ETV Bharat / business

ದೇಶಭ್ರಷ್ಟ ಆರ್ಥಿಕ ಅಪರಾಧಿ ನೀರವ್ ಮೋದಿ ಪತ್ನಿ ವಿರುದ್ಧವೂ ರೆಡ್​ ಕಾರ್ನರ್ ನೋಟಿಸ್​! - ಅಮಿ ಮೋದಿ

ನೀರವ್ ಮೋದಿ ಪತ್ನಿ ಅಮೆರಿಕದ ನಾಗರಿಕತ್ವ ಪಡೆದಿದ್ದು, ಪಿಎನ್​​ಬಿ ಹಗರಣದಲ್ಲಿ ಪಾಲುದಾರ ಆಗಿರುವುದರಿಂದ ಅಮಿ ಮೋದಿ ವಿರುದ್ಧ ರೆಡ್​​ ಕಾರ್ನರ್​ ನೋಟಿಸ್ ಹೊರಡಿಸುವಂತೆ ಇಂಟರ್​​ ಪೋಲ್​​ಗೆ ಜಾರಿ ನಿರ್ದೇಶನಾಲಯ (ಇಡಿ) ಮನವಿ ಮಾಡಿತ್ತು. ಅಮಿ ಮೋದಿ ಅವರ ವಿರುದ್ಧ ಪಿಎಂಎಲ್‌ಎ ಪ್ರಕರಣದ ಆಧಾರದ ಮೇಲೆ ಇಂಟರ್‌ಪೋಲ್ ಆರ್‌ಸಿಎನ್ ಹೊರಡಿಸಿದೆ.

Nirav Modi's wife
ನೀರವ್ ಮೋದಿ ಪತ್ನಿ
author img

By

Published : Aug 25, 2020, 3:28 PM IST

ನವದೆಹಲಿ: ಪಂಜಾಬ್ ನ್ಯಾಷನಲ್​ ಬ್ಯಾಂಕ್​​ಗೆ 13,500 ಕೋಟಿ ರೂ. ವಂಚನೆ ಎಸಗಿ ವಿದೇಶಗಳಲ್ಲಿ ತಲೆ ಮರೆಸಿಕೊಂಡಿರುವ ಅತಿದೊಡ್ಡ ಆರ್ಥಿಕ ಅಪರಾಧ ವಜ್ರ ವ್ಯಾಪಾರಿ ನೀರವ್ ಮೋದಿ ಪತ್ನಿ ವಿರುದ್ಧ ಇಂಟರ್​ ಪೋಲ್​​ (ಅಂತಾರಾಷ್ಟ್ರೀಯ ಪೊಲೀಸರು) ರೆಡ್​ ಕಾರ್ನರ್​ ನೋಟಿಸ್​ ಜಾರಿ ಮಾಡಿದೆ.

ನೀರವ್ ಮೋದಿ ಪತ್ನಿ ಅಮೆರಿಕದ ನಾಗರಿಕತ್ವ ಪಡೆದಿದ್ದು, ಪಿಎನ್​​ಬಿ ಹಗರಣದಲ್ಲಿ ಪಾಲುದಾರ ಆಗಿರುವುದರಿಂದ ಅಮಿ ಮೋದಿ ವಿರುದ್ಧ ರೆಡ್​​ ಕಾರ್ನರ್​ ನೋಟಿಸ್ ಹೊರಡಿಸುವಂತೆ ಇಂಟರ್​​ ಪೋಲ್​​ಗೆ ಜಾರಿ ನಿರ್ದೇಶನಾಲಯ (ಇಡಿ) ಮನವಿ ಮಾಡಿತ್ತು.

ತನಿಖೆಗೆ ಸಂಬಂಧಿಸಿದ ಹಿರಿಯ ಇಡಿ ಅಧಿಕಾರಿಯೊಬ್ಬರು ನ್ಯೂಸ್ ಏಜೆನ್ಸಿ ಐಎಎನ್‌ಎಸ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅಮಿ ಮೋದಿ ಅವರ ವಿರುದ್ಧ ಪಿಎಂಎಲ್‌ಎ ಪ್ರಕರಣದ ಆಧಾರದ ಮೇಲೆ ಇಂಟರ್‌ಪೋಲ್ ಆರ್‌ಸಿಎನ್ ಹೊರಡಿಸಿದೆ ಎಂದಿದ್ದಾರೆ.

ಅಂತಾರಾಷ್ಟ್ರೀಯ ಬಂಧನ ವಾರಂಟ್ ಆಗಿ ಕಾರ್ಯನಿರ್ವಹಿಸುವ ನೋಟಿಸ್ ಹಸ್ತಾಂತರದ ಪ್ರಕ್ರಿಯೆಯನ್ನು ಇಡಿ ಆರಂಭಿಸಲಿದೆ. ಪತಿ ಪಿಎನ್‌ಬಿಯಿಂದ ಲೆಟರ್ಸ್ ಆಫ್ ಅಂಡರ್​​ಟೇಕಿಂಗ್ ಅಂಡ್​​​ ಫಾರಿನ್ ಲೆಟರ್ಸ್ ಮೂಲಕ ಮೋಸದಿಂದ ಪಡೆದ ಸಾಲದ ಹಣದಿಂದ ನ್ಯೂಯಾರ್ಕ್​ನ ಸೆಂಟ್ರಲ್ ಪಾರ್ಕ್​​ನಲ್ಲಿ ಎರಡು ಅಪಾರ್ಟ್​ಮೆಂಟ್​ ಖರೀದಿಸಿದ ಆರೋಪದಲ್ಲಿ ಅಮಿ ಮೋದಿ ಫಲಾನುಭವಿ ಎಂದು ಇಡಿ ತನಿಖೆಯಿಂದ ಕಂಡುಕೊಂಡಿತ್ತು. ಇದನ್ನು ಇಂಟರ್​ ಪೋಲ್​ಗೆ ಹಂಚಿಕೊಂಡು ಆರ್​ಸಿಎನ್​​ ಜಾರಿಗೆಗೊಳಿಸುವಲ್ಲಿ ಯಶಸ್ವಿಯಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇಡಿ ಕೋರಿಕೆಯ ಮೇರೆಗೆ ಹಣ ವರ್ಗಾವಣೆ ಆರೋಪದ ಮೇಲೆ ನೀರವ್ ಮೋದಿಯ ಸಹೋದರ ನೆಹಲ್ ಮೋದಿ ವಿರುದ್ಧ ಇಂಟರ್‌ಪೋಲ್ ಆರ್‌ಸಿಎನ್ ಹೊರಡಿಸಿತ್ತು. ಪ್ರಸ್ತುತ ಲಂಡನ್‌ನಲ್ಲಿ ದಾಖಲಾದ ನೀರವ್ ಮೋದಿಯ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿದೆ.

ನೀರವ್​ ಸಹೋದರಿ ಪೂರ್ವಿ ಮೋದಿ ಮತ್ತು ಗೀತಾಂಜಲಿ ಗ್ರೂಪ್‌ನ ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ. ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಸಿಬಿಐ ಮತ್ತು ಇಡಿ ಜಂಟಿಯಾಗಿ ತನಿಖೆ ನಡೆಸುತ್ತಿದೆ. ಚೋಕ್ಸಿ ಈಗ ಆಂಟಿಗುವಾದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.