ನವದೆಹಲಿ : ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದಾಗಿ ಗಣಿಗಾರಿಕೆ, ಉತ್ಪಾದನೆ ಮತ್ತು ವಿದ್ಯುತ್ ಕ್ಷೇತ್ರಗಳ ಕಳಪೆ ಪ್ರದರ್ಶನದಿಂದಾಗಿ ದೇಶದ ಕೈಗಾರಿಕಾ ಉತ್ಪಾದನೆಯು ಮಾರ್ಚ್‌ನಲ್ಲಿ ಶೇ. 16.7ರಷ್ಟು ಕುಸಿದಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
2020ರ ಮಾರ್ಚ್ 25ರಿಂದ ಕೋವಿಡ್-19 ಹಬ್ಬುವಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ವಿಧಿಸಿತ್ತು. ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) 2019ರ ಮಾರ್ಚ್‌ನಲ್ಲಿ ಶೇ 2.7ರಷ್ಟು ಏರಿಕೆಯಾಗಿದೆ.
ರಾಷ್ಟ್ರೀಯ ಸಾಂಖಿಕ್ಯ ಕಚೇರಿ (ಎನ್‌ಎಸ್‌ಒ) ಅಂಕಿಅಂಶಗಳ ಪ್ರಕಾರ, ಉತ್ಪಾದನಾ ವಲಯದ ಉತ್ಪಾದನೆಯು ಶೇ 20.6ರಷ್ಟು ಕುಸಿದಿದೆ. 2019ರ ಮಾರ್ಚ್‌ನಲ್ಲಿ ಶೇ 2.2 ರಷ್ಟು ಬೆಳವಣಿಗೆಗೆ ಹೋಲಿಸಿದರೆ ವಿದ್ಯುತ್ ಉತ್ಪಾದನೆಯು ಶೇ 6.8ರಷ್ಟು ಕುಸಿದಿದೆ.
ಗಣಿಗಾರಿಕೆ ಕ್ಷೇತ್ರದ ಉತ್ಪಾದನೆಯು ಹಿಂದಿನ ಶೇ 0.8ರ ಬೆಳವಣಿಗೆಗೆ ಹೋಲಿಸಿದರೆ ಸಮವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಐಐಪಿ 2018-19ರಲ್ಲಿ ಶೇ 3.8ರಷ್ಟು ವಿಸ್ತರಣೆಯಿಂದ ಶೇ 0.7ರಷ್ಟು ಸಂಕುಚಿತಗೊಂಡಿದೆ.