ETV Bharat / business

ಐಟಿ ವಿಭಾಗದಲ್ಲಿ ಭರ್ಜರಿ ನೇಮಕಾತಿ: ಬೆಂಗಳೂರಲ್ಲಿ ಅತ್ಯಧಿಕ ಸಂಬಳ - ಉದ್ಯೋಗ ನೇಮಕಾತಿ ವರದಿ

ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ದೆಹಲಿ ಸೇರಿದಂತೆ ಹಲವು ಮೆಟ್ರೋ ನಗರಗಳಲ್ಲಿ ಜಾಬ್ ಪೋಸ್ಟಿಂಗ್‌ಗಳು ಗಮನಾರ್ಹ ಏರಿಕೆ ಕಂಡಿದೆ. 2021ರ ಜನವರಿಯಲ್ಲಿ ಈ ವಲಯದಲ್ಲಿ ಶೇ 50ಕ್ಕೂ ಹೆಚ್ಚು ಉದ್ಯೋಗ ಹೊಂದಿದೆ.

hiring
hiring
author img

By

Published : Feb 23, 2021, 7:36 PM IST

ಮುಂಬೈ: ಭಾರತದ ಐಟಿ ವಲಯವು 2020ರಲ್ಲಿ ಲಾಕ್‌ಡೌನ್ ಬಳಿಕ ನೇಮಕಾತಿಯಲ್ಲಿ ಅನುಕ್ರಮ ಬೆಳವಣಿಗೆ ಕಾಣುತ್ತಿದ್ದು, ಹಿಂದಿನ ತಿಂಗಳಿಗೆ ಹೋಲಿಸಿದರೆ ಜನವರಿಯಲ್ಲಿ ಉದ್ಯೋಗ ಭರ್ತಿಯಲ್ಲಿ ಶೇ 39ರಷ್ಟು ಬೆಳವಣಿಗೆ ಕಂಡಿದೆ ಎಂದು ವರದಿಯೊಂದು ತಿಳಿಸಿದೆ.

ಐಟಿ ವಲಯದ ನಂತರ ಬಿಪಿಒ (ಶೇ 10ರಷ್ಟು ಬೆಳವಣಿಗೆ) ಮತ್ತು ಬ್ಯಾಂಕಿಂಗ್ (ಶೇ 6ರಷ್ಟು) ಎಂದು ಜಾಬ್ ಸೈಟ್ ಎಸ್‌ಸಿಕೆ ವರದಿ ತಿಳಿಸಿದೆ.

ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ದೆಹಲಿ ಸೇರಿದಂತೆ ಹಲವು ಮೆಟ್ರೋ ನಗರಗಳಲ್ಲಿ ಜಾಬ್ ಪೋಸ್ಟಿಂಗ್‌ಗಳು ಗಮನಾರ್ಹ ಏರಿಕೆ ಕಂಡಿದೆ. 2021ರ ಜನವರಿಯಲ್ಲಿ ಈ ವಲಯದಲ್ಲಿ ಶೇ 50ಕ್ಕೂ ಹೆಚ್ಚು ಉದ್ಯೋಗ ಹೊಂದಿದೆ ಎಂದು ಹೇಳಿದೆ.

ಎಸ್​​ಸಿಐಕೆಇವೈ ಮಾರ್ಕೆಟ್ ನೆಟ್‌ವರ್ಕ್‌ನ ವರದಿಯು ಭಾರತದಾದ್ಯಂತ 15,000ಕ್ಕೂ ಹೆಚ್ಚು ಉದ್ಯೋಗ ಪೋಸ್ಟಿಂಗ್‌ಗಳ ಡೇಟಾ ವಿಶ್ಲೇಷಿಸಿದೆ. ಬೆಂಗಳೂರು ಮತ್ತು ಹೈದರಾಬಾದ್ ಭಾರತದಲ್ಲಿ ಐಟಿ ಉದ್ಯೋಗಗಳಿಗೆ 25 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಂಭಾವನೆ ಪಡೆಯುವ ನಗರಗಳಾಗಿವೆ ಎಂದು ವರದಿ ಬಹಿರಂಗಪಡಿಸಿದೆ.

