ಟೋಕಿಯೊ: ದೇಶದ ಪೂರೈಕೆ ಸರಪಳಿ ವೈವಿಧ್ಯಗೊಳಿಸುವ ಗುರಿ ಇರಿಸಿಕೊಂಡಿರಿವ ಜಪಾನ್ ಸರ್ಕಾರ, ತನ್ನ ಕಾರ್ಯಕ್ರಮದ ವಿಸ್ತರಣೆಯಲ್ಲಿ ಜಪಾನಿನ ತಯಾರಕರು ತಮ್ಮ ಉತ್ಪಾದನೆಯನ್ನು ಚೀನಾದಿಂದ ಭಾರತ ಅಥವಾ ಬಾಂಗ್ಲಾದೇಶಕ್ಕೆ ವರ್ಗಾಯಿಸಿದರೆ ಸಬ್ಸಿಡಿ ಪಡೆಯಲು ಅರ್ಹರಾಗಿರುತ್ತಾರೆ.
ಆಗ್ನೇಯ ಏಷ್ಯಾದ ರಾಷ್ಟ್ರಗಳಿಗೆ ಉತ್ಪಾದನೆ ವರ್ಗಾಯಿಸುವ ಕಂಪನಿಗಳಿಗೆ 2020ರ ಹಣಕಾಸು ವರ್ಷದಲ್ಲಿ ಸರ್ಕಾರದ ಪೂರಕ ಬಜೆಟ್ 23.5 ಬಿಲಿಯನ್ ಯೆನ್ (221 ಮಿಲಿಯನ್ ಡಾಲರ್) ನಿಗದಿಪಡಿಸಿದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮ ನಿಕ್ಕಿ ಏಷ್ಯಾನ್ ರಿವ್ಯೂವ್ ವರದಿ ಮಾಡಿದೆ.
ಆರ್ಥಿಕ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯವು ಗುರುವಾರ ಎರಡನೇ ಸುತ್ತಿನ ಅರ್ಜಿಗಳನ್ನು ಆರಂಭಿಸಿತು. ಜಪಾನ್-ಏಷಿಯಾನ್ ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವಕ್ಕೆ ಕಾರಣವಾಗುವ ಯೋಜನೆಗಳನ್ನು ಅರ್ಹತಾ ಕ್ರಮಗಳ ಪಟ್ಟಿಗೆ ಸೇರಿಸಿತು. ಭಾರತ ಮತ್ತು ಬಾಂಗ್ಲಾದೇಶದಂತಹ ದೇಶಗಳಿಗೆ ಸ್ಥಳಾಂತರಗೊಳ್ಳುವತ್ತ ಸೂರ್ಯೋದಯದ ನಾಡು ದೃಷ್ಟಿ ನೆಟ್ಟಿದೆ.
ಕಾರ್ಯಸಾಧ್ಯತಾ ಅಧ್ಯಯನಗಳು ಮತ್ತು ಪ್ರಾಯೋಗಿಕ ಕಾರ್ಯಕ್ರಮಗಳಿಗೆ ತಯಾರಕರು ಸಹಾಯಧನ ಪಡೆಯಬಹುದು. ನೀಡಲಾಗುವ ಒಟ್ಟು ಮೊತ್ತವು ಹತ್ತು ಮಿಲಿಯನ್ ಡಾಲರ್‌ಗಳಿಗೆ ತಲುಪುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಜಪಾನ್ ತನ್ನ ಪೂರೈಕೆ ಸರಪಳಿಗಳಲ್ಲಿ ಅದರಲ್ಲೂ ವಿಶೇಷವಾಗಿ ಚೀನಾದಲ್ಲಿನ ಕೆಲವು ಘಟಕಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಸರಬರಾಜು ಹಾಗೂ ವಿದ್ಯುತ್ ಘಟಕಗಳಂತಹ ಉತ್ಪನ್ನಗಳ ಸ್ಥಿರವಾದ ಹರಿ ಕಾಪಾಡಿಕೊಳ್ಳಲು ಈ ಕಾರ್ಯಕ್ರಮ ರೂಪಿಸಲು ಉದ್ದೇಶಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜುಲೈನಲ್ಲಿ ಘೋಷಿಸಲಾದ ಮೊದಲ ಸುತ್ತಿನ ಸಬ್ಸಿಡಿಗಳು ಆಗ್ನೇಯ ಏಷ್ಯಾಕ್ಕೆ ಉತ್ಪಾದನೆಯನ್ನು ಸ್ಥಳಾಂತರಿಸುವ 30 ಕಂಪನಿಗಳಿಗೆ 10 ಬಿಲಿಯನ್ ಯೆನ್‌ಗಿಂತ ಹೆಚ್ಚಿನ ಮೊತ್ತ ನೀಡಿತು. ಉದಾ: ಹೋಯಾ ತನ್ನ ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನೆಯನ್ನು ವಿಯೆಟ್ನಾಂ ಮತ್ತು ಲಾವೋಸ್‌ಗೆ ಸ್ಥಳಾಂತರಿಸಿತು. ಉತ್ಪಾದನಾ ಸೌಲಭ್ಯಗಳನ್ನು ಜಪಾನ್‌ಗೆ ವರ್ಗಾಯಿಸಲು ಇನ್ನೂ 57 ಮಂದಿ ಬೆಂಬಲ ಪಡೆಯುತ್ತಿದ್ದಾರೆ ಎಂಬುದು ಉಲ್ಲೇಖವಾಗಿದೆ.