ನವದೆಹಲಿ: ಆದಾಯದ ಮೇಲೆ ಕೋವಿಡ್ -19 ಕರಿಛಾಯೆಯ ಅಸಮರ್ಪಕ ನಿರ್ವಹಣೆಯ ಪರಿಣಾಮದಿಂದಾಗಿ ನೇರ ತೆರಿಗೆ ಸಂಗ್ರಹದಲ್ಲಿ ತೀವ್ರ ಕುಸಿತದೊಂದಿಗೆ ಭಾರತದ ತೆರಿಗೆಯು ಸೂಕ್ಷ್ಮ ಬದಲಾವಣೆಗೆ ಒಳಗಾಗಿದೆ.
ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಮತ್ತು ಆಮದು ಸುಂಕ ಒಳಗೊಂಡ ಪರೋಕ್ಷ ತೆರಿಗೆಗಳ ಪಾಲು ಏರಿಕೆಯಾಗಿದೆ. ಇದೇ ಟೈಮಿನಲ್ಲಿ ನೇರ ತೆರಿಗೆಗಳಾದ ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯ ತೆರಿಗೆ 2020ರಲ್ಲಿ ಕಡಿಮೆಯಾಗಿದೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಮಾತನಾಡಿ, ಸಾಂಕ್ರಾಮಿಕ ರೋಗಯು ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದೆ. ಯಾವುದೇ ದೊಡ್ಡ ಪ್ರಮಾಣದ ಬದಲಾವಣೆಗಳು ನೇರ ತೆರಿಗೆಗಳನ್ನು ತೀವ್ರವಾಗಿ ಬಾಧಿಸಿದರೆ ಪರೋಕ್ಷ ತೆರಿಗೆ ಸಂಗ್ರಹವು ವ್ಯವಹಾರ ವಹಿವಾಟು ಮತ್ತು ಅನುಸರಣೆಯ ಅನುಪಾತದಲ್ಲಿ ಇರುತ್ತದೆ ಎಂದರು.
ಕೋವಿಡ್ ಪ್ರಭಾವಕ್ಕೆ ಒಳಗಾದ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿದೆ. ನೇರ ತೆರಿಗೆಗಳು ಹೆಚ್ಚು ತೀವ್ರ ಪರಿಣಾಮಕ್ಕೆ ಒಳಗಾಗಿವೆ. ಏಕೆಂದರೆ ಕಂಪನಿಯ ಲಾಭವು ಯಾವಾಗಲೂ ವಹಿವಾಟಿಗೆ ನೇರವಾದ ಅನುಪಾತದಲ್ಲಿ ಇರುವುದಿಲ್ಲ. ನಿಮ್ಮ ವಹಿವಾಟು ಒಂದು ನಿರ್ದಿಷ್ಟ ಲೆಕ್ಕಚಾರಕ್ಕಿಂತ ಕಡಿಮೆ ಆದರೆ ಬರೀ ಲಾಭ ಮಾತ್ರ ಕಡಿಮೆ ಆಗುವುದಿಲ್ಲ. ಅದು ನಕಾರಾತ್ಮಕ ವಲಯದತ್ತ ಹೋಗಬಹುದು. ಅದರಿಂದ ಕಂಪನಿಯು ಯಾವುದೇ ಆದಾಯ ತೆರಿಗೆ ಪಾವತಿಸದೆ ನಷ್ಟಕ್ಕೆ ಒಳಗಾಗಬಹುದು ಎಂದು ವ್ಯಾಖ್ಯಾನಿಸಿದರು.
ಇದನ್ನೂ ಓದಿ: 'ಜಾಕ್ ಮಾ' ಮಂಗಮಾಯ ಸುದ್ದಿ: ಭಾರತೀಯ ಹೂಡಿಕೆದಾರರಲ್ಲಿ ತಳಮಳವೇಕೆ?
ಅದೇ ರೀತಿ, ನಾವು ಚೇತರಿಕೆಯ ಹಂತದಲ್ಲಿ ಇದ್ದಾಗ, ಕಂಪನಿಗಳು ಆದಾಯ ತೆರಿಗೆ ಪಾವತಿಸಿ ಲಾಭದಾಯಕ ವಲಯಕ್ಕೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪರೋಕ್ಷ ತೆರಿಗೆಯಲ್ಲಿಯೂ ಇದು ವ್ಯವಹಾರದ ಪ್ರಮಾಣ ಮತ್ತು ವಹಿವಾಟು ಅನುಸರಣೆ ಏರುಪೇರಿನ ಅನುಪಾತದಲ್ಲಿ ಇರುತ್ತದೆ.
ಸರ್ಕಾರ ಅಧಿಕೃತವಾಗಿ ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹವನ್ನು ಬಿಡುಗಡೆ ಮಾಡಿಲ್ಲ. ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ಪರೋಕ್ಷ ತೆರಿಗೆಗಳ ಪಾಲು ಶೇ. 56ಕ್ಕೆ ಏರಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ. ಇದು ಕಳೆದ ಒಂದು ದಶಕದಲ್ಲಿನ ಗರಿಷ್ಠ ಸಂಗ್ರಹವಾಗಿದೆ. ದು ನೇರ ತೆರಿಗೆ ಸಂಗ್ರಹದಲ್ಲಿ ಶೇ 26-27ರಷ್ಟು ತೀವ್ರ ಕುಸಿತ ಕಂಡಿದೆ.
ನೇರ ತೆರಿಗೆಗಳು ಆದಾಯದ ಮಟ್ಟಗಳ ನೇರ ಫಲಿತಾಂಶ ಆಗಿದ್ದರೆ, ಪರೋಕ್ಷ ತೆರಿಗೆಗಳು ಬಳಕೆ ಅವಲಂಬಿತವಾಗಿ ಸಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕ್ರಮವಾಗಿ ಲೀಟರ್‌ಗೆ 13 ಮತ್ತು 10 ರೂ.ನಷ್ಟು ಸರ್ಕಾರ ಹೆಚ್ಚಿಸಿದ ನಂತರ 2020ರಲ್ಲಿ ಅಬಕಾರಿ ಸಂಗ್ರಹ ಹೆಚ್ಚಾಗಿದೆ. ಆಮದು ಮಾಡಿದ ಸರಕುಗಳ ಮೇಲಿನ ಸುಂಕವಾದ ಕಸ್ಟಮ್ಸ್ ಸಂಗ್ರಹ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಗಣನೀಯವಾಗಿ ವೃದ್ಧಿಸಿದೆ. ಡಿಸೆಂಬರ್‌ನಲ್ಲಿ ಆದಾಯವು ಶೇ. 94ರಷ್ಟು ಏರಿಕೆ ಕಂಡು 16,157 ಕೋಟಿ ರೂ.ಗೆ ತಲುಪಿದ್ದರೆ, ನವೆಂಬರ್‌ನಲ್ಲಿ ಇದು ಶೇ. 43ರಷ್ಟು ಏರಿಕೆಯಾಗಿ 11,598 ಕೋಟಿ ರೂ.ಗೆ ತಲುಪಿದೆ.