿಸಿದೆ. ಈ ಮೂಲಕ ಆಮದು ಪ್ರಮಾಣ ತಗ್ಗಿಸಿ ಸ್ಥಳೀಯ ಉದ್ಯಮಗಳ ಬೆಳವಣಿಗೆಗೆ ಮುಂದಾಗಿದೆ.

ಚೀನಾ ಮತ್ತು ವಿಯೆಟ್ನಾಂನಿಂದ ಬಿದಿರಿನ ತುಂಡುಗಳನ್ನು ಆಮದು ಮಾಡಿಕೊಳ್ಳುವುದರಿಂದ ದೊಡ್ಡ ಪ್ರಮಾಣದ ಉದ್ಯೋಗ ಕಡಿತವಾಗಿದೆ. ಆಮದು ಸುಂಕ ಏರಿಕೆ ಹೊಸ ಅಗರಬತ್ತಿ ಉತ್ಪಾದನಾ ಘಟಕಗಳಿಗೆ ನಿರಂತರವಾಗಿ ಬೆಳೆಯುತ್ತಿರುವ ದೇಶಿಯ ಬೇಡಿಕೆ ಪೂರೈಸಲು ದಾರಿ ಮಾಡಿಕೊಡುತ್ತದೆ.

ಅಗರಬತ್ತಿ ನಿತ್ಯ ದೇಶಿಯ ಬಳಕೆ 1,490 ಟನ್‌ಗಳಷ್ಟಿದೆ. ಆದರೆ ಸ್ಥಳೀಯವಾಗಿ ದಿನಕ್ಕೆ 760 ಟನ್ ಮಾತ್ರ ಉತ್ಪಾದಿಸಲಾಗುತ್ತದೆ. ಭಾರಿ ಬೇಡಿಕೆ ಮತ್ತು ಪೂರೈಕೆ ಅಂತರ ಅಗರಬತ್ತಿ ಕಚ್ಚಾ ವಸ್ತುಗಳ ದೊಡ್ಡ ಪ್ರಮಾಣದ ಆಮದಿಗೆ ಎರವಾಗುತ್ತಿದೆ.

2009ರಲ್ಲಿ ಅಗರಬತ್ತಿ ಕಚ್ಚಾ ವಸ್ತುಗಳ ಆಮದು ಶೇ. 2ರಿಂದ ಶೇ. 80ಕ್ಕೆ ಏರಿದೆ. ಇದು 2009ರಲ್ಲಿ 31 ಕೋಟಿ ರೂ.ಗಳಿಂದ 2019ಕ್ಕೆ 546 ಕೋಟಿ ರೂ.ಗೆ ತಲುಪಿದೆ ಎಂಬುದು ಕೆವಿಐಸಿ ಅಂಕಿ-ಅಂಶಗಳಿಂದ ತಿಳಿದು ಬರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.