ETV Bharat / business

ಭಾರತಕ್ಕೆ 'ಕೊರೊನಾ ಮಾಫಿಯಾ'ದ ಎಚ್ಚರಿಕೆ ಕೊಟ್ಟ ಇಂಟರ್​ಪೋಲ್​: ಹೇಗಿರಲಿವೆ ದುಷ್ಕೃತ್ಯಗಳು? - ಕೊರೊನಾ ವ್ಯಾಕ್ಸಿನ್​

ಇಂಟರ್​ಪೋಲ್​ ಸೈಬರ್ ಕ್ರೈಮ್ ಘಟಕವು ಆನ್‌ಲೈನ್ ಔಷಧಾಲಯ ಸಂಬಂಧ 3,000 ವೆಬ್‌ಸೈಟ್‌ಗಳಲ್ಲಿ ಅಕ್ರಮ ಔಷಧ ಮತ್ತು ವೈದ್ಯಕೀಯ ಸಾಧನಗಳ ಮಾರಾಟ ನಡೆಯುತ್ತಿದೆ ಎಂದು ಶಂಕಿಸಿದೆ. ಸುಮಾರು 1,700 ಸೈಬರ್ ಬೆದರಿಕೆಗಳು, ಫಿಶಿಂಗ್ ಮತ್ತು ಸ್ಪ್ಯಾಮಿಂಗ್ ಮಾಲ್‌ವೇರ್ ನಂತಹ ಕೃತ್ಯಗಳಿವೆ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.

Interpol
ಇಂಟರ್​ಪೋಲ್​
author img

By

Published : Dec 3, 2020, 5:13 PM IST

ಲಿಯಾನ್: ರಾಷ್ಟ್ರಗಳು ತಮ್ಮ ಜನಸಾಮಾನ್ಯರಿಗೆ ಕೊರೊನಾ ವೈರಸ್ ವಿರುದ್ಧ ಲಸಿಕೆ ನೀಡಲು ಸಜ್ಜಾಗುತ್ತಿದ್ದಂತೆ, ಇಂಟರ್​ಪೋಲ್ ತನ್ನ 194 ಸದಸ್ಯ ರಾಷ್ಟ್ರಗಳಿಗೆ 'ಕೊರೊನಾ ಮಾಫಿಯಾ' ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ರವಾನಿಸಿದೆ.

ಸರ್ಕಾರಗಳು ಲಸಿಕೆಗಳನ್ನು ಹೊರತರಲು ತಯಾರಿ ನಡೆಸುತ್ತಿದ್ದು, ಅಪರಾಧ ಸಂಸ್ಥೆಗಳು ಪೂರೈಕೆ ಸರಪಳಿಗಳ ಒಳಗೆ ನುಸುಳಲು ಅಥವಾ ಅದಕ್ಕೆ ಅಡ್ಡಿಪಡಿಸಲು ಹೊಂಚು ಹಾಕುತ್ತಿವೆ ಎಂದು ಇಂಟರ್​ಪೋಲ್ ಪ್ರಧಾನ ಕಾರ್ಯದರ್ಶಿ ಜುರ್ಗೆನ್ ಸ್ಟಾಕ್ ಹೇಳಿದ್ದಾರೆ.

ಕ್ರಿಮಿನಲ್ ನೆಟ್‌ವರ್ಕ್‌ಗಳು ನಕಲಿ ವೆಬ್‌ಸೈಟ್‌ ಮತ್ತು ಸುಳ್ಳು ಚಿಕಿತ್ಸೆಗಳ ಮೂಲಕ ಅನುಮಾನಾಸ್ಪದ ಭಾವನೆಗಳನ್ನು ಹೊಂದಿರುವವರನ್ನು ಗುರಿಯಾಗಿಸಿಕೊಳ್ಳಲಿವೆ. ಇದು ಅವರ ಆರೋಗ್ಯಕ್ಕೂ ಹಾಗೂ ಜೀವಕ್ಕೂ ದೊಡ್ಡ ಅಪಾಯ ತಂದೊಡ್ಡಲಿದೆ ಎಂದರು.

2020 ಫಾರ್ಚೂನ್​ ಇಂಡಿಯಾ 500: ರಿಲಯನ್ಸ್​ಗೆ ಅಗ್ರಸ್ಥಾನ.. ಟಾಟಾ, ಇನ್ಫಿಗೆ ಯಾವಸ್ಥಾನ?

ಕೋವಿಡ್​-19 ಲಸಿಕೆಯೊಂದಿಗೆ ಸಂಪರ್ಕ ಹೊಂದಿದ ಎಲ್ಲ ರೀತಿಯ ಅಪರಾಧ ಚಟುವಟಿಕೆಗಳಿಗೆ ತಲೆ ಹಾಕಿದರೆ ಏನಾಗುತ್ತದೆ ಎಂಬುದಕ್ಕೆ ಕಾನೂನು ಜಾರಿಗೊಳಿಸಲು ಸಾಧ್ಯವಾದಷ್ಟು ಎಲ್ಲ ರಾಷ್ಟ್ರಗಳು ಸಿದ್ಧವಾಗಿರಬೇಕು. ಇದಕ್ಕಾಗಿ ಇಂಟರ್​ಪೋಲ್ ಇಡೀ ಜಗತ್ತಿಗೆ ಎಚ್ಚರಿಕೆ ನೀಡುತ್ತಿದೆ ಎಂದರು.

ವೈದ್ಯಕೀಯ ಉಪಕರಣಗಳಾಗಲಿ ಅಥವಾ ಔಷಧಗಳನ್ನು ಹುಡುಕಲು ಆನ್‌ಲೈನ್‌ ಪ್ರವೇಶಿಸುವ ಮುನ್ನ ಈ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ.

ಮಾರಣಾಂತಿಕ ಉತ್ಪನ್ನಗಳನ್ನು ಆರ್ಡರ್ ಮಾಡುವ ಅಪಾಯಗಳ, ಜೊತೆಗೆ ಇಂಟರ್​ಪೋಲ್​ ಸೈಬರ್ ಕ್ರೈಮ್ ಘಟಕವು ಆನ್‌ಲೈನ್ ಔಷಧಾಲಯ ಸಂಬಂಧ 3,000 ವೆಬ್‌ಸೈಟ್‌ಗಳಲ್ಲಿ ಅಕ್ರಮ ಔಷಧ ಮತ್ತು ವೈದ್ಯಕೀಯ ಸಾಧನಗಳ ಮಾರಾಟ ನಡೆಯುತ್ತಿದೆ ಎಂದು ಶಂಕಿಸಿದೆ. ಸುಮಾರು 1,700 ಸೈಬರ್ ಬೆದರಿಕೆಗಳು, ಫಿಶಿಂಗ್ ಮತ್ತು ಸ್ಪ್ಯಾಮಿಂಗ್ ಮಾಲ್‌ವೇರ್ ನಂತಹ ಕೃತ್ಯಗಳಿವೆ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.