ನವದೆಹಲಿ: ಕೈಗಾರಿಕಾ ಉತ್ಪಾದನಾ ವಲಯವು ಅಕ್ಟೋಬರ್‌ನಲ್ಲಿ ಶೇ. 3.8ರಷ್ಟು ಕುಸಿತ ಕಂಡಿದೆ ಎಂದು ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ತಿಳಿಸಿದೆ.
ಕೈಗಾರಿಕಾ ಉತ್ಪಾದನಾ ವಲಯ ಮಾಪನದ ಐಐಪಿ ಅನ್ವಯ, ವಿದ್ಯುತ್, ಗಣಿಗಾರಿಕೆ ಮತ್ತು ಉತ್ಪಾದನಾ ಕ್ಷೇತ್ರಗಳ ಕಳಪೆ ಸಾಧನೆಯಿಂದಾಗಿ ಈ ಕ್ಷೇತ್ರವು ಕುಸಿತ ದಾಖಲಿಸಿದೆ. 2018ರ ಅಕ್ಟೋಬರ್‌ನಲ್ಲಿ ಇದು ಶೇ. 8.4ರಷ್ಟು ಇತ್ತು ಎಂದು ಇಂದು ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ತಿಳಿಸಿದೆ.
ಅಕ್ಟೋಬರ್‌ನಲ್ಲಿ ತಯಾರಿಕಾ ಕ್ಷೇತ್ರದ ಉತ್ಪಾದನೆಯು ಶೇ. 3.8ರಷ್ಟು ಕುಸಿತ ಕಂಡುಬಂದಿದೆ. ಒಂದು ವರ್ಷದ ಹಿಂದಿನ ಶೇ. 8.2ರಷ್ಟು ಬೆಳವಣಿಗೆಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಶೇ. 2.1 ರಷ್ಟು ಕುಸಿತ ದಾಖಲಿಸಿದೆ.
ವಿದ್ಯುತ್ ಉತ್ಪಾದನೆಯು ಅಕ್ಟೋಬರ್‌ನಲ್ಲಿ ಶೇ. 12.2 ರಷ್ಟು ಕುಸಿದಿದೆ. ಇದು ಹಿಂದಿನ ವರ್ಷದಲ್ಲಿ ಶೇ. 10.8ರಷ್ಟು ಬೆಳವಣಿಗೆಗೆ ಇತ್ತು. ಗಣಿಗಾರಿಕೆ ಉತ್ಪಾದನೆಯು ಪರಿಶೀಲನೆಯ ಮಾಸಿಕದಲ್ಲಿ ಶೇ. 8ರಷ್ಟು ಕುಸಿದಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ. 7.3ರಷ್ಟು ಬೆಳವಣಿಗೆ ಸಾಧಿಸಿತ್ತು.