ಇದನ್ನೂ ಓದಿ: ಸಿಇಸಿಪಿಎ ಒಪ್ಪಂದಕ್ಕೆ ಭಾರತ-ಮಾರಿಷಸ್ ಸಹಿ: 300ಕ್ಕೂ ಅಧಿಕ ಭಾರತೀಯ​ ಸರಕುಗಳಿಗೆ ಮುಕ್ತ ಪ್ರವೇಶ

6 ಲಕ್ಷ ರೂ.ಗಿಂತ ಕಡಿಮೆ ಮತ್ತು 6-15 ಲಕ್ಷ ರೂ. ಸಂಬಳ ಬ್ರಾಕೆಟ್ ಹೊಂದಿರುವ ಉದ್ಯೋಗಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಯೋಜನಾ ವ್ಯವಸ್ಥಾಪಕರಿಗೆ ಐಟಿ ವಲಯದಲ್ಲಿ (ಶೇ 47ರಷ್ಟು) ಹೆಚ್ಚಿನ ಬೇಡಿಕೆಯಿದೆ. ಈ ನಂತರ ನಿರ್ಮಾಣ (ಶೇ 6ರಷ್ಟು), ಬ್ಯಾಂಕಿಂಗ್ (ಶೇ 4ರಷ್ಟು) ಮತ್ತು ನೇಮಕಾತಿ (ಶೇ 3ಎರಷ್ಟು) ಇವೆ.

ಇತರ ಕೈಗಾರಿಕೆಗಳಿಗೆ ಹೋಲಿಸಿದರೆ ಡಿಜಿಟಲ್ ಮಾರ್ಕೆಟಿಂಗ್ (ಶೇ 30ರಷ್ಟು) ನೇಮಕಕ್ಕೆ ಪ್ರಮುಖ ಪಾತ್ರಗಳಲ್ಲಿ ಒಂದಾಗಿದೆ ಎಂದಿದೆ.

ಸಾಂಕ್ರಾಮಿಕ ರೋಗದ ಹೊರತಾಗಿಯೂ ಕಳೆದು ಹೋದ ಉದ್ಯೋಗಗಳನ್ನು ಮರು ಪಡೆಯುವಲ್ಲಿ ಐಟಿ ವಲಯವು ಅಸಾಧಾರಣ ಪ್ರಗತಿ ಸಾಧಿಸಿದೆ. ಡಿಜಿಟಲ್ ರೂಪಾಂತರದಲ್ಲಿ ಐಟಿ ವೃತ್ತಿಪರರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಆರ್ಥಿಕತೆಯ ಅನೇಕ ಕ್ಷೇತ್ರಗಳು ವರ್ಕ್​ ಫ್ರಮ್​ ಹೋಮ್​ ಮಾಡಲು ಮುಂದುವರಿಸುತ್ತಿವೆ.

ಉದ್ಯೋಗ ಮಾರುಕಟ್ಟೆಯ ಕೆಲವು ಭಾಗಗಳು ಇನ್ನೂ ಹೆಣಗಾಡುತ್ತಿದ್ದರೇ ಐಟಿ ಉದ್ಯೋಗವು ಪ್ರಕಾಶಮಾನವಾದ ಸ್ಥಾನದಲ್ಲಿದೆ. ಇದೇ ರೀತಿಯ ಬೆಳವಣಿ ಮುಂದುವರಿದರೆ ಕಳೆದುಹೋದ ಎಲ್ಲ ಐಟಿ ಉದ್ಯೋಗಗಳಲ್ಲಿ ನಾವು ಶೀಘ್ರದಲ್ಲೇ ಚೇತರಿಕೆ ಕಾಣುತ್ತೇವೆ ಎಂದು ಎಸ್‌ಸಿಕೆ ಸಹ ಸಂಸ್ಥಾಪಕ ಅಕ್ಷಯ್ ಶರ್ಮಾ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.