ನವದೆಹಲಿ: ಕೈಗಾರಿಕಾ ಪ್ರಚಾರ ಮತ್ತು ಆಂತರಿಕ ವ್ಯಾಪಾರ ಇಲಾಖೆ (ಡಿಪಿಐಐಟಿ), ಯಾವುದೇ ಭಾರತೀಯ ಕಂಪನಿಯಲ್ಲಿ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಮಾಡಿದ ಹೂಡಿಕೆಗಳನ್ನು ದೇಶೀಯ ಹೂಡಿಕೆಯಾಗಿ ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ವಿದೇಶಿ ನೇರ ಹೂಡಿಕೆಯ ಲೆಕ್ಕಾಚಾರದಲ್ಲಿ ಇವುಗಳನ್ನು ದೇಶೀಯ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ವಾಪಸಾತಿ ರಹಿತ ವಿಧಾನದ ಮೇಲೆ ವಲಸಿಗ ನಿಯಂತ್ರಣ ಹೊಂದಿರುವ ಭಾರತೀಯ ಕಂಪನಿಗಳಲ್ಲಿನ ಹೂಡಿಕೆಗಾಗಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿ ಸರ್ಕಾರ ಪರಿಶೀಲಿಸಿದೆ ಎಂದು ಡಿಪಿಐಐಟಿ ತಿಳಿಸಿದೆ.
ಇದನ್ನೂ ಓದಿ: 3 ವಾರದಿಂದ ಪೆಟ್ರೋಲ್, ಡೀಸೆಲ್ ಏರಿಸದ ಕೇಂದ್ರ: 4 ರಾಜ್ಯಗಳ ಚುನಾವಣೆ ಕಾರಣವಾ?
ಭಾರತದ ಕಂಪನಿಯಲ್ಲಿ ಮಾಡಿದ ವಾಪಸಾತಿ ರಹಿತ ಹೂಡಿಕೆಗಳಿಗೆ ಸಂಬಂಧ ಯಾವುದೇ ಮಾರಾಟವನ್ನು ಭಾರತದ ಹೊರಗೆ ಹೋಗಲು ಅನುಮತಿಸಲಾಗುವುದಿಲ್ಲ. ವಲಸಿಗರು ಮಾಡಿದ ಹೂಡಿಕೆಗಳನ್ನು ಸ್ಪಷ್ಟಪಡಿಸಲು ಎಫ್‌ಡಿಐ ನೀತಿಗೆ ಒಂದು ಹೊಸ ಷರತ್ತು ಸೇರಿಸಲಾಗಿದೆ ಎಂದು ಇಲಾಖೆ ವಿವರಿಸಿದೆ. ಫೆಮಾ ಅಧಿಸೂಚನೆ ದಿನಾಂಕದಿಂದ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ಡಿಪಿಐಐಟಿ ಹೇಳಿದೆ.